ಪೋಷಕರ ಕಣ್ಮುಂದೆಯೇ ಭೀಮಾ ನದಿಗೆ ಹಾರಿ ಯುವತಿ ಆತ್ಮಹತ್ಯೆ

ಕಲಬುರಗಿ:ಅ.26: ಪೋಷಕರ ಕಣ್ಮುಂದೆಯೇ ಯುವತಿಯೋರ್ವಳು ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪೂರ್ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲ್ ಬಳಿ ಇರುವ ದೇವಣಗಾಂವ್ ಸೇತುವೆಯ ಪ್ರದೇಶದಲ್ಲಿ ವರದಿಯಾಗಿದೆ.
ಮೃತಳಿಗೆ ಮೂಲತ: ಧಾರವಾಡ್ ಜಿಲ್ಲೆಯ ನವಲಗುಂದ್ ಪಟ್ಟಣದ ನಿವಾಸಿ ಶ್ರೀವಾಲ ಕಬ್ಬಿನ್ (20) ಎಂದು ಗುರುತಿಸಲಾಗಿದೆ. ಶ್ರೀವಾಲಾಳು ತನ್ನ ಕುಟುಂಬದವರೊಂದಿಗೆ ತಾಲ್ಲೂಕಿನ ದೇವಲ್ ಗಾಣಗಾಪೂರದ ದತ್ತಾತ್ರೇಯ್ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ದೇವಣಗಾಂವ್ ಸೇತುವೆಯ ಬಳಿ ನದಿಯಲ್ಲಿ ನಾಣ್ಯ ಹಾಕಬೇಕು ಎಂದು ಹೇಳಿ ವಾಹನ ನಿಲ್ಲಿಸಿ, ವಾಹನದಿಂದ ಕೆಳಗಿಳಿದು ನಾಣ್ಯ ಎಸೆಯುವ ನೆಪದಲ್ಲಿ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಳು.
ಪೋಷಕರು ಕರುಳಿನ ಕುಡಿ ನದಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕಣ್ಣಾರೆ ಕಂಡು ಆಕ್ರಂದಿಸಿದರು. ಆತ್ಮಹತ್ಯೆಗೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಈ ಕುರಿತು ಆಲಮೇಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.