ಪೋಲೀಸ್ ಬಂದೋಬಸ್ತ್ ನಲ್ಲಿ ನಡೆದ ಸಂತೆ

ಹರಪನಹಳ್ಳಿ.ಮೇ.೨೬; ಪೋಲೀಸ್ ಉಪವಿಭಾಗದಿಂದ ಲಾಕ್ ಡೌನ್ ಆದಾಗಿನಿಂದ ಈವರೆಗೂ ಅನವಶ್ಯಕವಾಗಿ ರಸ್ತೆಗಿಳಿದ 1515 ವಾಹನಗಳಿಂದ 6.11 ಲಕ್ಷ ರು.ಗಳ ದಂಡ ವಸೂಲಾತಿ ಮಾಡಲಾಗಿದೆ.ಈ ಕುರಿತು ಮಾಹಿತಿ ನೀಡಿದ ಇಲ್ಲಿಯ ಡಿವೈಎಸ್ಪಿ ವಿ.ಎಸ್ .ಹಾಲಮೂರ್ತಿ ರಾವ್ ಅವರು ಲಾಕ್ ಢೌನ್ ಉಲ್ಲಘನೆ ಮಾಡಿರುವವರ ವಿರುದ್ದ ಹರಪನಹಳ್ಳಿ ತಾಲೂಕಲ್ಲಿ 36 ಪ್ರಕರಣಗಳು, ಹಡಗಲಿ ತಾಲೂಕಲ್ಲಿ 42 ಪ್ರಕರಣಗಳು, ಕೊಟ್ಟೂರು ತಾಲೂಕಲ್ಲಿ 21 ಹೀಗೆ ಹರಪನಹಳ್ಳಿ ಉಪವಿಭಾಗದಿಂದ ಒಟ್ಟು 99 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.ಮಾಸ್ಕ್ ಧರಿಸದ ಪ್ರಕರಣಗಳಲ್ಲಿ ಹರಪನಹಳ್ಳಿ ತಾಲೂಕಲ್ಲಿ 3316 ಪ್ರಕರಣಗಳಿಂದ 331600 ರು.ದಂಡ ವಸೂಲಿ, ಸಾಮಾಜಿಕ ಅಂತರ ಕಾಪಾಡದ 4 ಪ್ರಕರಣಗಳಿಂದ 8 ಸಾವಿರ ರು. ವಸೂಲಿ ಮಾಡಲಾಗಿದೆ.ಹಡಗಲಿ ತಾಲೂಕಿನಲ್ಲಿ 1684 ಪ್ರಕರಣಗಳಿಂದ 168400 ರು. ವಸೂಲಿ ಮಾಡಲಾಗಿದೆ. ಕೊಟ್ಟೂರು ತಾಲೂಕಿನಲ್ಲಿ 2197 ಪ್ರಕರಣಗಳಿಂದ 219700 ರು. ವಸೂಲಿ ಮಾಡಲಾಗಿದೆ ಹೀಗೆ ಹರಪನಹಳ್ಳಿ ಉಪವಿಭಾಗದಿಂದ 7197 ಪ್ರಕರಣಗಳಲ್ಲಿ 719700 ರು. ದಂಡ ವಸೂಲಿ ಮಾಡಲಾಗಿದೆ. ಲಾಕ್ ಢೌನ್ ಉಲ್ಲಂಘನೆ ಮಾಡಿ ಅನವಶ್ಯಕ ವಾಗಿ ಸಂಚರಿಸಿದ ವಾಹನಗಳ ಜಪ್ತು ಪಡಿಸಿಕೊಂಡ ವಿಚಾರದಲ್ಲಿ ಹರಪನಹಳ್ಳಿ ತಾಲೂಕಲ್ಲಿ 585 ವಾಹನಗಳ ಜಪ್ತು ಮಾಡಿ 235600 ರು. ವಸೂಲಿ ಮಾಡಲಾಗಿದೆ.ಹಡಗಲಿ ತಾಲೂಕಿನಲ್ಲಿ 680 ವಾಹನಗಳಿಂದ 276900 ರು.ಗಳನ್ನು ವಸೂಲಿ ಮಾಡಲಾಗಿದೆ.ಕೊಟ್ಟೂರು ತಾಲೂಕಿನಲ್ಲಿ 250 ವಾಹನಗಳಿಂದ 98500 ರು. ದಂಡ ವಸೂಲಿ ಮಾಡಲಾಗಿದೆ ಒಟ್ಟು ಉಪವಿಭಾಗದಿಂದ 1515 ವಾಹನಗಳ ಜಪ್ತಿನಿಂದ 6.11 ಲಕ್ಷ ರು.ವಸೂಲಿ ಆಗಿದೆ ಎಂದು÷ಅವರು ತಿಳಿಸಿದ್ದಾರೆ.ಐದು ದಿನಗಳ ನಂತರ ಹರಪನಹಳ್ಳಿ ಪಟ್ಟಣದ ಸ್ಡೇಡಿಯಂ ನಲ್ಲಿ ಪೋಲೀಸ್ ಬಂದೋಬಸ್ತ್ ಮದ್ಯೆ ಸಂತೆ  ಜರುಗಿತು.