ಪೋಲೀಸರು ದಾಳಿ: ಅಕ್ರಮ ಮರಳಿನ ಟ್ರ್ಯಾಕ್ಟರ್ ವಶ

ಸಿಂಧನೂರು.ನ.೧೧- ರಾಜ ದನವಿಲ್ಲದೆ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ಯಾಕ್ಟರಗಳನ್ನು ಪೋಲೀಸರು ದಾಳಿ ಮಾಡಿ ವಶಪಡಿಸಿಕೊಂಡು ಠಾಣೆಗೆ ತಂದಿದ್ದಾರೆ ಆದರೆ ಟ್ರ್ಯಾಕ್ಟರ್ ಚಾಲಕರು ಹಾಗು ಮಾಲೀಕರು ಟ್ರ್ಯಾಕ್ಟರ್‌ಗಳನ್ನು ಬಿಟ್ಟು ಪರಾರಿ ಯಾಗಿದ್ದಾರೆ ಎಂದು ಅಕ್ರಮ ಮರಳು ಸಾಗಾಣಿಕೆಯ ದಂದೆಕೋರರೆ ಪತ್ರಿಕೆ ಮಾಹಿತಿಯನ್ನು ನೀಡಿದ್ದಾರೆ.
ತಾಲ್ಲೂಕಿನ ಅಲಬನೂರ ಹಳ್ಳದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುವ ಖಚಿತ ಮಾಹಿತಿಯ ಮೇರೆಗೆ ಗ್ರಾಮೀಣ ಠಾಣೆಯ ಪಿಎಸ್‌ಐ ಯರಿಯಪ್ಪ ಹಾಗೂ ಶಿಬ್ಬಂದಿಗಳಾದ ಶೇಟಪ್ಪ ಇಂದು ಬೆಳಗಿನ ಜಾವ ದಾಳಿ ನಡೆಸಿದಾಗ ಪೊಲೀಸರನ್ನು ಕಂಡು ಚಾಲಕರು ಹಾಗೂ ಮಾಲೀಕರು ಹಳ್ಳದಲ್ಲಿ ಟಾಕ್ಟರಗಳನ್ನು ಬಿಟ್ಟು ಓಡಿಹೋಗಿದ್ದಾರೆ.
ಬೇರೆ ಟ್ರ್ಯಾಕ್ಟರ್ ಚಾಲಕರ ಸಹಾಯದಿಂದ ಪೋಲೀಸರು ಎರಡು ಟಾಕ್ಟರ ಗಳನ್ನು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಪೋಲೀಸರು ದಾಳಿ ನಡೆಸುವ ಮಾಹಿತಿ ತಿಳಿದ ಇನ್ನೂ ಕೆಲವು ಟಾಕ್ಟರ ಹಾಗೂ ಟಿಪ್ಪರ ಚಾಲಕರು ಹಾಗೂ ಮಾಲೀಕರು ಪೋಲೀಸರಿಗೆ ಕೈಗೆ ಸಿಗದೆ ಕೈಕೊಟ್ಟ ವಾಹನಗಳ ಸಮೇತ ಪರಾರಿ ಯಾಗಿದ್ದಾರೆ ಎನ್ನಲಾಗಿದೆ.
ಪೋಲೀಸರು ವಶಪಡಿಸಿಕೊಂಡ ಟಾಕ್ಟರಗಳು ಮಂಜು ಚವಾಣ ರೈತನಗರ ಕ್ಯಾಂಪ ಹಾಗೂ ಬಂಡೆಪ್ಪ ಅಲಿಯಾಸ್ ಮಲ್ಲಪ್ಪ ಎಂದು ತಿಳಿದು ಬಂದಿದೆ ಗ್ರಾಮೀಣ ಪೊಲೀಸ ಠಾಣೆಯ ಪಿಎಸ್‌ಐ ಯರೆಯಪ್ಪ ಪ್ರಕರಣ ದಾಖಲಿಸಿಕೊಂಡು ಚಾಲಕರು ಹಾಗೂ ಮಾಲೀಕರ ಬಂಧನಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಕ್ರಮ ಮರಳಿನ ಕಳ್ಳ ಮಂಜು ಚವಾಣ ಬಿಜೆಪಿಯ ರಾಜ್ಯ ಸಾಮಾಜಿಕ ಜಾಲತಾಣದ ಅಮರೇಶ ರೈತ ನಗರ ಕ್ಯಾಂಪ ಇವರ ಸಂಬಂದಿಯಾಗಿದ್ದಾನೆ ಬಿಜೆಪಿಯ ಕಾರ್ಯ ಕರ್ತನೆಂದು ಹೇಳಿಕೊಂಡು ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದಾನೆ. ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ರ್ಯಾಕ್ಟರ್‌ನ್ನು ಬಳಗಾನೂರ ಪೋಲೀಸ ಠಾಣೆಯ ಪಿಎಸ್‌ಐ ವೀರುಪಾಕ್ಷಪ್ಪ ಶೆಟ್ಟಿ ಹಾಗೂ ಸಿಬ್ಬಂದಿಗಳ ಜೊತೆಗೆ ಹೋಗಿ ದಾಳಿ ಮಾಡಿ ಟಾಕ್ಟರನ್ನು ವಶಪಡಿಸಿಕೊಂಡು ಠಾಣೆಗೆ ತಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಟ್ರ್ಯಾಕ್ಟರ್ ಚಾಲಕ ಸಿದ್ದಪ್ಪ ತಂದೆ ಶಿವಪ್ಪ ನ್ನು ಬಂಧಿಸಲಾಗಿದೆ ಟ್ರ್ಯಾಕ್ಟರ್ ಮಾಲಿಕ ಸಂಗಯ್ಯ ಸ್ವಾಮಿ ಹಾಲಾಪೂರ ಒಡಿಹೊಗಿದ್ದಾನೆ ಎಂದು ತಿಳಿದು ಬಂದಿದೆ.