ಪೋಲಿಸ ಠಾಣೆಯಲ್ಲಿ ಶಾಂತಿ ಸಭೆ

ಮುನವಳ್ಳಿ, ಮಾ21: ಪಟ್ಟಣದ ಪೊಲೀಸ ಠಾಣೆಯಲ್ಲಿ ಹೋಳಿ ಹಬ್ಬ ಹಾಗೂ ರಮಜಾನ್ ಆಚರನೆಯ ಸಲುವಾಗಿ ಶಾಂತಿ ಪಾಲನಾ ಸಭೆ ಮಂಗಳವಾರ ಸಂಜೆ ಜರುಗಿತು.
ಡಿ.ಎಸ್.ಪಿ ಎಂ.ಪಾಂಡುರಂಗಯ್ಯ ಮಾತನಾಡಿ ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ಶಾಂತಿ ಸುವ್ಯವಸ್ಥೆಗಳನ್ನು ಕಾಯ್ದುಕೊಂಡು ಸಹಬಾಳ್ವೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಹಬ್ಬಗಳನ್ನು ಯುವಕರು ಪ್ರತಿವರ್ಷದಂತೆ ಶಾಂತರಿತಿಯಿಂದ ಆಚರಿಸಬೇಕು ಜೊತೆಗೆ ಕಾನೂನನ್ನು ಪಾಲಿಸಬೇಕು ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಟ್ಟಣದ ಹಿರಿಯರು ನೋಡಿಕೊಳ್ಳಬೇಕು ಎಂದರು.
ಅಂಬರೀಷ ಯಲಿಗಾರ ಮಾತನಾಡಿ ಹಲವಾರು ವರ್ಷದ ಬೇಡಿಕೆಯಾದ ಹೊರಠಾಣೆಯನ್ನು ಮೇಲ್ದರ್ಜೆಗೇರಿಸಿ ಪೊಲೀಸ ಠಾಣೆಯನ್ನಾಗಿ ಪರಿವರ್ತಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಹಬ್ಬ ಹರಿದಿನಗಳನ್ನು ಶ್ರದ್ದಾಭಕ್ತಿಯಿಂದ ಆಚರಿಸಬೇಕು ಎಂದರು.
ಎ.ಪಿ.ಎಮ್.ಸಿ ಅಧ್ಯಕ್ಷ ಚಂದ್ರು ಜಂಬ್ರಿ, ಡಾ. ಬಸಿರಹಮ್ಮದ ಬೈರಕದಾರ, ಇಸ್ಮಾಯಿಲ ವಟ್ನಾಳ ಮಾತನಾಡಿ ಬಣ್ಣದ ಓಕೂಳಿಯನ್ನು ಪ್ರತಿವರ್ಷವು ನಡೆಯುವಂತೆ ಶಾಂತಿಯುತವಾಗಿ ನಡೆಯಲು ಸಹಕಾರ ನೀಡುತ್ತೆವೆ ಹಾಗೂ ಮೊದಲಿನಿಂದಲೂ ಪಟ್ಟಣದ ಜನತೆ ಶಾಂತಿ ಪ್ರಿಯರು ಹೋಳಿಹಬ್ಬವನ್ನು ಎಲ್ಲ ಸಮಾಜದವರು ಸೇರಿ ಪ್ರತಿವರ್ಷದಂತೆ ಶಾಂತಿಯುತವಾಗಿ ಆಚರಿಸುತ್ತೇವೆ ಎಂದರು.
ಸವದತ್ತಿ ಸಿ.ಪಿ.ಐ, ಸುರೇಶ ಬಂಡಗುಂಬಳ, ಪಿ.ಎಸ್.ಐ ಎಂ. ಪಟ್ಟಣಶೆಟ್ಟಿ ಮುರಗೋಡ, ಪಿಎಸ್‍ಐ ಈರಯ್ಯ ಮಟಪತಿ, ಪಟ್ಟಣದ ಹೊರಠಾಣೆಯ ಎಎಸ್‍ಐ ಇನ್.ವಿ.ಧಾರವಾಡ, ಪ್ರಕಾಶ ಕಾಮನ್ನವರ, ಡಿ.ಡಿ.ಟೋಪೋಜಿ, ರವಿ ಹನಸಿ, ನಾಗಪ್ಪ ಕಾಮಣ್ಣವರ, ಮೀರಾಸಾಬ ವಟ್ನಾಳ, ಹುಸೇನ ಪಠಾಣ, ಸರದಾರ ಕೊಳಚಿ, ಪೂಲಿಸ ಸಿಬ್ಬಂದಿ, ಪುರಸಭೆ ಅಧಿಕಾರಿಗಳು ಸಿಬ್ಬಂದಿವರ್ಗ, ಯುವಕರು, ಹಾಗೂ ಸಾರ್ವ ಜನಿಕರು ಉಪಸ್ಥಿತರಿದ್ದರು.