ಪೋಲಿಸ ಕಾರ್ಯಚರಣೆ 17 ಜನ ಬೈಕ ಕಳ್ಳರ ಬಂಧನ

ಔರಾದ :ಮೇ.2: ಕಳೆದ ಎರಡು ತಿಂಗಳಿಂದ ಔರಾದ ಪಟ್ಟಣದಲ್ಲಿ ಹಲವಾರು ದ್ವಿಚಕ್ರ ವಾಹನಗಳ ಕಳುವು ಆಗುತ್ತಿದ್ದು ಈ ಸಂಭಂದವಾಗಿ ಔರಾದ ಪೊಲೀಸ್ ಠಾಣೆ ಯಲ್ಲಿ ಅಪರಾದ ಸಂಖ್ಯೆ 20,30,32,39,50,51,57 ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣಗಳು ದಾಖಲಾಗಿದ್ದು ಸದರಿ ಈ ಎಲ್ಲಾ ಪ್ರಕರಣಗಳ ದ್ವಿಚಕ್ರ ವಾಹನ ಸಹಿತ ಕಳ್ಳರನ್ನು ಹಿಡಿಯುವಲ್ಲಿ ಔರಾದ ಪೋಲಿಸ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಪೋಲಿಸ್ ಅಧಿಕ್ಷಕರು ನಾಗೇಶ ಡಿ ಎಲ್,ಹೇಚ್ಚುವರಿ ಪೊಲೀಸ್ ಅಧಿಕ್ಷಕರು ಗೋಪಾಲ್ ಬ್ಯಾಕೋಡ,ಭಾಲ್ಕಿ ಪೊಲೀಸ್ ಉಪಾಧಿಕ್ಷರಾದ ಡಾ ದೇವರಾಜ ಇವರ ಮಾರ್ಗದರ್ಶನ ದಲ್ಲಿ ಔರಾದ ಸಿ ಪಿ ಐ ರವಿಂದ್ರನಾಥ , ಪಿ ಎಸ್ ಐ ಮಂಜನಗೌಡ ಪಾಟೀಲ್ ಹಾಗೂ ಕಾರ್ಯ ಶೋಧ ಶ್ರೀ ಮಾಧವ ಎ ಎಸ್ ಐ,ನರಸಾರೆಡ್ಡಿ ,ಶ್ರೀ ನಿವಾಸ ,ಶಿವಯೊಗ್ಯಪ್ಪಾ,ಅನಿಲರೆಡ್ಡಿ,ಇವರ ಒಂದು ವಿಶೆಷ ತಂಡ ರಚಿಸಿ ಸದರಿ ಪ್ರಕರಣದಲ್ಲಿ ಕಳುವಾದ ದ್ವಿಚಕ್ರ ಆರೊಪಿಗಳನ್ನು ಹಿಡಿಯುವಲ್ಲಿ ಔರಾದ ಪೊಲೀಸ್ ಠಾಣೆ ಸಿಬಂದಿ ಯಶಸ್ವಿಯಾಗಿದ್ದಾರೆ. ಆರೊಪಿಗಳಾದ : ಶಿವಾಜಿ ತಂದೆ ನಾಮದೆವ ,ವ.22, ಶಿವಶರಣಯ್ಯಾ ವ.26,ಇವರು ಔರಾದ ತಾಲೂಕಿನವರೆ ಆಗಿದ್ದು .ಹೀಗೆ ಮೇಲ್ಕಂಡ ನಾಲ್ಕು ಜನ ಆರೊಪಿತರನ್ನು ದಸ್ತಗಿರಿ ಮಾಡಿ ಅವರಿಂದ ಒಟ್ಡು 17 ದ್ವಿಚಕ್ರ ವಾಹನಗಳು ಅಂಕಿ ಅಂಶ 7,00,000 /- ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ಸ್ವಾಧೀನಪಡಿಸಿಕೊಂಡು ತಂಡಕ್ಕೆ ವಿಷೇಶವಾಗಿ ಕರ್ತವ್ಯ ನಿರ್ವಹಿಸಿ ಪ್ರಕರಣಗಳನ್ನು ಬೇದಿಸಿದ್ದು ಇವರ ಕಾರ್ಯವು ಶ್ಲಾಘನೀಯ ಹಾಗೂ ಈ ತಂಡಕ್ಕೆ ಸೂಕ್ತ ಬಹುಮಾನ ನೀಡಲಾಗುವದು ಎಂದು ಪೊಲೀಸ್ ಅಧಿಕ್ಷಕರು ಬೀದರ ತಿಳಿಸಿದ್ದಾರೆ.