ಪೋಲಿಸ್ ಸಿಬ್ಬಂದಿಗೆ ಗುಳಿಗೆ ಕೊಡುಗೆ

ಬೀದರ:ಜೂ.4: ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಜಿಲ್ಲೆಯ ಪೊಲೀಸ್ ಸಿಬ್ಬಂದಿಗೆ ಚೆನ್ನೈ ಮೂಲದ ಬಯೊ ಮೈಕ್ರಾನ್ ಔಷಧ ಕಂಪನಿಯು ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಳಿಗೆಗಳನ್ನು ಕೊಡುಗೆಯಾಗಿ ನೀಡಿದೆ.

ಕಂಪನಿಯ ಬೀದರ್-ಕಲಬುರ್ಗಿ ಮಾರುಕಟ್ಟೆ ವ್ಯವಸ್ಥಾಪಕ ಜಗನ್ನಾಥಯ್ಯ ಸ್ವಾಮಿ ಅವರು ನಗರದಲ್ಲಿ ಗುರುವಾರ ಪೊಲೀಸ್ ಸಿಬ್ಬಂದಿಗೆ ವಿತರಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಅವರಿಗೆ ತಲಾ ಒಂದು ಸಾವಿರ ಒರೊವಿಟ್(Orovit) ಹಾಗೂ ವಿಂಡೋಸ್ (windose) ಗುಳಿಗೆಗಳನ್ನು ಹಸ್ತಾಂತರಿಸಿದರು.

ಪೊಲೀಸ್ ಸಿಬ್ಬಂದಿ ಕೋವಿಡ್‍ನಿಂದ ಜನರ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾಮಾಜಿಕ ಚಟುವಟಿಕೆಯ ಭಾಗವಾಗಿ ಕಂಪನಿಯು ಅವರಿಗೆ ಗುಳಿಗೆಳನ್ನು ದೇಣಿಗೆ ರೂಪದಲ್ಲಿ ಕೊಟ್ಟಿದೆ ಎಂದು ಅವರು ಹೇಳಿದರು.ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿ ಸಿಬ್ಬಂದಿಗೂ ತಲಾ 10 ಗುಳಿಗೆಗಳನ್ನು ವಿತರಿಸಲಿದ್ದಾರೆ ಎಂದು ತಿಳಿಸಿದರು.
ಕಂಪನಿಯ ಬೀದರ್ ಪ್ರತಿನಿಧಿ ಪ್ರಭು ರತನಗೊಂಡ, ಪೊಲೀಸ್ ಇಲಾಖೆಯ ಅಧಿಕಾರಿಗಳು ಇದ್ದರು.