ಪೋಲಿಸ್, ಪುರಸಭೆ ಇಲಾಖೆಯಿಂದ ಜಾಹೀರಾತು ತೆರವು

ಮಾನ್ವಿ,ಮಾ.೩೦- ಪಟ್ಟಣದಲ್ಲಿರುವ ಬೀದಿ ಬದಿಯಲ್ಲಿ ಅಂಟಿಸಿರುವ ರಾಜಕೀಯಕ್ಕೆ ಸಂಬಂಧಪಟ್ಟ ಜಾಹೀರಾತು ಪೋಸ್ಟರಗಳನ್ನು ಪೋಲಿಸ್ ಅಧಿಕಾರಿ ವೀರಭದ್ರಯ್ಯ ಸ್ವಾಮಿ ಹಿರೇಮಠ ಹಾಗೂ ಪುರಸಭೆ ಅಧಿಕಾರಿಗಳ ಇವರ ನೇತೃತ್ವದಲ್ಲಿ ತೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಬಸವ ವೃತ್ತ, ವಾಲ್ಮೀಕಿ ವೃತ್ತ, ತಾಲೂಕ ದಂಡಧಿಕಾರಿಗಳ ಕಛೇರಿಯ ಮುಂಭಾಗ, ಸೇರಿದಂತೆ ಪ್ರಮುಖವಾದ ಬೀದಿ ಬದಿಯಲ್ಲಿ ಅಂಟಿಸಿರುವ ರಾಜಕೀಯ ಜಾಹೀರಾತುಗಳಿಗೆ ಬಣ್ಣ ಬಳಿಸುವ ಮೂಲಕ ತೆರವುಗೊಳಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸಿಬ್ಬಂದಿಗಳು, ಪೋಲಿಸ್ ಸಿಬ್ಬಂದಿಗಳು ಇದ್ದರು.