ಪೋಲಿಸ್ ಇನ್ಸ್ ಪೆಕ್ಟರ್  ವಿರುದ್ಧ ವಕೀಲರ ಸಂಘದಿಂದ ಪ್ರತಿಭಟನೆ

ಸಂಜೆವಾಣಿ ವಾರ್ತೆ

ಜಗಳೂರು.ನ.೨೧ -: ವಕೀಲರಾದ ಕೊಟ್ರೇಶ್ ಅವರಿಗೆ ಪೋಲೀಸ್ ಠಾಣೆಯಲ್ಲಿ ಕಕ್ಷಿದಾರರ ಸಮ್ಮುಖದಲ್ಲಿ ಪೋಲೀಸ್ ನಿರೀಕ್ಷಕರಾದ ಶ್ರೀನಿವಾಸ್‌ರಾವ್ ವಕೀಲರ ವೃತ್ತಿಗೆ ಅಗೌರವ ಮಾತುಗಳನ್ನು ಆಡುವ ಮೂಲಕ ದಬ್ಬಾಳಿಕೆ ನಡೆಸಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಗಳೂರು ನ್ಯಾಯಾ ವಾಧಿಗಳ ಸಂಘದ ನೇತೃತ್ವದಲ್ಲಿ ವಕೀಲರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿದ ನಂತರ ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ಇ.ಓಂ ಕಾರೇಶ್ವರ ಮಾತನಾಡಿ, ನ್ಯಾಯಾವಾಧಿ ಗಳ ಸಂಘದ ಸದಸ್ಯರಾದ ಕೊಟ್ರೇಶ್ ವಕೀಲರು ನ.17 ರಂದು ಕಕ್ಷಿದಾರರಾದ ಬಸವರಾಜಪ್ಪ ,ತಿಪ್ಪೇಸ್ವಾಮಿ ದಿಬ್ಬದಹಟ್ಟಿ ಗ್ರಾಮ ಇವರ ವಿಚಾರ ಸಂಬಂಧಿಸಿದಂತೆ ಪೋಲೀಸ್ ಠಾಣೆಯಲ್ಲಿ ಇವರ ಎದುರಲ್ಲೇ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್ ವಕೀಲರ ವೃತ್ತಿಗೆ ಅಗೌರವ ಮಾತುಗಳನ್ನು ಆಡುವ ಮೂಲಕ ದಬ್ಬಾಳಿಕೆ ನಡೆಸಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳುವಂತೆ ಒತ್ತಾಯಿಸಿದರು.ವಕೀಲರಾದ ಸಣ್ಣ ಓಬಪ್ಪ ಮಾತನಾಡಿ ವಕೀಲರಾದ ಬಿ.ಕೊಟ್ರೇಶ್ ಪೋಲೀಸ್ ಠಾಣೆಗೆ ಕಕ್ಷಿದಾರರೊಂದಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ವಕೀಲರಿಗೆ ಜನರೆದು ರಲ್ಲೇ ದಬ್ಬಾಳಿಕೆ ಮಾಡಿ ಕಳುಹಿಸಿರುವುದು ಖಂಡನೀಯ. ಇವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯದ್ಯಂತ ಇವರ ವಿರುದ್ದ ಹೋರಾಟ ಮಾಡಲಾಗುವುದೆಂದು ಅವರು ಎಚ್ಚರಿಸಿದರು . ಈ ಸಂದರ್ಭದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯ ದರ್ಶಿ ಕೆ.ವಿ ರುದ್ರೇಶ್ ಸಂಘದ ಪದಾಧಿಕಾರಿಗಳು ವಕೀಲ ರುಗಳಾದ ಮರೇನಹಳ್ಳಿ ಬಸವರಾಜ್, ತಿಪ್ಪೇಸ್ವಾಮಿ ಶಿವಪ್ರಕಾಶ್ ಕೊಟ್ರೇಶ್ ,ಅಶೋಕ,ಹಾಲಪ್ಪ ,ಎ.ಸಿ. ತಿಪ್ಪೇಸ್ವಾಮಿ ಎನ್.ಜೆ.ತಿಪ್ಪೇಸ್ವಾಮಿ, ದೊಡ್ಡ ಬೋರಯ್ಯ, ಶಿವಕುಮಾರ್, ಕುಂಬಾರ್, ಹೆಚ್.ಹನುಮಂತಪ್ಪ, ಶಿವಮೂರ್ತಿ, ಅರಣ್‌ ಕುಮಾರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.