ಪೋಲಿಸರು ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು : ಎಸ್ಪಿ ಡಾ. ಸಂಜೀವ ಪಾಟೀಲ

ಅಥಣಿ : ಜು.3:ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಅನೇಕ ಒತ್ತಡಗಳ ಮಧ್ಯೆ ಕಾರ್ಯನಿರ್ವಹಿಸುವ ಏಕೈಕ ವೃತ್ತಿ ಎಂದರೆ ಅದು ಪೆÇಲೀಸ್ ವೃತ್ತಿ. ಪೆÇಲೀಸರು ತಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಬೆಳಗಾವಿ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಹೇಳಿದರು.

ಅವರು ರವಿವಾರ ಬೆಳಗಾವಿ ಜಿಲ್ಲಾ ಪೆÇಲೀಸ, ತಾಲೂಕಾ ಆರೋಗ್ಯ ಇಲಾಖೆ, ಸ್ಪೋಟ್ರ್ಸ್ ಆಂಡ್ ಸೋಷಿಯಲ್ ಕ್ಲಬ್ ಹಾಗೂ ಮಿರಜದ ಯುನಿಕ್ ಇನ್ಸ್ಟಿಟ್ಯೂಟ್ ಆಪ್ ಕ್ರಿಟಿಕಲ್ಲ ಕೇರ ವೈದ್ಯರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೆÇಲೀಸರು ಮತ್ತು ಅವರ ಕುಟುಂಬದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪೆÇಲೀಸರು ದಿನದ 24 ಗಂಟೆ ಬರೀ ಕರ್ತವ್ಯ ಎಂದು ಹೇಳಿಕೊಂಡು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ನಿಮ್ಮನ್ನು ನಂಬಿಕೊಂಡಿರುವ ನಿಮ್ಮ ಕುಟುಂಬ ಮತ್ತು ಮಕ್ಕಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟು, ಅವರ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕೆಂದು ಸಲಹೆ ನೀಡಿದರು.
ಮಿರಜ ತಜ್ಣ ವೈಧ್ಯರು ತಮ್ಮ ವಾರದ ರಜೆ ಬಿಟ್ಟು ನಮ್ಮ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಉಚಿತ ತಪಾಸಣೆ ನಡೆಸುತ್ತಿರುವುದಕ್ಕೆ ಇಲಾಖೆಯಿಂದ ಅಭಿನಂದನೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯುವ ನಾಯಕ ಚಿದಾನಂದ ಸವದಿ ಮಾತನಾಡಿ ಮನುಷ್ಯನಿಗೆ ಜೀವದಲ್ಲಿ ಆರೋಗ್ಯ ಸಂಪತ್ತು ಇದ್ದರೆ ಏನೆಲ್ಲ ಸಾಧನೆ ಮಾಡಬಹುದು. ಅದಕ್ಕಾಗಿ ಪ್ರತಿಯೊಬ್ಬರು ಒಳ್ಳೆಯ ಆರೋಗ್ಯವನ್ನು ಕಾಪಡಿಕೊಳ್ಳಬೇಕು. ಒಂದು ವೇಳೆ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಕಂಡು ಬಂದಾಗ ನಿರ್ಲಕ್ಷ ವಹಿಸದೆ ತಜ್ಞ ವೈದ್ಯರನ್ನು ಭೇಟಿ ಮಾಡಬೇಕು ಎಂದು ಹೇಳಿದ ಅವರು ಬರುವ ಅಗಸ್ಟ ತಿಂಗಳಲ್ಲಿ ಇದೆ ರೀತಿ ಅಥಣಿ, ಕಾಗವಾಡ, ರಾಯಭಾಗ ಮತ್ತು ಕುಡುಚಿ ನಗರಗಳಲ್ಲಿ ಎಲ್ಲ ಸರಕಾರಿ ನೌಕರರಿಗೆ ಉಚಿತ ಮೇಘಾ ಆರೋಗ್ಯ ಮೇಳವನ್ನು ಪೆÇಲೀಸ ಇಲಾಖೆ ಸಹಯೋಗದಲ್ಲಿ ಮಾಡೋಣ. ಇದಕ್ಕೆ ತಮ್ಮ ತನು, ಮನ, ಧನದ ಸೇವೆಯನ್ನು ಒದಗಿಸುತ್ತೇವೆ ಎಂದು ಹೇಳಿದರು.
ಮಿರಜ ತಜ್ಣ ವೈಧ್ಯ ಡಾ.ಸೋಮಶೇಖರ ಪಾಟೀಲ ಮಾತನಾಡಿ ಪೆÇಲೀಸರಿಗೂ ಮತ್ತು ವೈದ್ಯರಿಗೂ ಅವಿನಾಭಾವ ಸಂಬಂಧವಿದೆ. ಸದಾ ಒತ್ತಡದಲ್ಲಿ ಕೆಲಸ ಮಾಡುವ ನಮ್ಮ ಪೆÇಲೀಸರು ತಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳಷ್ಟು ಅಗತ್ಯವಿದೆ. ತಮ್ಮ ಆರೋಗ್ಯದಲ್ಲಿ ಏನಾದರೂ ಸಮಸ್ಯೆಗಳು ಕಂಡು ಬಂದಾಗ ವೈದ್ಯರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕೆಂದು ಸಲಹೆ ನೀಡಿದರು.
ಅಥಣಿ ತಾಲೂಕಾ ವೈಧ್ಯಾಧಿಕಾರಿ ಬಸಗೌಡ ಕಾಗೆ ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿ.ಪಿ.ಐ. ರವಿಂದ್ರ ನಾಯ್ಕೋಡಿ, ಅಥಣಿ ಪಿ.ಎಸ್.ಐ. ಶಿವಶಂಕರ ಮುಕರಿ ಮಾತನಾಡಿದರು.
ಈ ವೇಳೆ ಮಿರಜ ಪಿಎ??? ಅಕೀಬ್ ಕಾಜಿ ಉಪಸ್ಥಿತರಿದ್ದರು,
ಅಥಣಿ ಮತ್ತು ರಾಯಭಾಗ, ಕಾಗವಾಡ, ಕುಡಚಿ ಪೆÇಲೀಸ್ ಠಾಣೆಯ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಜರುಗಿತು.ಈ ವೇಳೆ ಮಿರಜದ ಪ್ರಸಿದ್ಧ ತಜ್ಣ ವೈದ್ಯರಾದ ವ್ಹಿ.ಎಸ್.ಪರಮಶೆಟ್ಟಿ, ಅಮೀತ ಜೋಶಿ, ಅಮೀತ ಗಾಡವೆ, ಡಾ.ಪ್ರಾಣಿ, ಡಾ.ರಾಹುಲ ಗೋಸಾವಿ, ಡಾ.ಅವಿನಾಶ ಪಾಟೀಲ, ಡಾ. ಸೋಮಶೇಖರ ಪಾಟೀಲ, ಡಾ.ಸಿ.ಎ.ಸಂಕ್ರಟ್ಟಿ, ಡಾ.ಆನಂದ ಗುಂಜಿಗಾವಿ, ಡಾ.ವಿಶ್ವನಾಥ ಮಮದಾಪೂರ, ಡಾ. ಆನಂದ ಕುಲಕರ್ಣಿ, ಡಾ.ಎಸ್.ಎಸ್.ಗುಂಜಿಗಾoವಿ, ಡಾ. ಸಿ.ಆರ್.ಮೇತ್ರಿ, ಡಾ.ಎಚ್.ಬಿ. ಕಲಮಡಿ, ಡಾ. ರಮೇಶ ಹುಲಕುಂದ, ಡಾ.ಗುರಸಿದ್ದಪ್ಪ ಉಪಸ್ಥಿತರಿದ್ದರು.