ಪೋಲಿಸರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಕಿಟ್ ವಿತರಣೆ

ಮುದ್ದೇಬಿಹಾಳ;ಮೇ.4: ಆರಕ್ಷಕರು ಕರೋನದ ಆರಂಭವಾದಾಗನಿಂದ ಜನರ ಮಧ್ಯೆ ಇದ್ದು ಪ್ರಾಮಾಣಿಕವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ,ಬಿಸಿಲಿನಲ್ಲಿ ನಿಂತು ಜನರನ್ನು ನಿಯಂತ್ರಿಸುವ ಕೆಲಸವನ್ನು ಮಾಡುವ ಆರಕ್ಷಕರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಕಿಟ್ ಗಳನ್ನು ಶಾಸಕ ಎ ಎಸ್ ಪಾಟೀಲ್ ಅವರ ನಿರ್ದೇಶನದಂತೆ ನೀಡಲಾಗುತ್ತಿದೆ ಎಂದು ಸಮಾಜ ಸೇವಕಿ ಮಹಾದೇವಿ ಪಾಟೀಲ(ನಡಹಳ್ಳಿ) ಹೇಳಿದರು.

ಪಟ್ಟಣದ ಇಲ್ಲಿನ ಶಾಸಕ ಎ ಎಸ್ ಪಾಟೀಲ್ ( ನಡಹಳ್ಳಿ) ಕುಟುಂಬದಿಂದ ಸಮಾಜ ಸೇವಕಿ ಮಹಾದೇವಿ ಪಾಟೀಲ(ನಡಹಳ್ಳಿ) ಹಾಗೂ ಪುತ್ರ ಭರತ್ ಪಾಟೀಲ(ನಡಹಳ್ಳಿ) ಅವರು ಸೋಮವಾರ ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಕೋರೊನಾ ಮುಂಜಾಗೃತವಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೌಷ್ಠಿಕಾಂಶಯುಳ್ಳ ಆಹಾರ ದಾನ್ಯಗಳ ಗಳನ್ನು ಪಿಎಎಸೈ ಎಂಬಿ ಬಿರಾದಾರ ಅವರಿಗೆ ಹಸ್ತಾಂತರಿಸಿದರು.

.ಜನರು ಪೂಲೀಸರು ನಮ್ಮನ್ನು ಹೊಡೆಯುತ್ತಾರೆಂದು ತಪ್ಪು ಭಾವನೆ ಹೊಂದಿದ್ದಾರೆ ಆದರೆ ಪೂಲೀಸರು ನಮ್ಮ ಆರೋಗ್ಯದ ನಮ್ಮ ಜೀವನ ಉಳಿಸಲು ಪ್ರಾಮಾಣಿಕ ತಮ್ಮ ಕರ್ತವ್ಯ ಮಾಡುತ್ತಿದ್ದಾರೆ ಪೂಲೀಸರಿಗೆ ನಾವುಗಳು ಸಹ ಸಹಕಾರ ನೀಡಬೇಕು ಮತ್ತು ಅನಗತ್ಯ ಎಲ್ಲೆಂದರಲ್ಲಿ ಸಂಚಾರ ಮಾಡದೇ ಕೆಲವು ದಿನಗಳವರೆಗೆ ಮನೇಯಲ್ಲಿಯೇ ಇರಿ.
ಸಾರ್ವಜನಿಕರು ಅನವಶ್ಯಕವಾಗಿ ಆಚೆ ತಿರುಗಾಡಬಾರದು ನಿತ್ಯ ತರಕಾರಿ ಖರೀದಿಸಲು ಬರದೆ ಎರಡು ದಿನಕ್ಕೆ ಒಮ್ಮೆ ತರಕಾರಿ ತೆಗೆದುಕೊಳ್ಳಿ ,ತರಕಾರಿ ಇತ್ಯಾದಿ ಖರೀದಿಸಲು ಒಬ್ಬರೆ ಬನ್ನಿ, 130 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಜನರನ್ನು ಸರಕಾರ ಹೇಗೆ ನಿಯಂತ್ರಣ ಮಾಡಲು ಸಾಧ್ಯ? ಜನರು ಸರಕಾರ ಮತ್ತು ಪೂಲೀಸರನ್ನು ಮೊದಲಿಸುವುದು ಬಿಡಬೇಕು ನಾವು ನಮ್ಮ ಜವಾಬ್ದಾರಿ ಅರಿತು ಸರಕಾರದ ಮಾರ್ಗಸೂಚಿಗಳನ್ನು ಚಾಚು ತಪ್ಪದೇ ಎಲ್ಲರೂ ಪಾಲಿಸಬೇಕಿದೆ ಎಂದರು

ಈ ಸಂದರ್ಭದಲ್ಲಿ ಶಾಸಕರ ಪುತ್ರ ಭರತ ಪಾಟೀಲ್( ನಡಹಳ್ಳಿ) ಪಿಎಸೈ ಎಂ.ಬಿ ಬಿರಾದಾರ, ಬಿಜೆಪಿ ಮಂಡಲ ಅಧ್ಯಕ್ಷ ಪರಶುರಾಮ ಪವಾರ ಮಾತನಾಡಿದರು.
ಶೇಂಗಾ, ಮೊಳಕೆ ಒಡೆದ ಹೆಸರು ಕಾಳು ,ಕಡಲೆ,ಹಾಗೂ ಬೇಯಿಸಿದ ಮೊಟ್ಟೆ ಬಾಳೆಹಣ್ಣು ಕುಡಿಯಲು ನೀರಿನ ಬಾಟಲ್‍ನ್ನು ವಿತರಿಸಲಾಗುತ್ತಿದೆ, ಎಲ್ಲರೂ ಭಯಂಕರ ಈ ಕೋರೊನಾ ಎರಡನೆ ಅಲೇಯಲ್ಲಿ ಎಚ್ಚರ ತಪ್ಪದೇ ಹೆಜ್ಜೆ ಇಡಬೇಕಿದೆ ಅಂದಾಗ ಮಾತ್ರ ನಾವು ನಮ್ಮ ಜೀವವನ್ನು ರಕ್ಷೀಸಿಕೊಳ್ಳುಲು ಸಾಧ್ಯ ಎಂದರು. ಪಿಎಸೈ ಎಂ.ಬಿ ಬಿರಾದಾರ ಕ್ರೈಂ ಪಿಎಸೈ ಎಂ.ಬಿ ಗುಜನಾಳ ಅವರಿಗೆ ಹಾಗೂ ಸಿಬ್ಬಂದಿಗಳಾದ ಎಎಸೈ ಟಕ್ಕಳಕಿ, ಪಿ.ಎ.ಪಾಟೀಲ್, ಎಸ್ ಬಿ ಬಿಸನಾಳ, ಆರ್ ಎಂ ಚಿತ್ತರಗಿ,ವಿರೇಶ ಹಾಲಗಂಗಾಧರಮಠ, ಶಾಂತಗೌಡ ಬನ್ನಟ್ಟಿ,ಚಂದ್ರಶೇಖರ ಭಂಗಿ,ಎಂ.ಎಂ.ಮಠಪತಿ,ಅವರಿಗೆ ನೀಡಿದರು

ಪುರಸಭೆ ನಾಮನಿರ್ದೇಶಿತ ಸದಸ್ಯ ರಾಜಶೇಖರ ಹೋಳಿ,ಸಂಗಮ್ಮ ದೇವರಳ್ಳಿ, ಬಸಯ್ಯ ನಂದಿಕೇಶ್ವರಮಠ ಉಪಸ್ಥಿತರಿದ್ದರು