ಪೋಲಿಸರಿಗೆ ಆರೋಗ್ಯದ ತಪಾಸಣೆ

 
ದಾವಣಗೆರೆ.ಡಿ.೬;  ಜಿಲ್ಲಾ ಪೊಲೀಸ್ ಎಸ್ ಎಸ್ ಐಎಂಎಸ್- ಸ್ಪರ್ಶ ಆಸ್ಪತ್ರೆ ಹಾಗೂ ದಾವಣಗೆರೆ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ದಾವಣಗೆರೆ ಡಿಎಆರ್ ಕಛೇರಿಯ ಆವರಣದಲ್ಲಿನ  ಸಾಂಸ್ಕೃತಿಕ ಭವನದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೀಲು-ಮೂಳೆ ಸಮಸ್ಯೆಗಳಿಗೆ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ  ರಾಜೀವ್ ಎಂ ಅವರು ತಪಾಸಣಾ ಶಿಬಿರವನ್ನು ಉದ್ಘಾಟಿಸಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಈ ಕೀಲು ಮೂಳೆ ಸಮಸ್ಯೆಗಳಿಗೆ ಉಚಿತ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಮೂಲಕ ಶಿಬಿರದ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು.ಸುಮಾರು 200 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ – ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಸದಸ್ಯರು ಈ ಶಿಬಿರದಲ್ಲಿ ಕೀಲು ಮೂಳೆ ಸಮಸ್ಯೆಗಳ ತಪಾಸಣೆ ಮಾಡಿಸಿಕೊಂಡಿರುತ್ತಾರೆ.ಶಿಬಿರದಲ್ಲಿ ಡಿಎಆರ್ ಡಿವೈಎಸ್ಪಿ  ಪಿ.ಬಿ.ಪ್ರಕಾಶ್,  ಚನ್ನಪ್ಪ ಪೂಜಾರ್ ,ಆಸ್ಪತ್ರೆಯ ವೈದ್ಯರುಗಳಾದ ಡಾ.ಕಿರಣ್ ಜಿ.ಯು, ಡಾ.ಶಶಿಧರ್, ಕಿರಿಯ ಆಡಳಿತಾಧಿಕಾರಿಯಾದ  ನಾಗರಾಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.