ಪೋಲಿಯೋ ಮುಕ್ತ ಭಾರತ ನಮ್ಮೆಲ್ಲರ ಗುರಿಯಾಗಲಿ


,ಸಂಜೆವಾಣಿ ವಾರ್ತೆ
ಸಂಡೂರು : ಮಾ: 5: ಪೋಲಿಯೋ ಮುಕ್ತ ಭಾರತವನ್ನಾಗಿಸಿ ಅದು ಮತ್ತೆ ದೇಶಕ್ಕೆ ಅಂಟಿಕೊಳ್ಳಬಾರದು ಎನ್ನುವ ಗುರಿಯೊಂದಿಗೆ ಆರೋಗ್ಯ ಇಲಾಖೆ ಪ್ರತಿ ಮನೆಯ ಮಗುವಿಗೂ ಸಹ ಉಚಿತ ಪೋಲಿಯೋ ಹನಿ ಹಾಕುತ್ತಿದ್ದು ಸಾರ್ವಜನಿಕರು ಅದರ ಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು  ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.
ಅವರು ಇಂದು ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಪೋಲಿಯೋ ಲಸಿಕೆ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂಗವಿಕಲತೆ ಉಂಟಾಗಬಾರದು ಆರೋಗ್ಯವಂತ ಮಗುಬೇಕೆಂದರೆ ಪೋಲಿಯೋ ಹನಿಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಿ ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ. ರಾಮಶೆಟ್ಟಿ ಮಾತನಾಡಿ ಹುಟ್ಟಿನಿಂದ 05 ಐದು ವರ್ಷದ ಮಕ್ಕಳು ಈ ಹಿಂದೆ ಎಷ್ಟೋ ಸಾರಿ ಪೋಲಿಯೋ ಹನಿಯನ್ನು ಹಾಕಿದ ಪರಿಣಾಮ ಅಂಗವಿಕಲತೆ ಉಂಟಾಗಿದೆ ಎನ್ನುತ್ತಿದ್ದರು, ಅದರೆ ಅದು ಬೇರೆಯದೇ ಕಾರಣಕ್ಕೆ ಅಗಿರುವಂತಹದ್ದು, ಯಾವುದೇ ರೀತಿಯ ಮೌಢ್ಯತೆಯನ್ನು ಹೊಂದದೆ ಕಡ್ಡಾಯವಾಗಿ ಹನಿಯನ್ನು ಹಾಕಿಸಬೇಕು, ಈಗಾಗಲೇ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಪಕ್ಕದ ರಾಷ್ಟ್ರ ಪಾಕಿಸ್ತಾನದಲ್ಲಿ ಇದ್ದು ಅದು ನಮಗೆ ವಿಸ್ತರಿಸುವ ನಿಟ್ಟಿನಲ್ಲಿ ತಡೆಯಲು ಕಾರ್ಯಕ್ರಮ ಮುಂದುವರೆದಿದ್ದು ಲಸಿಕೆ ಹಾಕಿಸಿಕೊಳ್ಳಿ ಪೋಲಿಯೋ ತಡೆಯಿರಿ ಅಂಗವಿಕಲತೆಯಿಂದ ಮಕ್ಕಳನ್ನು ರಕ್ಷಿಸಿ ಎಂದು ಕರೆನೀಡಿದರು.
 ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಕ್ಟರ್ ಭರತ್ ಮಾತನಾಡಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು 3.03.2024ರಿಂದ 6.03.2024ರ ವರೆಗೆ ನಡೆಸುತ್ತಿದ್ದು ಒಟ್ಟು ತಾಲೂನಲ್ಲಿ 294864 ಇದ್ದು, ಅದರಲ್ಲಿ 0 ಯಿಂದ 5 ವರ್ಷದೊಳಿಗಿನ ಮಕ್ಕಳ ಸಂಖ್ಯೆ 35390 ಇದ್ದು ಒಟ್ಟು 210 ಬೂತ್‍ಗಳನ್ನು ಸ್ಥಾಪಿಸಿದ್ದು,ಟ್ರಾನಿಟ್ ಬೂತಗಳಾಗಿ 03, ಒಟ್ಟು 426 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ, ಮೇಲ್ವಿಚಾರಕರು 38 ಸಿಬ್ಬಂದಿಯನ್ನು ನೇಮಕಮಾಡಿದ್ದು ಬಸ್ ನಿಲ್ದಾಣ, ಸರ್ಕಾರಿ ಅಸ್ಪತ್ರೆ, ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕುತ್ತಿದ್ದು ಕಡ್ಡಾಯವಾಗಿ ಎಲ್ಲಾ ಪಾಲಕರು ತಮ್ಮ ಮಗುವಿಗೆ ಪೊಲಿಯೋ ಹನಿಯನ್ನು ಹಾಕಿಸಿ ಎಂದರು.
ಜಿಲ್ಲಾ ನೋಡಲ್ ಅಧಿಕಾರಿ ಆರ್ ಬಸವರಾಜ್, ಹಾಗೂ ಆಸ್ಪತ್ರೆಗಳ ಸಿಬ್ಬಂದಿ ಮತ್ತು ತಾಲೂಕ ಆರೋಗ್ಯ ಅಧಿಕಾರಿಗಳ ಸಿಬ್ಬಂದಿ ವರ್ಗದವರು ತಾಯಂದಿರು ಉಪಸ್ಥಿತರಿದ್ದರು. ಸ್ವಪ್ನ ಪ್ರಾರ್ಥಿಸಿದಿರು, ಈಶ್ವರಪ್ಪ ಸ್ವಾಗತಿಸಿದರು,  ಭರತ್ ಅವರು ಪ್ರಸ್ತಾವಿಕ ನುಡಿಗಳನ್ನಾಡಿದರು.
ಪಟ್ಟಣದ ಸರ್ಕಾರಿ ಅಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಹನಿ ಕಾರ್ಯಕ್ರಮವನ್ನು ತಹಶೀಲ್ದಾರ್ ಅನಿಲ್ ಕುಮಾರ್ ಉದ್ಘಾಟಿಸಿದರು, ಡಾ.ರಾಮಶೆಟ್ಟಿ ಪೋಲಿಯೋ ಹನಿ ಹಾಕಿದರು.

One attachment • Scanned by Gmail