ಪೋಲಿಯೋ ಮಾದರಿಯಂತೆ ಕೊರೊನಾ ಲಸಿಕೆ ನೀಡಿ


ಗುಳೇದಗುಡ್ಡ ಮೇ.2- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸುನಾಮಿ ಅಲೆಯಂತೆ ಹೆಚ್ಚುತ್ತಿರುವ ಕರೋನ ನಿಯಂತ್ರಣಕೆ ಬರಬೇಕಾದರೆ ಪೋಲಿಯೋ ಮಾದರಿಯಂತೆ ಎಲ್ಲರಿಗೂ ಲಸಿಕೆ ನೀಡಬೇಕೆಂದು ಸರ್ಕಾರಕ್ಕೆ ನ್ಯಾಯವಾದಿ ನವೀನ್ ಚಿಲ್ಲಾಳ ಒತ್ತಾಯಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನವೀನ್ ಚಿಲ್ಲಾಳ ಅವರು, ಇಂದು ದೇಶದಲ್ಲಿ ಹೆಚ್ಚುತ್ತಿರುವ ಕರೊನ ನೋಡಿದರೆ ಸರ್ಕಾರಕ್ಕೆ ಮುಂಜಾಗ್ರತೆ ಇಲ್ಲ, ಇಂದು ನಮ್ಮ ದೇಶಕ್ಕೆ ಪ್ರತಿದಿನ 20,07,128 ಆಕ್ಸಿಜನ್ ಸಿಲೆಂಡರಗಳು ಬೇಕು ಜಗತ್ತಿನ ಎಲ್ಲ ದೇಶಗಳಿಗಿಂತ ಹೆಚ್ಚಿನ ಅವಶ್ಯಕತೆ ನಮಗೆ ಇದೆ.
ರಾಜ್ಯದಲ್ಲಿ ಕರೊನಾ ನಿಯಂತ್ರಣ ತಪ್ಪಿದೆ. ಆಸ್ಪತ್ರೆಗಳಲ್ಲಿ ಬೆಡ್‍ಗಳು ಇಲ್ಲ, ವೆಂಟಿಲೇಟರ್‍ಗಳು ಇಲ್ಲ, ಕೂಡಲೇ ರಾಜ್ಯದಲ್ಲಿ ಎಲ್ಲರಿಗೂ ಪೆÇೀಲಿಯೋ ಮಾದರಿಯಂತೆ ಒಂದೇ ದಿನ ಅಥವಾ ವಿಭಾಗಗಳಲ್ಲಿ ಲಸಿಕೆ ನೀಡಿದರೆ ಮಾತ್ರ ಕರೊನಾ ನಿಯಂತ್ರಣ ಸಾಧ್ಯ ಇಲ್ಲವಾದರೆ ರಾಜ್ಯದಲ್ಲಿ ಇನ್ನಷ್ಟು ಸಾವಿರ ಜನರ ಸಾವಿಗೆ ಸರ್ಕಾರ ಕಾರಣವಾಗುತ್ತದೆ. ಸರ್ಕಾರ ಕೇವಲ 14 ದಿನ ಲಾಕ್ಡೌನ್ ಮಾಡಿದರೆ ನಿಯಂತ್ರಣ ಸಾಧ್ಯವಿಲ್ಲ, ಕೂಡಲೇ ಲಸಿಕೆ ಹಾಕುವ ಕಾರ್ಯಕ್ರಮ ಕೈಗೊಳ್ಳಬೇಕು. ಇದಕ್ಕೆ ಬೇಕಾದ ಸರ್ಕಾರದ ಎಲ್ಲ ಇಲಾಖೆಗಳು ಕೈಜೋಡಿಸಬೇಕು. ಸರ್ಕಾರದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದಾರೆ, ಅಲ್ಲದೆ ಸ್ವಯಂ ಸೇವಾ ಸಂಸ್ಥೆಗಳು ಎಲ್ಲರೊಂದಿಗೆ ಈ ಕಾರ್ಯವನ್ನು ಮಾಡಬಹುದು.
ಕೊರೊನಾ ಬಂದಮೇಲೆ ಚಿಕಿತ್ಸೆ ಕೊಡುವುದಕ್ಕಿಂತ ಎಲ್ಲರಿಗೂ ಲಸಿಕೆ ನೀಡಿದರೆ ರೋಗ ಬರದಂತೆ ತಡೆಯಬಹುದು ಈ ಕಾರ್ಯವನ್ನು ಎಲ್ಲರೊಂದಿಗೆ ಮಾಡಬಹುದು. ಈ ಕಾರ್ಯ ಕೇವಲ ಸರಕಾರದ ಒಂದು ಅಂಗದಿಂದ ಮಾಡದೆ ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗ ಎಲ್ಲರೂ ಕೈಜೋಡಿಸಬೇಕು. ಆಗಮಾತ್ರ ಕರೋನಾ ನಿಯಂತ್ರಣ ಬರಲು ಸಾಧ್ಯ.
ನಮ್ಮ ದೇಶದಲ್ಲಿ ಚುನಾವಣೆ ಅಚ್ಚುಕಟ್ಟಾಗಿ ನಡೆಸುತ್ತೇವೆ. ನಾವು ಜಗತ್ತಿಗೆ ಮಾದರಿಯಾಗಿ ಚುನಾವಣೆ ನಡೆಸುತ್ತೇವೆ ಒಂದು ಮತ್ತು ಎರಡು ಹಂತ ಎಂದು ವಿಭಾಗ ಮಾಡಿಸುತ್ತೇವೆ. ಅದೇ ರೀತಿಯಾಗಿ ರಾಜ್ಯವನ್ನು 4 ಭಾಗಗಳು ಮಾಡಿ ಒಂದೊಂದು ದಿವಸ ಒಂದು ಭಾಗ ಎಂದು ಈ ಕಾರ್ಯವನ್ನು ಮಾಡಬಹುದು.
ನಮ್ಮ ಕಣ್ಣ ಮುಂದೆ ಪೆÇೀಲಿಯೋ ಅಭಿಯಾನ ನಮ್ಮ ಆರೋಗ್ಯ ಇಲಾಖೆ ಹಾಗೂ ನಸಿರ್ಂಗ್ ವಿದ್ಯಾರ್ಥಿಗಳು ಮಾಡುತ್ತಾರೆ. ಅದೇ ತರನಾಗಿ ಈ ಕೊರೂನಾ ಅಭಿಯಾನವನ್ನು ನಾಲ್ಕು ಕಂದಾಯ ವಿಭಾಗಗಳಲ್ಲಿ ಒಂದೊಂದು ದಿವಸ ಮಾಡಿದರೆ ಎಲ್ಲರಿಗೂ ಕೊಡಬಹುದು. ಇದಕ್ಕೆ ಸರ್ಕಾರದ ಇಚ್ಛಾಶಕ್ತಿಯೂಬೇಕು. ಕೇವಲ ಮಾಧ್ಯಮದಲ್ಲಿ ಹೇಳಿಕೆ ನೀಡುವ ಸಚಿವರಿಂದ ಸಾಧ್ಯವಿಲ್ಲ.
ಕಾರಣ ಪೆÇೀಲಿಯೋ ಲಸಿಕೆ ಮಾದರಿಯಂತೆ ಎಲ್ಲರಿಗೂ ಕೂಡಲೇ ಕರೊನಾ ಲಸಿಕೆ ನೀಡಬೇಕೆಂದು ರಾಜ್ಯಸರ್ಕಾರಕ್ಕೆ ನ್ಯಾಯವಾದಿ ನವೀನ್ ಚಿಲ್ಲಾಳ ಒತ್ತಾಯಿಸಿದ್ದಾರೆ.