ಪೋಲಿಯಾಗಿ ಅಡ್ಡಾ ತಿಡ್ಡಿ ತಿರಗಾಡುವ ಪಡ್ಡೆಗಳ ಮೇಲೆ ಕಾನೂನು ಕ್ರಮ : ಡಿವೈಎಸ್ಪಿ ಶ್ರೀಧರ ದೊಡ್ಡಿ

ಇಂಡಿ :ಮೇ.1: ಪಟ್ಟಣದಲ್ಲಿ ಪೋಲಿಯಾಗಿ ಅಡ್ಡಾ ತಿಡ್ಡಿ ತಿರಗಾಡುವ ಪಡ್ಡೆಯರನ್ನು ಸುಮಾರು 20 ಜನರ ಬೈಕಗಳ ಮೇಲೆ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ. ಪಟ್ಟಣದ ಮಾಹಾವಿರ ವೃತ್ತದ ಬಳಿ ಇಂಡಿ ಉಪವಿಭಾಗಾಧಿಕಾರಿ ರಾಹುಲ ಶಿಂಧೆ ಹಾಗೂ ಡಿವೈಎಸ್ಪಿ ಶ್ರೀಧರ ದೊಡ್ಡಿ ಅನಾವಶ್ಯಕವಾಗಿ ತಿರಗಾಡುತ್ತಿದ್ದ ಜನರ ಮೇಲೆ ಶಿಸ್ತು ಕ್ರಮವನ್ನು ಕೈಗೊಂಡಿದ್ದಾರೆ.

ಪಟ್ಟಣದ ಮಾಹಾವಿರ ವೃತ್ತ ಬಳಿ ಪೋಲಿಯಾಗಿ ತಿರಗಾಡುತ್ತಿರುವ ಬೈಕ್‍ಸವಾರರÀ ಬೈಕ್‍ವನ್ನು ಜಪ್ತಿ ಮಾಡಿಕೊಂಡಿರುವ ಖಡಕ ಹಾಗೂ ದಕ್ಷ ಪೊಲೀಸ ಅಧಿಕಾರಿ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಸಾರ್ವಜನಿಕರು ನಗರದಲ್ಲಿ ಕೆಲಸವಿಲ್ಲದೆ ಪೋಲಿಯಾಗಿ ತಿರಗಾಡುವ ಜನರನ್ನು ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ.

ಮಾಹಾಮಾರಿ ಕೋವಿಡ್-19ರ ಹಿನ್ನಲೆಯಲ್ಲಿ ಸರಕಾರಗಳು ಹೊರಡಿಸಿರುವ ಆದೇಶವನ್ನು ಎಲ್ಲಾರು ಚಾಚುತಪ್ಪದೆ ಪಾಲನೆಯನ್ನು ಮಾಡಬೇಕು, ಅನಾವಶ್ಯಕವಾಗಿ ರಸ್ತೆ ಮೇಲೆ ಬಂದರೆ ನಾವುಗಳು ಕಾನೂನನ್ನು ಬಿಗಿ ಮಾಡಬೇಕಾಗುತ್ತೆ.

ಅವಶ್ಯಕತೆ ಇದ್ದರೆ ನಮ್ಮ ಸಹಾಯವನ್ನು ಪಡೆದುಕೊಳ್ಳಿ ನಗರವಾಗಲಿ, ಗ್ರಾಮೀಣ ಪ್ರದೇಶವಾಗÀಲಿ ಮನೆ ಬಿಟ್ಟು ಯಾರು ಅಡ್ಡಾತಿಡ್ಡಿ ತಿರಗಾಡಬಾರದು ಎಂದು ಇಂಡಿ ಜನರನ್ನು ಖಂಡಕವಾಗಿ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ ಅವರು ಎಚ್ಚರಿಕೆಯನ್ನು ಹೇಳಿ. ನಾವುಗಳು ಬದುಕು ಉಳಿದರೆ ನಾಳೆ, ಹೀಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ, ಮನೆಯಲ್ಲೇ ಇರಿ ಎಂದು ಸಾರ್ವಜನಿಕರಲ್ಲಿ ಜಾಗೃತವಾಗಿ ಇರಿ ಕೋವಿಡ್ ವನ್ನು ಹೊಡೆದು ಓಡಿಸಿ ಎಂದು ಮಾತನಾಡಿದರು.

ನಗರದ ಪೋಲಿಸ ಠಾಣೆಯಲ್ಲಿ ಬೈಕ್‍ಗಳಿಗೆ ಸಂಬಂಧಿಸಿದ ದಾಖಲೆತೋರಿಸಿ, 500ರೂ ದಂಡವನ್ನು ಭರಣಾಮಾಡಿ 24 ಗಂಟೆ ನಂತರ ಬೈಕವನ್ನು ತಗೆದುಕೊಂಡು ಹೋಗಬೇಕೆಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.