ಪೋರ್ಚುಗೀಸ್ ಫಿಶ್

ಬೇಕಾಗುವ ಸಾಮಗ್ರಿಗಳು
*ಮೀನು – ೪
*ಪುದೀನ ಸೊಪ್ಪು – ಸ್ವಲ್ಪ
*ಕೊತ್ತಂಬರಿ ಸೊಪ್ಪು – ಸ್ವಲ್ಪ
*ಹಸಿರು ಮೆಣಸಿನಕಾಯಿ- ೫
*ಗೋಡಂಬಿ – ೨ ಚಮಚ
*ಶುಂಠಿ, ಬೆಳ್ಳುಳ್ಳಿ ಪೇಸ್ಟ್ – ೨ ಚಮಚ
*ಜೀರಿಗೆ ಪುಡಿ – ೧ ಚಮಚ
*ಗರಂ ಮಸಾಲ – ೧ ಚಮಚ
*ಚಾಟ್ ಮಸಾಲ – ೧ ಚಮಚ
*ನಿಂಬೆಹಣ್ಣು – ಅರ್ಧ

ಮಾಡುವ ವಿಧಾನ :

ಪುದೀನ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ, ಗೋಡಂಬಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಕೊಳ್ಳಿ. ಇದನ್ನು ಬೌಲ್‌ಗೆ ಹಾಕಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಜೀರಿಗೆ ಪುಡಿ, ಗರಂ ಮಸಾಲ, ಚಾಟ್ ಮಸಾಲ, ನಿಂಬೆರಸವನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ತಯಾರಿಸಿಕೊಂಡ ಮಸಾಲೆಯಲ್ಲಿ ಮೀನು ಹಾಕಿ, ಅರ್ಧ ಗಂಟೆ ನೆನೆಸಿಡಿ. ಬಾಳೆ ಎಲೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ. ನೆನೆಸಿದ ಮೀನನ್ನು ಎಲೆ ಮೇಲೆ ಇಟ್ಟು ಎಲೆಯನ್ನು ಮಡಚಿ.ಪ್ಯಾನ್‌ಗೆ ಎಣ್ಣೆ ಹಾಕದೆ, ಬಿಸಿಯಾದ ಮೇಲೆ ಸ್ವಲ್ಪ ನೀರು ಚಿಮುಕಿಸಿಕೊಳ್ಳಿ. ನಂತರ ಎಲೆಯಲ್ಲಿ ಸುತ್ತಿದ ಮೀನನ್ನು ಪ್ಯಾನ್‌ನಲ್ಲಿಟ್ಟು, ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಪೋರ್ಚುಗೀಸ್ ಫಿಶ್ ಸವಿಯಲು ಸಿದ್ಧ.