ಪೋನ್‍ನಲ್ಲಿ ಶಿಕ್ಷಕರು- ವಿದ್ಯಾರ್ಥಿಗಳಿಗಿಲ್ಲ ಪಾಠ : ಪಾಲಕರ ಅರೋಪ

ಸಂಡೂರು :ಜ:21 ತಾಲೂಕಿನ ಸುಶೀಲಾನಗರದ ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕವೃಂದ ಮೊಬೈಲ್ ಪೋನ್ ಸದಾ ಬರುತ್ತಿದ್ದು ಅದರಲ್ಲಿಯೇ ನಿರತರಾದ ಶಿಕ್ಷಕರು, ಮಕ್ಕಳ ಪಾಠವನ್ನೇ ಮರೆತು ಬಿಡುತ್ತಿದ್ದು ಇದರಿಂದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಬೇಕಾದ  ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸಲು ಹೇಗೆ ಸಾಧ್ಯ, ಈ ಬಗ್ಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಗುರುಗಳ ಮಾತನ್ನು ಕೇಳದಾಗಿದ್ದು, ಮೊಬೈಲ್‍ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ, ಪ್ರತಿದಿನ ಪ್ರಾರ್ಥನೆಯಾದ ನಂತರ ಒಂದು ಗಂಟೆ ತಡವಾಗಿ ಬರುತ್ತಾರೆ, ನೀವೇಕೆ ತಡವಾಗಿ ಬಂದರೆ ಮಕ್ಕಳ ಗತಿ ಏನು? ಎಂದು ಮುಖ್ಯ ಗುರುಗಳಾಧ ನರಿ ವಸುಂಧರರವರು ಶಿಕ್ಷಕರಿಗೆ ಪ್ರಶ್ನಿಸಿದರೆ, ನೀವು 8 ತಿಂಗಳ ಅವಧಿ, ನಿವೃತ್ತರಾಗುತ್ತೀರಿ ನಿಮಗೇಕೆ ಬೇಕು ಉಸಾಬರಿ ಎಂದು ಶಿಕ್ಷಕರು  ಮುಖ್ಯ ಗುರುಗಳಿಗೆ  ಬುದ್ದಿವಾದ ಹೇಳಲು ಪ್ರಯತ್ನಿಸುತ್ತಾರೆ , ತಮ್ಮ ಅಳಲನ್ನು ಯಾರ ಬಳಿ ತೋಡಿಕೊಳ್ಳಲಿ ಎನ್ನುವುದು ಮುಖ್ಯ ಶಿಕ್ಷಕಿಯ ಮನದಾಳದ ಮಾತಾಗಿದೆ.
ಈ ಬಗ್ಗೆ ಮಾಹಿತಿಯನ್ನು ಮಕ್ಕಳಿಂದ, ಮುಖ್ಯ ಗುರುಗಳಿಂದ, ವಿದ್ಯಾರ್ಥಿಗಳಿಂದ ತಿಳಿದ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು, ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್ ಅವರಿಗೆ ದೂರನ್ನು ಸಲ್ಲಿಸಿದಾಗ ತಕ್ಷಣವೇ ಸ್ಪಂದಿಸಿದ ಮೈಲೇಶ್ ಬೇವೂರವರು ಸರ್ಕಾರಿ  ಪ್ರೌಢಶಾಲೆಗೆ, ಪ್ರಾಥಮಿಕ ಶಾಲೆಗೆ ಅಗಮಿಸಿ ಅಲ್ಲಿಯ ಮಕ್ಕಳು ಅನುಭವಿಸುತ್ತಿರುವ ಯಾತನೆಯನ್ನು ಕಂಡು ಸ್ವತ: ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆರಗಾಗಿ ಗ್ರಾಮಸ್ಥರು, ಪೋಷಕರ ಬಗ್ಗೆ ಆ ಶಾಲೆಯ ದುರಾಡಳಿತ ನಡೆದಯ ಬಗ್ಗೆ ಚರ್ಚಿಸಿದರು, ಅಲ್ಲದೆ ಮದ್ಯಾಹ್ನದ ಬಿಸಿಯೂಟದಲ್ಲಿ ಹುಳು, ಉಪ್ಪಟೆ, ಸೊಳ್ಳೆಗಳು ಇರುವುದನ್ನು ಖುದ್ದಾಗಿ ತೋರಿಸಿದ್ದಾರೆ, ಇಂತಹ ಅನ್ನವನ್ನು ಊಟಮಾಡುವುದು ಸರಿಯೇ ಎಂದು ಪ್ರಶ್ನಿಸಿ ಶಾಲೆಯ ಊಟದ ಸಮಯದಲ್ಲಿ ಚಾನಲ್ ನವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತೋರಿಸಿ ತಮ್ಮ ಮಕ್ಕಳಿಗೆ ಅನ್ಯಾವಾಗುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪಾಲಕರು ನಿತ್ಯವೂ ಒಂದೊಂದು ರೀತಿಯಲ್ಲಿ ಊಟದ ಸಮಸ್ಯೆಯಾದರೆ, ಇನ್ನೂ ಶಿಕ್ಷಕರು ಶಾಲೆಗೆ ಸಂಬಂಧಿಸಿದಲ್ಲ, ವಿದ್ಯಾರ್ಥಿಗಳಿಗೆ ಪಾಠವಿಲ್ಲದೇ ಇರುವುದು ಮತ್ತೊಂದು ಸಮಸ್ಯೆಯಾಗಿದೆ ಎನ್ನುತ್ತಾರೆ.
ಎಸ್.ಡಿ.ಎಂ.ಸಿ. ಅಧ್ಯಕ್ಷ ಮಾತನಾಡಿ ಇಲ್ಲಿ ಶಿಕ್ಷಕರ ಅಸಭ್ಯತನದ ವರ್ತನೆಯನ್ನು ಕಂಡು ನಾವೆ ಬೆರಗಾಗಿ ಹೋಗಿದ್ದೇವೆ, ಇಲ್ಲಿಯ ಶಿಕ್ಷಕರನ್ನು ವಜಾ ಮಾಡಬೇಕೆಂದು ಅಗ್ರಹಿಸಿದರಲ್ಲದೆ ಮಕ್ಕಳ ಅನೇಕ ಸಮಸ್ಯೆಯ ಬಗ್ಗೆ ಶಿಕ್ಷಕರ ಬೋಧನೆಯ ಬಗ್ಗೆ ಗಮನ ಸೆಳೆದರು ತದ ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಯಲ್ಲಿ ಮೊಬೈಲನ್ನು ತರಬಾರದೆಂದು ಶಿಕ್ಷಕರಿಗೆ ತಾಕೀತು ಮಾಡಿದರಲ್ಲದೆ ಇನ್ನೂ 2-3 ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇನೆ ಎನ್ನುವ ಮಾತನ್ನು ಸಭೆಯಲ್ಲಿ ತಿಳಿಸಿದ್ದಾರಲ್ಲದೆ ಜೆಸ್ಕಾಂ ನವರ ಜೊತೆಗೆ ಮಾತನಾಡಿ ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು, ಇನ್ನೂ ಬಿಸಿಯೂಟದ ಶುದ್ದತೆ ಮತ್ತು ಇಸ್ಕಾನ್ ವತಿಯಿಂದ ಊಟದ ವ್ಯವಸ್ಥೇ ಮಾಡಲಗುವುದು, ಶಿಕ್ಷಕರ ಮೇಲೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಶಿಕ್ಷಣಕ್ಕಾಗಿ ಕೋಟ್ಯಾಂತರ ವ್ಯಯ ಮಾಡುತ್ತಿರುವ ಸರ್ಕಾರ, ಅದರಲ್ಲಿ ತಾಂಡಾಗಳಿಗೆ, ಹಟ್ಟಿಗಳಿಗೆ ಹೆಚ್ಚು, ಶಿಕ್ಷಣದಿಂದ ವಂಚಿತರಾಗುವ ಈ ಮಕ್ಕಳಿಗೆ ಎಲ್ಲಾ ಕೊಟ್ಟರೂ ಶಿಕ್ಷಕರ ಪಾಠ ಶೂನ್ಯ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಅಗುತ್ತಿದೆ, ಕಲಿಸುವ ಗುರು, ಕಲಿಸದಾಗಿ ಮೊಬೈಲ್ ಅಟಕ್ಕೆ ಶರಣಾಗುತ್ತಿರುವುದು ಎಷ್ಟು ಸರಿ, ಗುಡ್ಡಗಾಡು ಮಕ್ಕಳು ಮುಂದೆ ಬರುವುದು ಯಾವಾಗ?
ಗ್ರಾಮದ ಜನತೆ: ದೂರುಗಳ ಸುರಿಮಳೆ, ಶಾಲೆಯಲ್ಲಿ ವಾಟ್ಸ್‍ಪ್, ಫೇಸ್ ಬುಕ್, ಇನಸ್ಟಾಗಾಂ ಹಾವಳಿ ತಡೆಯಿರಿ,  ಉತ್ತಮ ಶಿಕ್ಷಣ ಕೊಡಿ ಮುಖ್ಯಗುರುಗಳು ವಸುಂಧರ: ಏನಮ್ಮ ಇರುವುದು 8 ತಿಂಗಳು, ನಿಮಗ್ಯಾಕ ಉಸಾಬರಿ ಸುಮ್ಮನೆ ಸರ್ವಿಸ್ ಮುಗಿಸಿ ಎನ್ನುತ್ತಾರೆ ಕಿರಿಯ ಶಿಕ್ಷಕರು,
ವಿದ್ಯಾರ್ಥಿಗಳು: ಶಾಲೆಗೆ ಶಿಕ್ಷಕರು ಬರುವುದು ತಡವಾಗಿ, ಹೋಗುವುದು ಜರೂರು, ಇನ್ನೂ ತರಗತಿಯಲ್ಲಿ ಒಂದಲ್ಲ ಒಂದು ವಾಟ್ಸ್‍ಪ್ ಮಾಹಿತಿಯೇ , ಪಾಠ ಮಾತ್ರ ಶೂನ್ಯ, ಊಟದಲ್ಲಿ ಹುಳುಗಳು, ಕೆಟ್ಟ ವಾಸನೆಯಿಂದ ಕೂಡಿದ ಅನ್ನ ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್: ತಕ್ಷಣ ಕ್ರಮ ವಹಿಸಲಾಗುವುದು, ಊಟದ ತಯಾರಿಯನ್ನು ನಿಲ್ಲಿಸಿ ಇಸ್ಕಾನ್ ಊಟದ ವ್ಯವಸ್ಥೆ ಮಾಡಲಾಗುವುದು, ಶಿಕ್ಷಕರು ಮೊಬೈಲ್ ಬಳಕೆ ಕಡ್ಡಾಯವಾಗಿ ನಿಲ್ಲಿಸಲಾಗುವುದು.