ಪೋಟೋ ತೆಗಡಸಿಕೊಂಡು ಬೈದೂ ಕಳುಹಿಸಿದರು..

ನೆಗಟೀವ್ ಪಾತ್ರ ಮಾಡಿದ ಅನೇಕ ಕಲಾವಿದರು ತಾವು ನಿರ್ವಹಿಸಿದ ಪಾತ್ರದಿಂದಲೇ ಜನಪ್ರಿಯತೆ ಮತ್ತು ಮನ್ನಣೆಗಳಿಸಿದ್ದಾರೆ.
ಇದಕ್ಕಾಗಿಯೇ ಅನೇಕ ಕಲಾವಿದರು ನೆಗೆಟೀವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಅದರಲ್ಲಿಯೂ ನೆಚ್ಚಿನ ನಟ,ನಟಿಯರಿಗೆ ಕೀಟಲ್ , ಕಿರಿಕಿರಿ ಮಾಡುವ ಪಾತ್ರಗಳಾಗಿದ್ದರೆ ಜನರು ಬಹುಬೇಗ ಅಂತ ಕಲಾವಿದ ಬಗ್ಗೆ ಸಿಕ್ಕರೆ ಹಿಡಿಡು ಹೊಡೆಯಬೇಕು ಎನ್ನುವಷ್ಟರ ಮಟ್ಟಿಗೆ ಕೋಪ,ತಾಪ ಪ್ರದರ್ಶಿಸುತ್ತಾರೆ. ಆದರೆ ಹಾಗೆ ಮಾಡುವಂತೆಯೂ ಇಲ್ಲ.
ಇದೆಲ್ಲಾ ಯಾಕೆ ಅಂತೀರಾ.. ನೆಗೆಟೀವ್ ಪಾತ್ರಗಳ ಮಹಿಮೆಯೇ ಅಂತಹುದು. ಒಳ್ಳೆಯ ಕಲಾವಿದರು ಸಿಕ್ಕರೆ ಪಾತ್ರವನ್ನು ಜೀವಿಸಿ ಬಿಡುತ್ತಾರೆ.
ಅಗ್ನಿ ಸಾಕ್ಷಿ, ಮಂಗಳಗೌರಿ ಮದುವೆ ,ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ನಟಿಸಿ ಜನಮನ್ನಣೆ ಪಡೆದಿರುವ ಸೂರ್ಯ ಪ್ರವೀಣ್ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಗೀತಾ ಪಾತ್ರಧಾರಿಯನ್ನು ಬೆಟ್ಟದಿಂದ ತಳ್ಳುವ ಪಾತ್ರಕ್ಕೆ ಪ್ರೇಕ್ಷಕರು ಶ್ರೀಕರ ಪಾತ್ರಧಾರಿಯ ಬಗ್ಗೆ ಅಸಹನೆ ಹೊರಹಾಕಿದ್ದಾರೆ.
ಪಾತ್ರದ ಕುರಿತು ಮಾಹಿತಿ ಹಂಚಿಕೊಂಡ ಸೂರ್ಯ ಪ್ರವೀಣ್, ಇತ್ತೀಚೆಗೆ ಮದುವೆ ಸಮಾರಂಭಕ್ಕೆ ಹೋಗಿದ್ದೆ.ಅಲ್ಲಿದ್ದ ಕೆಲ ಮಹಿಳೆಯರು ನಿನಗೆ ಮದುವೆಯಾಗಿದೆಯಾ ಅಂತ ಕೇಳಿದರು ಇಲ್ಲ.ಅಂದೆ. ಸೀರಿಯಲ್ ನಲ್ಲಿ ಹುಡುಗಿಯರಿಗೆ ಅಷ್ಟು ಕಷ್ಟ ಕೊಟ್ಟರೆ ನಿನಗೆ ಯಾರು ಹೆಣ್ಣು ಕೊಡ್ತಾರೆ ಎಂದು ಬೈದರು.ಜೊತೆಗೆ ಪಾತ್ರ ಇಷ್ಟಪಟ್ಟು ಫೋಟೊ ತೆಗೆಸಿಕೊಂಡು ಕಳುಹಿಸಿದರು ಅನೇಕ ಬಾರಿ ಈ ರೀತಿಯ ಸನ್ನಿವೇಶ ಎದುರಿಸಿದ್ದೇನೆ ಎಂದರು.
ಕೊರೋನಾ ಸೋಂಕಿನ ಸಮಯದಲ್ಲಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದೆ.ಇಂತಹ ಸಮುದಲ್ಲಿ ನಿರ್ದೇಶಕ ರಾಮ್ ಜಿ , ಅವರು ಗೀತಾ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಬೆಟ್ಟದ ಮೇಲಿನಿಂದ ನಾಯಕಿಯನ್ನು ಕೆಳಗೆ ತಳ್ಳಲು ಎರಡು ಮೂರು ಬಾರಿ ಪ್ರಯತ್ನ ಮಾಡುತ್ತೇನೆ .ಎರಡು ಮೂರು ಬಾರಿ ಕೈ ಕಾಲಿಗೆ ನೋವು ,ಪೆಟ್ಟು ಮಾಡಿಕೊಂಡಿದ್ದೇನೆ.ಪಾತ್ರ ಚೆನ್ನಾಗಿ ಬರಲಿ ಎಂದು ಕಷ್ಟಪಟ್ಟು ಮಾಡಿದ್ದೇನೆ.
ಗೀತಾ ಧಾರಾವಾಹಿಯ ಪಾತ್ರದ ನಂತರ ಈ ರೀತಿಯ ಅನೇಕ ಪಾತ್ರಗಳು ಬಂದಿವೆ. ಯಾವುದೇ ಪಾತ್ರಸಿಕ್ಕರೂ ಕಣ್ಣಿಗೆ ಒತ್ತಿಕೊಂಡು ಶ್ರದ್ದೆಯಿಂದ ಮಾಡುತ್ತೇನೆ.ಇನ್ನೂ ವಿಭಿನ್ನ ಪಾತ್ರ ಮಾಡುವ ಆಸೆ ಇದೆ ಅಂತಾರೆ ಅವರು.

ನೆಗೆಟೀವ್ ಪಾತ್ರ

ಪ್ರಿಯಾಂಕಾ ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿರುವ “ಉಗ್ರವತಾರ” ಚಿತ್ರದಲ್ಲಿ ಸೂರಿ ಅಣ್ಣ ಎನ್ನುವ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದೇನೆ. ಈ ಚಿತ್ರ ಬಿಡುಗಡೆಯಾದ ನಂತರ ಒಳ್ಳೆಯ ಅವಕಾಶಗಳು ಸಿಗಲಿವೆ ಎನ್ನುವ ವಿಶ್ವಾಸ ಅವರದು.