ಪೋಚಮ್ಮ ದೇವಿ ಮತ್ತು ಶೀತಲಾ ದೇವಿಯ ಆಷಾಡ ಪೂಜೆ ಆಚರಣೆ

ಬೀದರ್:ಜು.19: ನಗರದ ರಾವ ತಾಲೀಂ ಭೋವಿ ಗಲ್ಲಿಯಲ್ಲಿ ಇರುವ ಶ್ರೀ ಪೋಚಮ್ಮ ದೇವಿ ಮತ್ತು ಶೀತಲಾ ದೇವಿಯ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಹಾಗೂ ಸುಮಾರು ವರ್ಷಗಳಿಂದ ಆಷಾಡದಲ್ಲಿ ಭೋವಿ ಸಮಾಜದವರುÀ ಜುಲೈ 17 ರಂದು ಭಕ್ತಿ ಮತ್ತು ಹರ್ಷ ಉಲ್ಲಾಸದೊಂದಿಗೆ ಬಹಳ ವಿಜೃಂಭಣೆಯೊಂದಿಗೆ ಪೂಜೆ ಆಚರಿಸಲಾಯಿತು.

ಬೆಳಗ್ಗೆ ದೇವಿಗೆ ಅಭಿಷೇಕ, ಸಾಮೂಹಿಕ ಹೋಮ ಹವನ್ ಹಾಗೂ ಸಾಯಂಕಾಲ ಭಜನ, ಕೀರ್ತನ್ ಮತ್ತು ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಮಹಾಪ್ರಸಾದ ವಿತರಿಸಲಾಯಿತು

ಈ ಮೇರವಣಿಗೆಯಲ್ಲಿ ಮಹಿಳೆಯರು ತಲೆ ಮೇಲೆ ಕಳಸ ಹೊತ್ತಿಕೊಂಡು, ರಾವ್ ತಾಲೀಮ್ ಭೋವಿ ಗಲ್ಲಿಯಿಂದ ಪ್ರಾರಂಭಗೊಂಡು, ಮುಖ್ಯರಸ್ತೆ ಮೂಲಕ ಭೀಮನಗರದಲ್ಲಿರುವ ಶ್ರೀ ಮರೆಗಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಹಾಗೂ ಮಂಗಳಾರತಿ ಸಲ್ಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಶೈಲೇಂದ್ದರ ಹೀವರೆ, ಉಪಾಧ್ಯಕ್ಷರಾದ ಗಣೇಶ ಭೋಸ್ಲೆ, ಕಾರ್ಯದರ್ಶಿ ಸಂದೀಪ ಭೋಸ್ಲೆ, ಪ್ರದೀಪ ಭೋಸ್ಲೆ ಆನಂದ ಕೊಮಟ್ಕರ್, ಉಮೇಶ ಕೋಮಟ್ಕರ್, ಸುನೀಲಕುಮಾರ ಹೀವರೆ, ನರೇಂದ್ರ ಹೀವರೆ, ಸುನೀಲ್ ಮಧ್ಯವರ್, ಶುಭಂ ಚಿಲ್ಕಲ್ವರ್ ಸೇರಿದಂತೆ ಸಮಾಜದ ಅನೇಕ ಗಣ್ಯರು, ಮಹೀಳೆಯರು, ಪುರಷರು ಉಪಸ್ಥಿತರಿದ್ದರು.