ಪೋಕ್ಸೋ ಪ್ರಕರಣ: ಲೈಂಗಿಕ ದೌರ್ಜನ್ಯಕ್ಕೆ ಸ್ಕೈವಾಕ್ ಪೂರಕವಾಯಿತಾ ?

ಚಿತ್ರದುರ್ಗ, ಸೆ.03: ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಇಂದು ಅವರು ತಂಗುತ್ತಿದ್ದ ಮಠದಲ್ಲಿ ಪೊಲೀಸರು ಸ್ಥಳ ಮಹಜರ್ ಮಾಡಿದ್ದಾರೆ.ಕಳೆದ 9 ದಿನಗಳ ಹಿಂದೆ ಪೋಕ್ಸೋ ಪ್ರಕರಣ ದಾಖಲಾಗಿ ಇದೀಗ ಬಂಧಿಯಾಗಿರುವ ಡಾ.ಮುರುಘಾ ಶರಣರನ್ನು ಡಿವೈಎಸ್ ಪಿ ಕಚೇರಿಯಲ್ಲಿ ಇಡಲಾಗಿದ್ದು, ಕಳೆದ ರಾತ್ರಿ ಮಾಡಿ ಬೆಳಗ್ಗೆ ಎದ್ದ ಬಳಿಕಾ ದೋಸೆ ಹಾಗೂ ಹಣ್ಣುಗಳನ್ನು ಸೇವನೆ ಮಾಡಿದ್ದಾರೆ. ನಂತರ ಶ್ರೀಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆಯು ಸಹ ಶ್ರೀಗಳು ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡದೆ‌ ತಡಬಡಿಸಿದ್ದಾರೆ ಎಂದು ತಿಳಿದುಬಂದಿದೆ.ಮಧ್ಯಾಹ್ನ 12 ಗಂಟೆ ಸುಮಾರಿಗೆ ಡಾ.ಮುರುಘಾ ಶರಣರನ್ನು ಮಠಕ್ಕೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಕೆ.ಪರಶುರಾಮ ಹಾಗೂ ತನಿಖಾಧಿಕಾರಿ ಡಿವೈಎಸ್ ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಸ್ಥಳ ಮಹಜರ್ ಗೆ ಶ್ರೀಗಳನ್ನು ಕರೆತಂದಿದ್ದು, ಈ ವೇಳೆ ಮುರುಘಾ ಶ್ರೀಗಳ ವಾಸ್ತವ್ಯದ ಕೊಠಡಿ, ದರ್ಬಾರ್ ಹಾಲ್, ಹಾಗೂ ಶ್ರೀಗಳು ಕೂರುವ ಕೊಠಡಿಯಲ್ಲಿ ಮಹಜರ್ ನಡೆಸಿದ್ದಾರೆ.ಸಂತ್ರಸ್ಥರು ‌ಬಾಲಕಿಯರು ಬರುವುದಕ್ಕೆ‌ ಸ್ವಾಮೀಜಿ ಓಡಾಡುತ್ತಿದ್ದ  ಸ್ಕೈ ವಾಕ್ ಬಳಕೆ ಮಾಡುತ್ತಿದ್ದು, ಸ್ಕೈವಾಕ್ ಮೂಲಕವೇ ರಾತ್ರಿ ವೇಳೆ ಬಾಲಕಿಯರು ಸಂಚರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಮ ಪ್ರಭು ಸಂಶೋಧನಾ ಕೇಂದ್ರ  ಅನುಭವ ಮಂಟಪ ಅವರ ಕಚೇರಿ , ಗದ್ದುಗೆ ಗೆ ಸ್ಕೈವಾಕ್ ನಲ್ಲಿ ಓಡಾಡುತ್ತಿದ್ದ ಸ್ವಾಮೀಜಿ‌ ಮಠದ ಪೂರ್ಣ ಆವರಣದಲ್ಲಿ ಓಡಾಡುವುದಕ್ಕೆ ಸ್ಕೈವಾಕ್ ಬಳಸುತ್ತಿದ್ದರು.ಮಠದಲ್ಲಿ ಹೆಚ್ಚಿನ ಸೆಕ್ಯುರಿಟಿ ಗಾರ್ಡ್ಸ್, ಸಿಸಿಟಿವಿ ಕ್ಯಾಮರಾ ಇದ್ದರು ಕೂಡ ಇದೇ ಸ್ಕೈ ವಾಕ್ ಮೇಲೆಯೇ ಬಾಲಕಿಯರು ಬಂದು ಹೋಗುತ್ತಿದ್ದು, ಗೌಪ್ಯವಾಗಿ‌ಯೇ ಈ ಕೃತ್ಯ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದ್ದು, ಈ ಸ್ಕೈವಾಕ್ ವೇನೆ ಬಾಲಕಿಯ ಲೈಂಗಿಕ ದೌರ್ಜನ್ಯಕ್ಕೆ ಪೂರಕವಾಯಿತಾ ಎಂಬ ಪ್ರಶ್ನೆ ಇದೀಗ ಸಾರ್ವಜನಿಕವಾಗಿ ಚರ್ಚೆ ತೊಡಗಿದೆ.