ಪೋಕ್ಸೋ ಕಾಯ್ದೆ, ಮಕ್ಕಳ ರಕ್ಷಣಾ ಕಾನೂನುಗಳ ಅರಿವು  ಜಾಗೃತಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.27: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ವಕೀಲರ ಸಂಘ, ಬಳ್ಳಾರಿ ಮತ್ತು ಶ್ರೀಮೇಧಾ ಪದವಿ ಕಾಲೇಜು ಬಳ್ಳಾರಿ ಇವರ ಸಂಯುಕ್ತಾಶ್ರಯ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪೋಕ್ಸೋ ಕಾಯ್ದೆ ಮತ್ತು ಮಕ್ಕಳ ರಕ್ಷಣಾ ಕಾನೂನುಗಳ ಅರಿವು ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಸಿಗಳಿಗೆ ನೀರೆರೆದು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಎಸ್.ಹೆಚ್.ಪುಷ್ಪಾಂಪಂಜಲಿ ದೇವಿ ಮಕ್ಕಳ ಜೀವನ ಹೂವಿನಂತೆ ಅರಳಬೇಕು ಇಂದಿನ ಮಕ್ಕಳಿಗೆ ಸ್ಪರ್ಷ ಜ್ಞಾನದ ಅಗತ್ಯವಿದೆ.  ತಿಳಿವು, ಸಂಜ್ಞೆ ಮಾಡುವುದು ಅಪರಾದ. ತಂದೆ-ತಾಯಿ ಸಂಬಂಧಿಕರಿಂದಲೇ ದೌರ್ಜನ್ಯಕ್ಕೆ ಮಕ್ಕಳು ಒಳಗಾಗುತ್ತಾರೆ ಪೋಷಕರಿಗೆ ಸಾಕ್ಷಿ ಹೇಳುವ ಧೈರ್ಯ ಬೇಕು. ಮಾಧ್ಯಮಗಳ ಪ್ರಭಾವದಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮೇಧಾ ಪದವಿ ಕಾಲೇಜು, ಪ್ರಾಚಾರ್ಯ ಕೆ.ರಾಮ್ ಕಿರಣ್ ಮಾತನಾಡಿ, ಈ ಕಾರ್ಯಕ್ರಮವನ್ನು ನಮ್ಮ ಕಾಲೇಜನಲ್ಲಿ ನಡೆಸುತ್ತಿರುವುದು ಸ್ವಾಗತಾರ್ಹ, ಕಾಲೇಜಿನಲ್ಲಿಯೂ ಇರುವ , ಮಕ್ಕಳ ಸಂರಕ್ಷಣಾ ನಿಯಮ ಜಾರಿ ಇರುವುದು ಎಂದರು. ಜೀವನದ ಸರಿ ಮಾರ್ಗ ರೂಪಸಿಕೊಳ್ಳುವಂತೆ ಕರೆ ಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್ ಹೊಸಮನೆ ಮಾತನಾಡಿ, ಜೀವನ ವಿವಿಧ ಹಂತಗಳಲ್ಲಿ ಸರಿಯಾದ ಮಾರ್ಗ ಆಯ್ಕೆ ಮಾಡಿಕೊಳ್ಳುವುದರ ಅಗತ್ಯ ಇದೆ ಎಂದರು. ಪ್ರೀತಿ-ಪ್ರೇಮ-ಪ್ರಣಯ ಎಂದು ಅಡ್ಡದಾರಿ ಹಿಡಿಯದೆ ಸರಿ ಮಾರ್ಗದ ಆಯ್ಕೆ ಮಾಡಬೇಕು ಮೊಬೈಲ್ ಅಡಿಕ್ಷನ್‍ಗೆ ಒಳಗಾಗಬಾರದು ಎಂದು ತಿಳಿ ಹೇಳಿದರು.
ಮಹಿಳಾ ಪೋಲಿಸ್ ಠಾಣೆ ಇನ್ಸ್ ಪೆಕ್ಟರ್ ಸುಭಾಶ್ ಚಂದ್ರ ಮಾತನಾಡಿ, ನಾವು ಸಮಾಜದ ಭಾಗವಾಗಿದ್ದೆವೆ ಹಾಗಾಗಿ ಸಮಾಜದ ಸಮಸ್ಯೆ ಸಹ ನಮ್ಮದು. ಇದನ್ನು ಪರಿಹರಿಸಲು ಸ್ವಯಂ ಜವಾಬ್ದಾರಿ ಹೊರಬೇಕು ಎಂದರು. ನೈಜ ಘಟನೆಗಳನ್ನು ಉದಾಹರಣೆಯಾಗಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ವಕೀಲೆ ಶ್ರೀಮತಿ ತ್ರಿವೇಣಿ ಪತ್ತಾರ್ ಮಾತನಾಡಿ, ಮಕ್ಕಳ ಮೂಲಭೂತ ಹಕ್ಕುಗಳ ಸಂರಕ್ಷಣೆ ಆಗಬೇಕು, ಲೈಂಗಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿರುವುದನ್ನು ತಿಳಿಸಿದರು. 4 ಪ್ರಕಾರದ ಲೈಂಗಿಕ ದೌರ್ಜನ್ಯಗಳಿವೆ ಅವುಗಳೆಂದರೆ ಫೋಟೋ / ಸ್ಪರ್ಷ / ಮಾತು / ಸಂಜ್ಞೆ. 16 ವರ್ಷದ ಅಪ್ರಾಪ್ತೆ ತಾಯಿಯಾದ ನೈಜ ಕತೆಯನ್ನು ಹೇಳಿದರು. ಅತ್ಯಾಚಾರ ಪದದ ಬದಲಿಗೆ ದೌರ್ಜನ್ಯ ಬಳಕೆ ಅದರ ತೀವ್ರವತೆಯ್ನು ಕಡಿಮೆ ಮಾಡಿದೆ ಎಂದರು. ಇಂದಿಗೂ ದಾಖಲಾಗದ ಕೇಸ್‍ಗಳು ಇನ್ನೂ ಎಷ್ಟೊಂದು ಇವೆ ಎಂದರು ಇಂತಹ ಕೇಸ್ ದಾಖಲಿಸಿದವರ ಮಾಹಿತಿ ಗೌಪ್ಯವಾಗಿ ಇಡುವುದಾಗಿ ಹೇಳಿ ಈ ದೌರ್ಜನ್ಯಕ್ಕೆ ಹೆಣ್ಣು ಮಾತ್ರವಲ್ಲ ಗಂಡು ಸಹ ಬಲಿಯಾಗಬಹುದು ಎಂದರು, ಈ ಕಾನೂನಿನ ಅರಿವು ಪಡೆದ ತಾವುಗಳು ಭವ್ಯ ಭಾರತ ನಿರ್ಮಾತೃಗಳಾಗಿ ಅರಳಬೇಕು ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಸಿಡಿಪಿಯು ಶ್ರೀಮತಿ ಮೋಹನ್ ಕುಮಾರಿ ಶಿಕ್ಷಣ ಇಲಾಖೆ, ಶ್ರೀಮತಿ ಇಂದ್ರಾಣಮ್ಮ ‌ಡಾ|| ಅನಿಲ್ ಆರ್.ಸಿ.ಹೆಚ್. ಅಧಿಕಾರಿ ಮೌನೇಶ್ ಎ ಮತ್ತು ಶಿವಲಿಂಗ ಇವರುಗಳು ಭಾಗವಹಿಸಿದ್ದರು.
ಸ್ವಾಗತ ಭಾಷಣವನ್ನು ಜಗನ್ನಾಥ್ ನಡೆಸಿಕೊಟ್ಟರು. ಪ್ರಾಸ್ತಾವಿಕ ನುಡಿಯನ್ನು ಮಂಜುನಾಥ್,  ನಡೆಸಿಕೊಟ್ಟರು. ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಡಾ.ಸುಮ ವೈ ಪ್ರಾರ್ಥನೆ ಕುಮಾರಿ ಶ್ರೇಯ .ಆರ್ ಬಿಬಿಎ 4ನೇ ಸೆಮಿಸ್ಟರ್ ನಡೆಸಿಕೊಟ್ಟರು.

One attachment • Scanned by Gmail