
(ಸಂಜೆವಾಣಿ ವಾರ್ತೆ)
ಮುನವಳ್ಳಿ,ಆ7: ಪಟ್ಟಣದ ಶ್ರೀ ಅನ್ನದಾನೇಶ್ವರ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಹಾಗೂ ಶ್ರೀ ಚನ್ನಬಸವ ಸ್ವಾಮೀಜಿ ಪ್ರಥಮ ಕಲಾ ವಾಣಿಜ್ಯ ಮಹಾವಿದ್ಯಾಲಯಗಳ ಆಶ್ರಯದಲ್ಲಿ ವಿದ್ಯಾಲಯದ ಆವರಣದಲ್ಲಿ ಪೋಕ್ಸೊ ಕಾಯ್ದೆಯ ಕಾನೂನು ಅರಿವು ಕಾರ್ಯಕ್ರಮ ಜರುಗಿತು.
ಸಿಪಿಐ ಕರಣೇಶಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳವಾದಾಗ ಧೈರ್ಯದಿಂದ ಹತ್ತಿರದ ಠಾಣೆಯಲ್ಲಿ ದೂರು ಕೊಡಿ. ದೂರು ಕೊಟ್ಟವರ ಹೆಸರನ್ನು ಗೌಪ್ಯವಾಗಿಟ್ಟು ತನಿಖೆ ಮಾಡುತ್ತೇವೆ. ದೂರು ಕೊಡದೇ ಇರುವುದರಿಂದ ಹೆಚ್ಚೆಚ್ಚು ಲೈಂಗಿಕ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ ಎಂದರು.
ಮುಖ್ಯ ಅಥಿತಿಗಳಾಗಿ ನ್ಯಾಯವಾದಿ ಶಿವಾಜಿ ಎಸ್. ಮಾನೆ, ಆಗಮಿಸಿ ಮಾತನಾಡಿ ಪೋಕ್ಸೊ ಕಾಯ್ದೆಯಿಂದ ಮಕ್ಕಳ ಮೇಲಿನ ಮಾನಸಿಕ ಹಾಗೂ ದೈಹಿಕ ಲೈಂಗಿಕ ದೌರ್ಜನ್ಯ ತಡೆಗಟ್ಟಬಹುದು. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಚಿತ್ರ ಅಪ್‍ಲೋಡ್ ಮಾಡುವುದು ಶೇರ್ ಮಾಡುವುದು ಕಾನೂನಿಗೆ ವಿರುದ್ಧ. ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಪೋಕ್ಸೊ ಕಾಯ್ದೆಯಲ್ಲಿ ಅವಕಾಶವಿದೆ. ಅಲ್ಲದೇ ಮಕ್ಕಳ ಬೆಳವಣಿಗೆಯಲ್ಲಿ ಪೋಕ್ಸೊ ಕಾಯ್ದೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು ಸಾನಿದ್ಯ ವಹಿಸಿ ಆಶೀರ್ವಚನ ನೀಡಿದರು.
ಮಲ್ಲಿಕಾರ್ಜುನ ಜಮಖಂಡಿ, ಐ.ಕೆ ಮಠಪತಿ, ದಾನು ಗದಗಿನ, ಅಶೋಕ ಸಂಕಣ್ಣವರ, ಪ್ರಾ. ಎಂ ಎಚ್ ಪಾಟೀಲ, ಕೆ.ಬಿ ನಲವಡೆ ಇತರರು ಉಪಸ್ಥಿತರಿದ್ದರು.