ಪೊಲೀಸ ಸುವರ್ಣ ಮಹೋತ್ಸವದ ಅಂಗವಾಗಿವಿಜಯನಗರ ಜಿಲ್ಲಾ ಪೊಲೀಸರಿಂದ ಮ್ಯಾರಾಥಾನ


ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ10: ಪೊಲೀಸ ಸುವರ್ಣ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲಾ ಪೊಲೀಸರು ಹಂಪಿಯಲ್ಲಿ ಪೊಲೀಸ ಮ್ಯಾರಾಥಾನ ನಡೆಸಿದರು.
ವಿಜಯನಗರ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಶ್ರೀಹರಿಬಾಬು ಕಮಾಂಡೆಂಟ್ ರಾಮಕೃಷ್ಣ ಸಾಥ ನೀಡುವ ಮೂಲಕ ಹಂಪಿಯ ವಿಜಯ ವಿಠ್ಠಲ ದೇವಸ್ಥಾನದಿಂದ ಆರಂಭವಾದ ಮ್ಯಾರಾಥಾನ ತಳವಾರಘಟ್ಟಾ ಗೇಟ್ ಮಾರ್ಗವಾಗಿ ಶ್ರೀರಾಮನಗರ, ಕಮಲಾಪುರ, ಅಕ್ಕತಂಗಿ ಬೆಟ್ಟ, ಕೃಷ್ಣದೇವಾಲಯದ ಹೇಮಕೂಟದ ಮುಂಬಾಗದಿಂದ ಹಾದು ಎದುರು ಬಸವಣ್ಣ ಮಂಟಪದ ವರೆಗೂ ಸಾಗಿ ಬರುವ ಮೂಲಕ ಮ್ಯಾರಾಥಾನ ಪೂರ್ಣಗೊಂಡಿತು.
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಆಸಕ್ತರು ಪಾಲ್ಗೊಂಡ ಮ್ಯಾರಾಥಾನದಲ್ಲಿ ಹೊಸಪೇಟೆಯ ಶಂಕರ ಆನಂದಸಿಂಗ್ ಕಾಲೇಜಿನ ವಿದ್ಯಾರ್ಥಿ ಮಧುಮೋಹನ ಮೊದಲ ಬಹುಮಾನ ಪಡೆದರೆ, ವಿನಯ ಹಾಗೂ ಶೇಕ್ಷಾವಲಿ ಮೂರನೇ ಬಹುಮಾನ ಪಡೆದರು.
ಹೆಚ್ಚುವರಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಸಲೀಂಪಾಷಾ ಡಿವೈಎಸ್‍ಪಿ ಶರಣಬಸವರಾಜ್, ಹೊಸಪೇಟೆ ಪಟ್ಟಣ ಪೊಲೀಸ ಠಾಣೆಯ ಇನ್ಸ್‍ಪೇಕ್ಟರ್ ಲಖನ್ ಮುಸಗುಪ್ಪಿ, ಗ್ರಾಮೀಣಠಾಣೆಯ ಗುರುರಾಜ ಕಟ್ಟಿಮನಿ, ಚಿತ್ತವಾಡ್ಗಿಯ ಅಶ್ವಥ ನಾರಾಯಣ ಯಾತನೂರು, ಶ್ರೀಕಾಂತ, ಮಲ್ಲನಗೌಡ ನಾಯ್ಕರ್ ಹಂಪಿ ಪಿಎಸ್‍ಐ ಶಿವಕುಮಾರ ನಾಯ್ಕ್, ಹನುಮಂತಪ್ಪ ತಳವಾರ ಸೇರದಂತೆ ಪೊಲೀಸರು ಇದ್ದರು.