ಪೊಲೀಸ ಇಲಾಖೆಯಿಂದ ಕೋವಿಡ್-19 ಜಾಗೃತಿ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಇಂಡಿ:ಎ.19: ದೇಶದಲ್ಲಿ ಅತ್ಯಂತ ಅಪಾಯಕಾರಿಯಾಗಿ ಜನರನ್ನು ಬಲಿ ತಗೆದಕೋಳ್ಳುತ್ತಿರುವ ಮಹಾಮಾರಿ ಕೊರೋನಾ 2ನೇ ಅಲಿಯು ತಡೆಗಟ್ಟುವ ನಿಟ್ಟಿನಲ್ಲಿ. ಜನರು ಜಾಗ್ರತೆಯಿಂದ ಮಾಸ್ಕ, ಸನಿಟೈಜರ, ಸಾಮಾಜಿಕ ಅಂತರ ಕಾಯ್ದುಕೋಳ್ಳಬೇಕು. ಕಡ್ಡಾಯವಾಗಿ ಎಲ್ಲರೊ ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಗಂಟಲ ದ್ರವ ಪರಿಕ್ಷೆಮಾಡಿಸಿಕೋಳ್ಳಬೇಕು ಜೊತೆಗೆ ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೋಳ್ಳಬೇಕು ಎಂದು ಡಿ,ವೈ,ಎಸ್,ಪಿ, ಶ್ರೀಧರ ದೊಡ್ಡಿ ಅವರು ಹೇಳಿದರು. ಪ್ರತಿಯೋಬ್ಬರು ಮನೆಯಿಂದ ಆಚೆಗೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು ಮಾಸ್ಕ ಧರಿಸದೆ ರಸ್ತೆಯಲ್ಲಿ ಅಡ್ಡಾಡುವುದನ್ನು ಕಂಡುಬಂದರೆ ಅಂತಹವರನ್ನು 100ರೊ ಗಳು ದಂಡವಿದಿಸಲಾಗುತ್ತದೆ ಎಂದು ಎಚ್ಚರಿಕೆ ನಿಡಿಸದರು. ನಗರದ ಮಿನಿ ವಿಧಾನ ಸೌಧದಿಂದ ಬಸವೇಶ್ವರ ವೃತ್ತ ಅಲ್ಲಿಯಿಂದ ಡಾ|| ಅಂಬೇಡ್ಕರ ವೃತ್ತ ಅಲ್ಲಿಯಿಂದ ಪೊಲೀಸ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದ ವರೆಗ ಪೊಲೀಸ ಇಲಾಖೆವತಿಯಿಂದ ಕೋವಿಡ-19 ಜಾಗೃತಿ ಮೂಡಿಸುವ ಕಾಂiÀರ್iಕ್ರಮ ಹಮ್ಮಿಕೋಳ್ಳಲಾಯಿತು. ಡಾ|| ಕೊಳೇಕರ ಹಾಗೂ ಪುರಸಭೆ ಮುಖ್ಯಾಧಿಕಾರಿ ಪೂಜಾರಿ ಅವರು ಮಾತನಾಡಿ ವiಹಾಮಾರಿ ಕೊರೋನಾ ವೈರಸ್ ಬಗ್ಗೆ ಯಾರು ನಿರ್ಲಕ್ಸಿಸಬಾರದು ವಾಕ್ಸಿನ ಲಸಿಕೆ ಹಾಕಿಸಿಕೋಳ್ಳಬೇಕು ಯಾರು ಭಯ ಪಡುವ ಅವಶಕತೆಯಿಲ್ಲ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಬಾಗಿಯಾದ ಉಪ ವಿಭಾಗಾಧಿಕಾರಿ ರಾಹುಲ ಸಿಂಧೆ, ತಹಶೀಲ್ದಾರ ಚಿದಂಬರ ಕುಲಕರ್ಣಿ, ಇಂಡಿ ಕ್ಷೇತ್ರಶಿಕ್ಷಣಧಿಕಾರಿ ವಸಂತ ರಾಠೋಡ, ಚಡಚಣ ಕ್ಷೇತ್ರಶಿಕ್ಷಣಾಧಿಕಾರಿಗಳು, ಸಿ,ಪಿ,ಆಯ್ ರಾಜಶೇಖರ ಬಡದೇಸಾರ, ಗ್ರಾಮೀಣ ಪೊಲೀಸ ಠಾಣೆ ಪಿ,ಅಸ್,ಎಯ್, ಮಾಳಪ್ಪ ಪೂಜಾರಿ, ಪೇದೆ ಪಾಂಡು ರಾಠೋಡ ಹಾಗೂ ಎಲ್ಲ ಪೊಲೀಸ ಸಿಬ್ಬಂದಿಗಳು ಹಾಜರಿದ್ದರು.