ಪೊಲೀಸ ಇಲಾಖೆಯಿಂದ ಕೋವಿಡ್-19 ಜಾಗೃತಿ ಸಭೆ

(ಸಂಜೆವಾಣಿ ವಾರ್ತೆ)
ಇಂಡಿ:ಎ.24: ದೇಶದಲ್ಲಿ ಅತ್ಯಂತ ಅಪಾಯಕಾರಿಯಾಗಿ ಜನರನ್ನು ಬಲಿ ತಗೆದಕೋಳ್ಳುತ್ತಿರುವ ಮಹಾಮಾರಿ ಕೊರೋನಾ 2ನೇ ಅಲಿಯು ತಡೆಗಟ್ಟುವ ನಿಟ್ಟಿನಲ್ಲಿ. ಜನರು ಜಾಗ್ರತೆಯಿಂದ ಮಾಸ್ಕ, ಸನಿಟೈಜರ, ಸಾಮಾಜಿಕ ಅಂತರ ಕಾಯ್ದುಕೋಳ್ಳಬೇಕು. ಕಡ್ಡಾಯವಾಗಿ ಎಲ್ಲರೊ ಸರಕಾರಿ ತಾಲೂಕಾ ಆಸ್ಪತ್ರೆಯಲ್ಲಿ ಗಂಟಲ ದ್ರವ ಪರಿಕ್ಷೆಮಾಡಿಸಿಕೋಳ್ಳಬೇಕು ಜೊತೆಗೆ ವ್ಯಾಕ್ಸಿನ್ ಲಸಿಕೆಯನ್ನು ಹಾಕಿಸಿಕೋಳ್ಳಬೇಕು ಎಂದು ಡಿ,ವೈ,ಎಸ್,ಪಿ, ಶ್ರೀಧರ ದೊಡ್ಡಿ ಅವರು ಹೇಳಿದರು. ಪಟ್ಟಣದ ಪೊಲೀಸ ಉಪ ವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಶುಕ್ರವಾರ ಸಾಯಂಕಾಲ 5.30 ಘಂಟೆಗೆ ಕರೆಯಲಾದ ಕೋವಿಡ-19ಜಾಗ್ರತಿ ಸಭೆಯಲ್ಲಿ ಮುಖ್ಯವಾಗಿ ಈ ಭಾಗದ ಮಸಿದಿ ಮುಖ್ಯಸ್ಥರು, ದೇವಸ್ಥಾನದ ಅರ್ಚಕರು, (ಪೊಜಾರಿಗಳು) ಹಾಗೂ ಅತಿಮುಖ್ಯವಾಗಿ ಎಲ್ಲ ಸಮುದಾಯದ ಮುಖ್ಯಸ್ಥರನ್ನು ಈ ಸಭೆಗೆ ಆವ್ಹಾನಿಸಿದರು. ನಾವು ಸರಕಾರದ ಮಾರ್ಗಸೂಚಿಯಂತೆ ನೈಟಕಪ್ರ್ಯಿ, ವೀಕೆಂಡ ಕಪ್ರ್ಯಿ, ನಾವು ನೀಡುತ್ತಿರುವ ಕ್ರಮವನ್ನು ಸಭೆಯಲ್ಲಿ ಪ್ರಸ್ಥಾಪಿಸಲಾಯಿತು. ಈ ಸಭೆಗೆ ಸಂಬಂದಸಿದ ತಮ್ಮ ಅನಿಸಿಕೆಯನ್ನು ಎನಾದರು ಇದ್ದರೆ ನಮಗೆ ತಿಳಿಸಬೇಕು ಎಂದರು. ಒಟ್ಟಾರೆ ತಾವುಗಳು ಸಾರ್ವಜನಿಕರು ಪೊಲೀಸ ಇಲಾಖೆಗೆ ಸಹಕಾರ ನೀಡಬೇಕು ಎಂದು ಮನವಿಮಾಡಿಕೋಂಡರು.