ಪೊಲೀಸ್ ಸಿಬ್ಬಂದಿ ಕುಟುಂಬಕ್ಕೆ ಲಸಿಕೆ

ಹಿರಿಯೂರು.ಮೇ.೧: ಹಿರಿಯೂರು ಪೊಲೀಸ್ ಇಲಾಖೆ ಸಿಬ್ಬಂದಿ ಕುಟುಂಬ ವರ್ಗದವರಿಗೆ ಕೊರೊನಾ ವಿರುದ್ಧದ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಡಿ.ವೈ.ಎಸ್.ಪಿ ರೋಷನ್ ಜಮೀರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೊನಾ ವಿರುದ್ಧ ಎಲ್ಲರೂ ಜಾಗೃತರಾಗಿರಬೇಕು ಭಯ ಪಡುವುದು ಬೇಡ ಎಚ್ಚರಿಕೆ ಇಂದ ಇರಬೇಕು ಎಂದರು. ಪೊಲೀಸ್ ಸಿಬ್ಬಂದಿ ಕುಟುಂಬ ವರ್ಗದವರು 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ರವರು ಮಾತನಾಡಿ ಈ ಹಿಂದೆ ಲಸಿಕೆ ಪಡೆದವರು ಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸಿಕೊಳ್ಳಿ ಕೊರೊನಾ ಹರಡುವುದನ್ನು ತಡೆಯಬಹುದು ಎಂದು ತಿಳಿಸಿದರು. ವೃತ್ತ ನಿರೀಕ್ಷಕರಾದ ಕೆ.ಆರ್.ರಾಘವೇಂದ್ರ, ಶಿವಕುಮಾರ್, ಪಿ.ಎಸ್.ಐ ರವರಾದ ಮಂಜುನಾಥ್, ಪರಶುರಾಮ್ ಎಂ ಲಮಾಣಿ, ಶಶಿಕಲಾ, ಅಶ್ವಿನಿ, ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.