ಪೊಲೀಸ್ ಸಿಬ್ಬಂದಿಗೆ ಹೊಸ ಬೈಕ್

Basavaraj bommi giving keys to police who lost vehicle at dg halli fire at police officer mess kamal panth praveen sood are seen0

ಬೆಂಗಳೂರು,ನ.೧೨-ಅಶೋಕ್ ನಗರದ ಹಿರಿಯ ಪೊಲೀಸ್ ಅಧಿಕಾರಿಗಳ ಮೆಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಗಲಭೆಯಲ್ಲಿ ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಪೊಲೀಸ್ ಸಿಬ್ಬಂದಿ ಬೈಕ್ ಸುಟ್ಟು ಹೋಗಿದ್ದು ಅಂದು ಬೈಕ್ ಕಳೆದುಕೊಂಡ ಪೊಲೀಸ್ ಸಿಬ್ಬಂದಿಗೆ ಹೊಸ ಬೈಕ್ ಗಳನ್ನ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ವಿತರಿಸಿದರು.
ಕಳೆದ ಆಗಸ್ಟ್ ೧೧ ರಂದು ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ನಡೆದಿದ್ದ ಗಲಭೆಯಿಂದ ೨೫ಕ್ಕೂ ಹೆಚ್ಚು ಕರ್ತವ್ಯನಿರತ ಪೊಲೀಸರ ಬೈಕ್ ಗಳು ಬೆಂಕಿಗೆ ಆಹುತಿಯಾಗಿದ್ದವು.
ಬಹುತೇಕ ಬೈಕ್??ಗಳನ್ನು ಡಿ. ಜೆ. ಹಳ್ಳಿ ಪೊಲೀಸ್? ಠಾಣೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಹಾಗೂ ಕಿಡಿಗೇಡಿಗಳ ದಾಂಧಲೆಯಿಂದ ಬೈಕ್???ಗಳನ್ನ ಹೊರಗೆ ತರಲು ಸಾಧ್ಯವಾಗದೆ ಇದ್ದ ಕಾರಣ ಅವು ಸುಟ್ಟು ಕರಕಲಾಗಿದ್ದವು.
ಹೀಗಾಗಿ ೨೫ ಟಿವಿಎಸ್ ಅಪಾಚೆ ಬೈಕ್??ಗಳನ್ನ ಉಚಿತವಾಗಿ ವಿತರಣೆ ಮಾಡಲಾಗಿದೆ.
ಬೈಕ್ ವಿತರಣೆ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪೊಲೀಸ್ ವ್ಯವಸ್ಥೆ ಇಲ್ಲದೆ ನಮ್ಮ ಜೀವನ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಡಿ. ಜೆ. ಹಳ್ಳಿ ಗಲಭೆ ವೇಳೆ ಠಾಣೆ ಸೇರಿದಂತೆ ಪೊಲೀಸರ ವಾಹನ ನಾಶವಾಗಿದ್ದವು ಎಂದು ಹೇಳಿದರು
ಜೊತೆಗೆ ಪೊಲೀಸ್ ಸಿಬ್ಬಂದಿಯ ಸ್ವಂತ ಬೈಕ್ ಗಳು ಸಹ ಭಸ್ಮವಾಗಿದ್ದವು. ಇದರಿಂದ ಸಿಬ್ಬಂದಿಗೆ ಬೈಕ್ ಇಲ್ಲವಾದ್ದರಿಂದ ನಗರ ಪೊಲೀಸ್ ಕಮಿಷನರ್ ಅವರು ಟಿವಿಎಸ್ ಕಂಪನಿ ಜೊತೆ ಮಾತನಾಡಿದ್ದು ಅವರು ಒಪ್ಪಿಕೊಂಡು ೨೫ ಬೈಕ್?ಗಳನ್ನ ನೀಡಿದ್ದು ಅವುಗಳನ್ನು ಸಿಬ್ಬಂದಿಗೆ ವಿತರಿಸಲಾಯಿತು ಎಂದರು.

ಸಂಪತ್ ರಾಜ್ ಶರಣಾಗಲು ಬೊಮ್ಮಾಯಿ ಸೂಚನೆ
ಬೆಂಗಳೂರು,ನ.೧೨-ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಮಾಜಿ ಮೇಯರ್ ಸಂಪತ್ ರಾಜ್ ಜವಾಬ್ದಾರಿಯುತ ನಾಗರೀಕನಾಗಿ ಬಂದು ಸಿಸಿಬಿ ಪೊಲೀಸರಿಗೆ ಶರಣಾಗಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ
ಗಲಭೆ ಪ್ರಕರಣದಲ್ಲಿ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಸಂಪತ್ ರಾಜ್ ರಿಂದ ಸಾಕಷ್ಟು ಜನರಿಗೆ ತೊಂದರೆ ಉಂಟಾಗಿದೆ, ಸಾರ್ವಜನಿಕರ ಆಸ್ತಿಪಾಸ್ತಿ ಹಾಳಾಗಿದೆ. ಅವರು ವಿದೇಶಕ್ಕೆ ಪರಾರಿಯಾಗದಂತೆ ಲುಕೌಟ್ ನೋಟೀಸ್ ಹೊರಡಿಸಲಾಗಿದೆ ಎಂದರು.ಮಾಜಿ ಮೇಯರ್ ಸಂಪತ್ ರಾಜ್ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆಗಳು ಇವೆ. ಹೀಗಾಗಿ, ಲುಕೌಟ್ ನೋಟೀಸ್ ನೀಡಲಾಗಿದ್ದು ಎಲ್ಲಿದ್ದರೂ ಅವರನ್ನು ಬಿಡದೇ ಪೊಲೀಸರು ಬಂಧಿಸಲಿದ್ದಾರೆ.
ಪೊಲೀಸರು ಸಮರ್ಥವಾಗಿ ಕೆಲಸ ಮಾಡುತ್ತಾ ಇದ್ದಾರೆ. ನ್ಯಾಯಾಲಯದಲ್ಲಿ ಈ ಪ್ರಕರಣ ಇರುವುದರಿಂದ ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಸೈಬರ್ ಕ್ರೈಂ ಹೆಚ್ಚಾಗಿದೆ. ಪೊಲೀಸ್ ಇಲಾಖೆಯಲ್ಲಿ ಸೈಬರ್ ಎಕ್ಸ್?ಪರ್ಟ್?ಗಳು ಬೇಕಾಗಿದ್ದಾರೆ. ಬೆಂಗಳೂರಿನಲ್ಲಿ ಸೆನ್ ಪೊಲೀಸ್ ಠಾಣೆಗಳನ್ನು ಆರಂಭಿಸ ಲಾಗಿದೆ. ಪೊಲೀಸ್ ಸಿಬ್ಬಂದಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.
ಮೂರು ಪೊಲೀಸ್ ಠಾಣೆಗೆ ಹೊಸದಾಗಿ ಎಸಿಪಿ ನೇಮಕ ಮಾಡಲಾಗುತ್ತದೆ. ಈಗ ಹೊಸದಾಗಿ ಗೋವಿಂದಪುರ ಠಾಣೆ ಪ್ರಾರಂಭವಾಗಲಿದ್ದು, ಡಿಜೆ ಹಳ್ಳಿ , ಕೆಜಿ ಹಳ್ಳಿ ಠಾಣೆ ಮೂರು ಸ್ಟೇಷನ್?ಗೆ ಹೊಸ ಎಸಿಪಿಗಳನ್ನು ನೇಮಕ ಮಾಡಲಾಗುವುದು ಎಂದು ಸಚಿವ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.ಡಿಸೆಂಬರ್ ನಿಂದ ಪೊಲೀಸ್ ಸ್ಟೇಷನ್ ಕೆಲಸ ನಡೆಯಲಿದೆ. ಪ್ರಮುಖವಾಗಿ ಡ್ರಗ್ ವಿರುದ್ದ ಪೊಲೀಸ್ ಇಲಾಖೆ ಸಮರ ಸಾರಿದೆ. ಅದು ಕೂಡ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಕ್ರೈಂ ಕಡಿವಾಣ ಹಾಕುವುದು ಮುಖ್ಯ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.