ಪೊಲೀಸ್ ಸಿಬ್ಬಂದಿಗೆ ಸ್ಯಾನಿಟೈಸರ್ ವಿತರಣೆ

ಮರಿಯಮ್ಮನಹಳ್ಳಿ, ಜೂ.01: ಪಟ್ಟಣದ ಪೊಲೀಸ್ ಠಾಣೆಯ ಪಿ.ಎಸ್.ಐ ಹನುಮಂತಪ್ಪ ತಳವಾರ್ ಮತ್ತು ಸಿಬ್ಬಂದಿಗಳಿಗೆ ಸೋಮವಾರ ಹಂಪಾಪಟ್ಟಣ ಜಿ.ಪಂ. ಸದಸ್ಯ ಕೆ.ಎಚ್.ಮಲ್ಲಿಕಾರ್ಜುನ ನಾಯ್ಕರು ಸ್ಯಾನಿಟೈಸರ್ ಕ್ಯಾನ್‍ಗಳು, ಸ್ಟ್ಯಾಂಡ್ ಹಾಗೂ ಎನ್95 ಸೇರಿದಂತೆ ಇತರೆ ಮಾಸ್ಕ್‍ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಎಸ್‍ಐ ಹನುಮಂತಪ್ಪ ತಳವಾರ್, ಪ್ರತಿಯೊಬ್ಬರು ಸರ್ಕಾರದ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ. ಅಲ್ಲದೆ ಕೋವಿಡ್ ಸೋಂಕು ತಗುಲದಂತೆ ಮುಂಜಾಗ್ರತೆವಹಿಸುವುದರೊಂದಿಗೆ ತಪ್ಪದೆ ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಸಾಮಾಜಿಕ ಅಂತರ ತಪ್ಪದೇ ಕಾಯ್ದುಕೊಳ್ಳಬೇಕು, ಜೊತೆಗೆ ಲಾಕ್‍ಡೌನ್‍ನ ಈ ಸಂದರ್ಭದಲ್ಲಿ ಕಷ್ಟದಲ್ಲಿರುವ ಬಡವರಿಗೆ ಕೈಲಾದಷ್ಟು ಸಹಾಯ ಮಾಡಿ ಎಂದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಪಿಎಸ್‍ಐ ನಾರಾಯಣ ಸೇರಿದಂತೆ ಮುಖಂಡರಾದ ಎಸ್.ಕೃಷ್ಣಾನಾಯ್ಕ, ಪುರಸಭೆ ಸದಸ್ಯ ತಳವಾರ ರಾಘವೇಂದ್ರ, ಕನಕಪ್ಪ, ಜೋಗಿ ಹನುಮಂತಪ್ಪ, ನವೀನ್‍ಕುಮಾರ್, ಟಿ.ಬಸವರಾಜ್, ಅವಿನಾಶ್ ಜಾಧವ್, ಆರ್.ಖುಷಾನಾಯ್ಕ, ಬ್ಯಾಲಕುಂದಿ ಶ್ರೀನಿವಾಸ, ಲಕ್ಷ್ಮಣ ನಾಯ್ಕ, ಪೊಲೀಸ್ ಸಿಬ್ಬಂದಿಗಳಾದ ಸಿದ್ದೇಶ್, ಅಪ್ಪಾಜಿ ಹಾಗೂ ಇತgರು ಇದ್ದರು.