ಪೊಲೀಸ್ ಸಿಬ್ಬಂದಿಗೆ ವಚನ ಚಾರಿಟೇಬಲ್ ಟ್ರಸ್ಟ್ ನಿಂದ ಸಿರಿಧ್ಯಾನ ಗಂಜಿ ವಿತರಣೆ

ಬೀದರ:ಮೇ.15: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಜನಸಂದಣಿ ಆಗದಂತೆ ಎಚ್ಚರ ವಹಿಸಿ ಲಾಕಡೌನ ಯಶಸ್ವಿಗೊಳಿಸಲು ನಿತ್ಯ ಹಗಲಿರಳು ಶ್ರಮಿಸುತ್ತಿರುವ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಇಲ್ಲಿಯ ವಚನ ಚಾರಿಟೇಬಲ್ ಟ್ರಸ್ಟ್ರ್ ವತಿಯಿಂದ ಸಿರಿಧ್ಯಾನ ಗಂಜಿ ಹಾಗೂ ತುಳಸಿ ಖಾಡ್ಯಾ ನೀಡುವ ಮುಖಾಂತರ ಬಸವ ಜಯಂತಿಯಂದು ಟ್ರಸ್ಟ್‍ನ ಸಾಮಾಜಿಕ ಕಾರ್ಯಕ್ಕೆ ಚಾಲನೆ ನೀಡಿತು.

ಕೋವಿಡ್ ಹರಡುವಿಕೆ ತಡೆಗೆ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಹಾಗೂ ನಿರಾಶ್ರಿತರ ಬದುಕು ಬೀದಿಗೆ ಬಿದ್ದಿದೆ. ಇದರ ನಡುವೆ ತಮ್ಮ ಕುಟುಂಬ ಬದಿಗಿಟ್ಟು ಸತತ ಕೊರೋನಾ ಹೋಗಲಾಡಿಲು ಪಣ ತೊಟ್ಟಿನಿಂತ ಪೊಲೀಸ್ ಸಿಬ್ಬಂದಿಗಳು ಸಂಜೆ ಹೊತ್ತಿಗೆ ತುಂಬಾ ಸುಸ್ತಾಗುತ್ತಾರೆ ಹೀಗಾಗಿ ಅವರಿಗೆ ಹೆಚ್ಚಿನ ಸೇವೆ ನೀಡಲು ಉಪಯೋಗವಾಗಲಿ ಎಂದು ಟ್ರಸ್ಟ್ ಶಕ್ತಿವರ್ಧಕ ಸಿರಿಧ್ಯಾನ ಗಂಜಿ ಜೊತೆಗೆ ತುಳಸಿ ಖಾಡ್ಯಾ ನೀಡುತ್ತಿದೆ.

ನಗರದÀ ಅಂಬೇಡ್ಕರ್ ವೃತ, ಮಡಿವಾಳ ವೃತ್, ರೋಟರಿ ವೃತ್ತ, ಜಿಲ್ಲಾಧಿಕಾರಿಗಳ ಕಛೇರಿ ಎದುರುಗಡೆ, ಮೈಲೂರ ಕ್ರಾಸ್, ಬಸ್ ನಿಲ್ದಾಣ ಜನವಾಡ ರಸ್ತೆ ಸೇರಿದಂತೆ ವಿವಿಧೆಡೆ ಕರ್ತವ್ಯದಲ್ಲಿ ನಿರತರಾದ ಪೊಲೀಸ್ ಸಿಬ್ಬಂದಿಗೆ ಗಂಜಿ ಹೊಟ್ಟೆ ತಣ್ಣಗೆ ಮಾಡಿದೆ. ಗಂಜಿ ಹಾಗೂ ತುಳಸಿ ಖ್ಯಾಡ ಸ್ವೀಕರಿಸಿದ ಸಿಬ್ಬಂದಿಯವರು ಸಾಯಂಕಾಲ ಸಮಯದಲ್ಲಿ ಟೀ-ಕಾಫಿ ಕುಡಿಯುವ ಬದಲು ಸಿರಿಧ್ಯಾನ ಕುಡಿಯುವುದು ಉತ್ತಮವಾಗಿದೆ ತುಂಬ ರುಚಿಕರವಾಗಿದೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಪತಿಕ್ರಿಯೆ ವ್ಯಕ್ತವಾದವು ಹೀಗಾಗಿ ಮೊನ್ನಯಷ್ಟೆ ಟ್ರಸ್ಟ್ ಉದ್ಘಾಟನೆಗೊಂಡಿದ್ದು ಬಸವ ಜಯಂತಿ ಯಂದು ಸಾಮಾಜಿಕ ಕಾರ್ಯಕ್ಕೆ ಉದ್ಘಾಟನೆ ಮಾಡಲಾಗಿದೆ ಲಾಕ್ ಮುಗಿಯುವ ವರೆಗೂ ಕೊರೋನಾ ವಾರಿಯರ್ಸ್‍ಗಳಿಗೆ ಪ್ರತಿದಿನ ಸಾಯಂಕಾಲ ಸಿರಿಧ್ಯಾನ ಗಂಜಿ- ತುಳಸಿ ಖಾಡ್ಯಾ ನೀಡಲಾಗುವುದು ಎನ್ನುತ್ತಾರೆ ಟ್ರಸ್ಟ್‍ನ ಅಧ್ಯಕ್ಷ ಶಿವಕುಮಾರ ಸಾಲಿ.

ಈ ಸಂದರ್ಭದಲ್ಲಿ ವಿ.ಟಿ.ಎಸ್. ವ್ಯವಸ್ಥಾಪಕ ಅಲ್ಲಮಪ್ರಭು ನಾವದಗೆರೆ, ಸಿರಿಧ್ಯಾನ್ಯ ಖ್ಯಾತಿಯ ಸಂಗಪ್ಪ ಹಿಪ್ಪಳಗಾವೆ, ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಜಗನ್ನಾಥ ಶಿವಯೋಗಿ, ಸಂಗಾರೆಡ್ಡಿ, ಸೇರಿದಂತೆ ಟ್ರಸ್ಟ್‍ನ ಕಾರ್ಯಕರ್ತರು ಭಾಗವಹಿಸಿದ್ದರು.