ಪೊಲೀಸ್ ಸಿಬ್ಬಂದಿಗೆ ಮುಖಗವಸು ವಿತರಣೆ

ಚಿತ್ರದುರ್ಗ. ಜೂ.೫; ಕೋವಿಡ್ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ  ಚಿತ್ರದುರ್ಗ ಜಿಲ್ಲೆಯ  ಪೊಲೀಸ್ ಇಲಾಖೆಗೆ ನೆರವಾಗುವಾಂತೆ   1000 ಮುಖ ಕವಚ , 2500 ಲೀಟರ್ ಸ್ಯಾನಿಟೈಸರ್  ಅನ್ನು  ಗಣಿಮಾಲೀಕರು ಮತ್ತು ಉದ್ಯಮಿಗಳು ಆಗಿರುವ  ಆರ್ .ಪ್ರವೀಣ್ ಚಂದ್ರ ಅವರು ಇಆರ್ ಎಂ  ಸಮೂಹದ ಪರವಾಗಿ  ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ  ಶ್ರೀಮತಿ ಜಿ .ರಾಧಿಕಾ ರವರಿಗೆ   ಹಸ್ತಾಂತರಿಸಿದರು.  ಸಮೂಹದ ಪರವಾಗಿ  ಅಧಿಕಾರಿಗಳಾದ  ರುದ್ರಪ್ಪ  ಮತ್ತು ವಿನಯ್ ಇವರು ಹಾಜರಿದ್ದರು.