ಪೊಲೀಸ್ ಸಿಬ್ಬಂದಿಗೆ ಆಯುಷ್ ಔಷಧ ಕಿಟ್ ವಿತರಣೆ

ಬಾಗಲಕೋಟೆ,ನ.8 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಆಯುಷ್ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ಅನುಮೋದಿತ ಮಾರ್ಗ ಸೂಚಿಗಳನ್ವಯ ಹುನಗುಂದ ಪೊಲೀಸ್ ಠಾಣೆಯ ಸಿ.ಪಿ.ಐ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಅಯ್ಯನಗೌಡ ವ್ಹಿ ಪಾಟೀಲ ಸಿ. ಪಿ. ಆಯ್. ಆಯುಷ್ ಔಷಧಿ ಕಿಟ್‍ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಆಯುರ್ವೇದ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ ಮಾತನಾಡಿ ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಮುನ್ನಚರಿಕೆ ಕ್ರಮವಾಗಿ ಆಯುಷ್ ಔಷಧಿಗಳಾದ ಸಂಶಮನಿ ವಟಿ, (ಆಯುರ್ವೇದ)-250 ಮಿ.ಗ್ರಾಂ ಮಾತ್ರೆಗಳು ಹಾಗೂ ಅರ್ಕ್ ಎ ಅಜೀಬ್(ಯುನಾನಿ), ಅರ್ಸೆನಿಕ್ ಅಲ್ಬಂ(ಹೊಮಿಯೋಪತಿ) ಈ ಔಷಧಿಗಳ ಮಹತ್ವ ಹಾಗೂ ಅದನ್ನು ಸೇವಿಸುವ ವಿಧಾನವನ್ನು ಸವಿಸ್ತಾರವಾಗಿ ಹೇಳಿದರು. ಚಿತ್ತವಾಡಗಿ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ||ಶಿವಾನಂದ ನಿಡಗುಂದಿ ಇದ್ದರು.