ಪೊಲೀಸ್ ವೃತ್ತಿಜೀವನ‌ ಪುಸ್ತಕದಲ್ಲಿ ಬಿಚ್ಚಿಟ್ಟ ಅಣ್ಣಾಮಲೈ

ಬೆಂಗಳೂರು,ಜ.13-ದಕ್ಷ ನಿಷ್ಠ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ಖ್ಯಾತಿ ಪಡೆದು ರಾಜೀನಾಮೆ ನೀಡಿರುವ ಮಾಜಿ‌ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ‌ ಅವರು ಸುದೀರ್ಘ ವೃತ್ತಿ ಜೀವನದಲ್ಲಿ ಕಂಡು- ಕೇಳಿದ ತಮ್ಮ ಅನುಭವದ ಬುತ್ತಿಯನ್ನು ‘ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ ಎಂಬ ಪುಸ್ತಕದಲ್ಲಿ ತೆರೆದಿಟ್ಟಾರೆ.
ನಾಚಿಕೆ, ಸರಳ ಹಳ್ಳಿಯ ಹುಡುಗ ಸಾರ್ವಜನಿಕ ಸೇವೆಗೆ ಅರ್ಪಿಸಿಕೊಂಡದ್ದು ಹೇಗೆ? ಕರ್ನಾಟಕದಲ್ಲಿನ ಒಂದು ದಶಕದ ವೃತ್ತಿ ಜೀವನದಲ್ಲಿ ಅವರು ಇಷ್ಟೆಲ್ಲಾ ಗೌರವ ಗಳಿಸಲು ಹೇಗೆ ಸಾಧ್ಯವಾಯಿತು?
ಅವರ ವೃತ್ತಿ ಜೀವನದಲ್ಲಿ ಎದುರಾದ ಪ್ರಶ್ನೆಗಳು ಏನು ಎಂಬುದರ ಜತೆಗೆ, ರಾಜಕಾರಣಿಗಳು ಕೆಟ್ಟವರೇ? ಮತ್ತು ಉತ್ತಮ ನಡತೆಯುಳ್ಳ ಜನರು ರಾಜಕೀಯ ಪ್ರವೇಶ ಮಾಡಲು ಭಯಪಡುವಂಥ ಸ್ಥಳವಾಗಿದೆಯೆ ಎಂಬಿತ್ಯಾದಿಯ ಬಗ್ಗೆ ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ ಪುಸ್ತಕದಲ್ಲಿ ವಿವರಣೆ ನೀಡಲಾಗಿದೆ.
ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಹೇಗೆ ಮಾನವೀಯ ನೆಲೆಗಟ್ಟಿನಲ್ಲಿ ಅವರನ್ನು ತಂದು ನಿಲ್ಲಿಸಿತು? ಕೆಲವೇ ವರ್ಷಗಳಲ್ಲಿ ತಾವು ಹೇಗೆ ‘ಕರ್ನಾಟಕದ ಸಿಂಗಂ’ ಆಗಿರುವುದು ಎಂಬ ಮಾಹಿತಿ ಈ ಪುಸ್ತಕದಲ್ಲಿ ಇದೆ ಎನ್ನಲಾಗಿದೆ.
ಪೊಲೀಸ್​ ಹುದ್ದೆಯ ಪಯಣದಲ್ಲಿ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿರುವ ಸ್ಟೆಪ್ಪಿಂಗ್​ ಬಿಯಾಂಡ್​ ಖಾಕಿ’ಪುಸ್ತಕ ಇದೇ 18ರಂದು ಬಿಡುಗಡೆಯಾಗಲಿದೆ.
ಪೊಲೀಸ್ ಕೆಲಸ ದೇವರಿಗೆ ಬಹಳ ಹತ್ತಿರವಾದ ಹಾಗೂ ಹೆಚ್ಚು ಜವಾಬ್ದಾರಿಯ ಕೆಲಸ. ಈ ಕೆಲಸದಲ್ಲಿ ನಾನು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೇನೆ. ಆದರೆ ಕುಟುಂಬದ ಜತೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ, ಕೆಲಸಕ್ಕೆ 2019ರಲ್ಲಿ ರಾಜೀನಾಮೆ ನೀಡಿರುವವರು ಅಣ್ಣಾಮಲೈ. ನಂತರ ಬಿಜೆಪಿಯಿಂದ ಪ್ರಭಾವಿತರಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.