ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ

ಹುಬ್ಬಳ್ಳಿ ನ.21: ಪೆÇಲೀಸರು ತಮ್ಮ ದಿನನಿತ್ಯದ ಕಾರ್ಯ ಒತ್ತಡದಲ್ಲಿ ವ್ಯಾಯಾಮಕ್ಕೆ ಆದ್ಯತೆ ನೀಡುವುದು ಅವಶ್ಯಕವಾಗಿದೆ. ಸಾರ್ವಜನಿಕರು ನೆನೆಯುವ ಕಾರ್ಯಗಳಲ್ಲಿ ಪೆÇಲೀಸರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ನಿವೃತ್ತ ಪೆÇಲೀಸ್ ಮಹಾ ನಿರ್ದೇಶಕ ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.
ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪೆÇಲೀಸ್ ಆಯುಕ್ತಾಲಯ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಪೆÇಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ಪೆÇಲೀಸ್ ಆಯುಕ್ತ ಲಾಭೂ ರಾಮ್ ಸ್ವಾಗತಿಸಿ ಮಾತನಾಡಿ, ಕ್ರೀಡಾ ಮನೋಭಾವದಿಂದ ಎಲ್ಲರೂ ಭಾಗವಹಿಸಿದ್ದೀರಿ. ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ಕ್ರೀಡಾ ಸ್ಪೂರ್ತಿಯನ್ನು ಮೆರೆದಿದ್ದಾರೆ. ಮುಂದಿನ ದಿನಗಳಲ್ಲಿ ಯಶಸ್ಸು ದೊರೆಯಲಿ ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಡಾ.ಡಿ.ವಿ. ಗುರುಪ್ರಸಾದ್ ಅವರು ಬರೆದ ಸಿಸ್ಟರ್ ಅಭಯಾ ಸಾವು ಕೊಲೆಯೋ? ಆತ್ಮಹತ್ಯೆಯೋ? ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ನಗರ ಸಶಸ್ತ್ರ ದಳ ತಂಡವು ಪಡೆದುಕೊಂಡಿತ್ತು. ಪುರುಷರ ವಿಭಾಗದಲ್ಲಿ ಸತತ 13 ನೇ ಬಾರಿ ಈರಣ್ಣ ದೇಸಾಯಿ ಮತ್ತು ಮಹಿಳಾ ವಿಭಾಗದಲ್ಲಿ ಶೃತಿ ಅಕ್ಕೊಳ್ಳಿ ಅವರು ವೈಯುಕ್ತಿಕ ವೀರಾಗ್ರಣಿಯಾಗಿ ಹೊರ ಹೊಮ್ಮಿದರು.
ಆರಕ್ಷಕ ನಿರೀಕ್ಷಕರಾದ ಮಾರುತಿ ಹೆಗಡೆ ಕ್ರೀಡಾ ಕವಾಯತು ನಾಯಕತ್ವದಲ್ಲಿ ದಕ್ಷಿಣ, ಉತ್ತರ, ಮಹಿಳಾ, ಸಿಎಆರ್, ಧಾರವಾಡ ಮತ್ತು ಸಂಚಾರ ವಿಭಾಗದ ತಂಡಗಳು ಪಥ ಸಂಚಲನ ನಡೆಸಿದವು.
ವೈಯಕ್ತಿಕ ಹಾಗೂ ಗುಂಪು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಿಸಿಪಿ ಸಾಹಿಲ್ ಬಾಗ್ಲಾ, ಪೆÇಲೀಸ್ ಇಲಾಖೆಯ ನಿವೃತ್ತ ಅಧಿಕಾರಿಗಳು, ಕುಟುಂಬಸ್ಥರು, ಸಾರ್ವಜನಿಕರು ಹಾಜರಿದ್ದರು.
ಪೆÇಲೀಸ್ ಇನ್ಸಪೆಕ್ಟರ್ ಜಗದೀಶ ಹಂಚಿನಾಳ ನಿರೂಪಿಸಿದರು. ಡಿಸಿಪಿ ಗೋಪಾಲ ಬ್ಯಾಕೋಡ ವಂದಿಸಿದರು.