ಪೊಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜನೆಗೆ ಒತ್ತಾಯ

ಬಂಗಾರಪೇಟೆ, ನ. ೧೪:ಕೂಡಲೇ ಸರ್ಕಾರ ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನಿಯೋಜಿಸಬೇಕೆಂದು ಕರ್ನಾಟಕ ದಲಿತ ಸಮಾಜ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯಾದ ಶ್ರೀಮಾನ್ಯ ಮನೋಜ್‌ಕುಮಾರ್ ಮೀನಾ ರವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.
ಇಂದು ಪಟ್ಟಣದ ಡಾಕ್ಟರ್ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾ ಹೇಳಿಕೆ ಉದ್ದೇಶಿಸಿ ಅವರು ಮಾತನಾಡುತ್ತಾ ಕೆಜಿಎಫ್ ಜಿಲ್ಲಾ ವರಿಷ್ಠಾಧಿಕಾರಿಗಳು ವರ್ಗಾವಣೆಗೊಂಡು ಸುಮಾರು ತಿಂಗಳುಗಳು ಆಗಿದ್ದರು ಸಹ ನಿಯೋಜನೆ ಮಾಡಿದೆ ಇರುವುದು ತುಂಬಾ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇತ್ತೀಚಿಗೆ ಪ್ರಕಟಗೊಂಡಿರುವ ಎಂಎಲ್‌ಸಿ ಚುನಾವಣೆ ನೀತಿ ಸಮತಿ ಜಾರಿಯಲ್ಲಿದ್ದರೂ ಸಹ ವರಿಷ್ಠಾಧಿಕಾರಿಗಳನ್ನು ನಿಯೋಜನೆ ಮಾಡದೆ ಇರುವುದು ಖಂಡನೀಯ, ಒಂದು ಮನೆಗೆ ಯಜಮಾನ ಎಂಬುವವರು ಇರಬೇಕು ಆದರೆ ಕೆಜಿಎಫ್ ಪೊಲೀಸ್ ಇಲಾಖೆಯಲ್ಲಿ ಇಲ್ಲದಂತಾಗಿದೆ.
ಆದಕಾರಣ ತಾವುಗಳು ಕೆಜಿಎಫ್ ಹಾಗೂ ಬಂಗಾರಪೇಟೆ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಗಮನಕ್ಕೆ ತಂದು ಈ ಕೂಡಲೇ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿಗಳನ್ನು ನೇಮಕ ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಆತ್ಮವಿಶ್ವಾಸ ವೇದಿಕೆ ಹಾಗೂ ಡಿ.ಎಸ್.ಎಸ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೀಸಂದ್ರ ದಿಡೀರ್ ಎಂ.ಎನ್. ಭಾರದ್ವಾಜ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ರಾಜ್ಯ ಮುಖಂಡ ವೆಂಕಟಾಚಲಪತಿ, ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ರಮೇಶಗೌಡ, ಮಾನವ ಧರ್ಮ ಸಂಸ್ಥಾಪಕರಾದ ಅಬ್ಬಯ್ಯಪ್ಪ, ಬಾವರಹಳ್ಳಿ ಮುನಿಯಪ್ಪ, ಎಂ.ಎ.ಎಸ್. ಗೌಡ, ವೆಂಕಟಪ್ಪ, ಸಮಾಜ ಸೇವಕ ಗಂಮ್ಮನಪಾಳ್ಯದ ರಾಜೇಶ್ ಹಾಗೂ ಮೊದಲಾದವರು ಇದ್ದರು.