ಪೊಲೀಸ್ ಮಹಾ ನಿರೀಕ್ಷಕ ತ್ಯಾಗರಾಜ ಭೇಟಿ: ಕುಂದು ಕೊರತೆಗಳ ಕುರಿತು ಚರ್ಚೆ

ಸಂಜೆವಾಣಿ ವಾರ್ತೆ

ಚಿತ್ರದುರ್ಗ.ಜು.೪; ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸೋಮವಾರ ದಾವಣಗೆರೆ ವಿಭಾಗದ ಪೊಲೀಸ್ ಮಹಾ ನಿರೀಕ್ಷಕ ತ್ಯಾಗರಾಜ ಭೇಟಿ ನೀಡಿದರು.ನಾಗರೀಕ ಬಂದೂಕು ತರಬೇತಿ ಹಾಗೂ ಮಕ್ಕಳಿಗೆ ಸಂಚಾರ ಜಾಗೃತಿ ಸೇರಿದಂತೆ  ನಗರದ ನಾಗರೀಕರ ಕುಂದು ಕೊರತೆಗಳ ಬಗ್ಗೆ ಚರ್ಚಿಸಿ ಹಲವು ಸಲಹೆ ಸೂಚನೆಗಳನ್ನು ಪೊಲೀಸ್ ಅಧಿಕಾರಿಗಳಿಗೆ ನೀಡಿದರು.ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕುಸ್ತಿಪಟು ಸದ್ದಾಂ ಆಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಜೆ.ಕುಮಾರಸ್ವಾಮಿ ಸೇರಿದಂತೆ ರೈಫಲ್ ಕ್ಲಬ್ ಅಧ್ಯಕ್ಷ ಅನಂತರೆಡ್ಡಿ, ಕಾರ್ಯದರ್ಶಿ ಮಹಮ್ಮದ್ ಫೈಜುಲ್ಲಾ  ಪಿ, ಮಹಮ್ಮದ್ ಆಲಿ, ಮಹೇಂದ್ರನಾಥ.ವೈ.ಬಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.