ಪೊಲೀಸ್ ಫಿಟ್ನೆಸ್ ಯೋಗ ಶಿಬಿರ ಸಮಾರೋಪ

ಹುಬ್ಬಳ್ಳಿ, ಮಾ31-ಪತಂಜಲಿ ಯೋಗ ಸಮಿತಿ ಮತ್ತು ಕರ್ನಾಟಕ ಪೆÇಲೀಸ್ ಕಮಿಷನರೇಟ್ ಮಂಗಳೂರು ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ 30 ದಿನಗಳ ಪೆÇಲೀಸ್ ಫಿಟ್ನೆಸ್ ಯೋಗ ಶಿಬಿರದ ಸಮಾರೋಪ ಸಮಾರಂಭ ಫಾದರ್ ಮುಲ್ಲರ್ಸ್ ಸಭಾ ಭವನ ಮಂಗಳೂರಿನಲ್ಲಿ ಜರುಗಿತು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪತಂಜಲಿ ಯೋಗಪೀಠದ ಕರ್ನಾಟಕ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ಪೆÇಲೀಸ್ ಆಯುಕ್ತ ಡಾ.ಶಶಿಕುಮಾರ್ ಉಪ ಆಯುಕ್ತ ಹರಿ ರಾಮ್ ಶಂಕರ್, ಪತಂಜಲಿ ಯೋಗಪೀಠದ ಕರ್ನಾಟಕ ಸಹ ಪ್ರಾಂತ್ಯ ಪ್ರಭಾರಿ ಡಾ. ಜ್ಞಾನೇಶ್ವರ ನಾಯಕ್, ಪತಂಜಲಿ ಮಹಿಳಾ ಯೋಗ ಸಮಿತಿಯ ದಕ್ಷಿಣ ಕರ್ನಾಟಕ ರಾಜ್ಯ ಪ್ರಭಾರಿ ಶ್ರೀಮತಿ ಸುಜಾತಾ ಮಾರ್ಲಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಭವರಲಾಲ್ ಆರ್ಯ ಅವರು ಮಾತನಾಡಿ ಮಾರ್ಚ್ 1 ರಿಂದ ಮಾರ್ಚ್ 30 ರವರೆಗೆ ನಡೆದ ಈ ಯೋಗ ಶಿಬಿರದಲ್ಲಿ ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದ 70ಕೆಜಿಗಿಂತ ಹೆಚ್ಚು ತೂಕ ಇರುವ ಮಹಿಳೆಯರನ್ನು ಮತ್ತು 80 ಕೆಜಿಗಿಂತ ಹೆಚ್ಚು ತೂಕ ಇರುವ ಪುರುಷರನ್ನು ಆಯ್ಕೆ ಮಾಡಲಾಗಿತ್ತು. 58 ಪುರುಷರು ಮತ್ತು 22 ಮಹಿಳೆಯರನ್ನು ಪತಂಜಲಿ ತಂಡವು ಡಾ. ಜ್ಞಾನೇಶ್ವರ ನಾಯಕ್ ಅವರ ಮಾರ್ಗದರ್ಶನದಲ್ಲಿ ಆಯ್ಕೆ ಮಾಡಿ ತರಬೇತಿ ನೀಡಿದೆ ಎಂದು ಹೇಳಿದರು. ಈ ತರಬೇತಿ ಶಿಬಿರದಲ್ಲಿ ಸಕಾರಾತ್ಮಕ ಫಲಿತಾಂಶಗಳು ಬಂದಿದ್ದು, 3 ಕೆಜಿಯಿಂದ 11 ಕೆಜಿಯ ವರೆಗೆ ತೂಕ ಇಳಿದಿದೆ, ಮತ್ತು ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದವರಿಗೆ, ವೇಗವಾಗಿ ಓಡಲು ಸಾಧ್ಯವಾಗದವರಿಗೆ ಮತ್ತು ಬಿಪಿ, ಸಕ್ಕರೆ ಕಾಯಿಲೆಯಿಂದ ಹಿಡಿದು ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದವರಿಗೆ ಈ ಶಿಬಿರ ಪೂರಕವಾಗಿತ್ತು.
ಪೊಲೀಸ್ ಸಿಬ್ಬಂದಿಗೆ ಯಾವುದೇ ಔಷಧಿ ಇಲ್ಲದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ತಿಳಿಸಲಾಗಿದೆ. ಸಾತ್ವಿಕ ನಿಯಂತ್ರಿತ ಆಹಾರ ಪದ್ಧತಿಯನ್ನು ಅನುಸರಿಸಿ, ಎಲ್ಲರೂ ಅಭ್ಯಾಸವನ್ನು ಮುಂದುವರಿಸಬೇಕು ಮತ್ತು ಗೃಹ ಸಚಿವರು ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಯೋಗ ಶಿಬಿರವನ್ನು ಆಯೋಜಿಸಿದಲ್ಲಿ ಪತಂಜಲಿ ಯೋಗ ಸಮಿತಿ ಎಲ್ಲಾ ಜಿಲ್ಲೆಗಳಲ್ಲಿ ಉಚಿತವಾಗಿ ಸೇವೆ ಸಲ್ಲಿಸಲು ಸಿದ್ಧವಿದೆ ಎಂದು ತಿಳಿಸಿದರು.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಮಂಗಳೂರು ಪೆÇಲೀಸ್ ಆಯುಕ್ತ ಡಾ. . ಶಶಿ ಕುಮಾರ್ ಅವರು ಉಪಕ್ರಮ ಕೈಗೊಂಡು ಬಹಳ ಸುಂದರವಾದ ಯೋಗ ಶಿಬಿರವನ್ನು ಆಯೋಜಿಸಿದ್ದಾರೆ. ಪೆÇಲೀಸ್ ಇಲಾಖೆಯಲ್ಲಿ ಇಂತಹ ಯೋಗ ಶಿಬಿರಗಳ ಅವಶ್ಯಕತೆಯಿದೆ. ಯೋಗ ಶಿಬಿರದ ಫಲಿತಾಂಶಗಳನ್ನು ಕೇಳಿ ನನಗೆ ತುಂಬಾ ಸಂತೋಷವಾಗಿದೆ. ಪೆÇಲೀಸ್ ಆಯುಕ್ತ ಶಶಿಕುಮಾರ್ ಅವರನ್ನು ಮತ್ತು ಎಲ್ಲಾ ಸಿಬ್ಬಂದಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅಧಿಕಾರಿಗಳು, ಶೀಘ್ರದಲ್ಲೇ ಪತಂಜಲಿ ಯೋಗ ಸಮಿತಿಯ ಸಹಕಾರದೊಂದಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಯೋಗ ಶಿಬಿರಗಳನ್ನು ಆಯೋಜಿಸಲಾಗುವುದು. ಯೋಗ ಗುರು ಬಾಬಾ ರಾಮದೇವ್ ಜಿ ಅವರು ಭಾರತದಾದ್ಯಂತ ಯೋಗದ ಆಸಕ್ತಿಯನ್ನು ಬೆಳೆಸುತ್ತಿದ್ದಾರೆ. ಅದೇ ರೀತಿ ಕರ್ನಾಟಕದಲ್ಲಿ ಭವರಲಾಲ್ ಆರ್ಯ ಅವರು ಜನ ಮನಗಳಿಗೆ ಯೋಗವನ್ನು ತಲುಪಿಸುವ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು. ಹೆಚ್ಚು ತೂಕವನ್ನು ಕಳೆದುಕೊಂಡ 5 ಪುರುಷರು ಮತ್ತು ಐದು ಮಹಿಳಾ ಪೆÇಲೀಸರಿಗೆ ಪ್ರಶಸ್ತಿಗಳನ್ನು ನೀಡಲಾಯಿತು. ಭವರಲಾಲ್ ಆರ್ಯ, ಡಾ. ಜ್ಞಾನೇಶ್ವರ ನಾಯಕ್ ಅವರ ಅತ್ಯುತ್ತಮ ಉಚಿತ ಯೋಗ ಸೇವೆಗಾಗಿ ಮತ್ತು ಉಚಿತ ಹಾಲ್ ಒದಗಿಸಿದ್ದಕ್ಕಾಗಿ ಫಾದರ್ ರಿಚರ್ಡ್ಸ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ತರಬೇತಿ ಪಡೆದವರ ಯೋಗ ನೃತ್ಯ ಪ್ರದರ್ಶನ ಕಾರ್ಯಕ್ರಮವನ್ನು ಸಬ್ ಇನ್ಸ್‍ಪೆಕ್ಟರ್ ಜ್ಯೋತಿರ್ಲಿಂಗ ಅವರು ನಡೆಸಿಕೊಟ್ಟರು.