ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

ಮೈಸೂರು:ಏ:03: ಪೆÇಲೀಸರು ಜನಸ್ನೇಹಿಯಾ ಗಿದ್ದುಕೊಂಡು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಬೆಂಗಳೂರು ಪೆÇಲೀಸ್ ಮಹಾನಿರ್ದೇಶಕ ಪದಮ್ ಕುಮಾರ್ ಗರ್ಗ್ ಕರೆ ನೀಡಿದರು.
ಅವರಿಂದು ಕರ್ನಾಟಕ ಪೆÇಲೀಸ್ ಅಕಾಡೆಮಿಯ ಕವಾಯತು ಮೈದಾನದಲ್ಲಿ ಕರ್ನಾಟಕ ಪೆÇಲೀಸ್ ಅಕಾಡೆಮಿ ಮೈಸೂರು 44ನೇ ತಂಡದ ಆರಕ್ಷಕ ಉಪನಿರೀಕ್ಷಕರು(ಸಿವಿಲ್ ಮತ್ತು ಕೆಎಸ್ ಐಎಸ್ ಎಫ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ, ಬಹುಮಾನ ವಿತರಿಸಿ ಮಾತನಾಡಿದರು. ಅಕಾಡೆಮಿ ನಿಮಗೆ ಪರಿಣಾಮಕಾರಿಯಾಗಿ ತರಬೇತಿ ನೀಡಿದೆ ಎಂದು ನಾನು ಭಾವಿಸುತ್ತೇನೆ. ಸಮಾಜದಲ್ಲಿ ನಿಮ್ಮ ಪಾತ್ರಗಳು ಮತ್ತು ಕರ್ತವ್ಯಗಳನ್ನು ನೀವೀಗ ಅರ್ಥಮಾಡಿಕೊಳ್ಳುವಂತೆ ಮಾಡಿ, ಸಾರ್ವಜನಿಕರಿಗೆ ಪೆÇಲೀಸ್ ರನ್ನು ಹೆಚ್ಚು ಜನಸ್ನೇಹಿಯಾಗಿಸಬೇಕು. ಕೋವಿಡ್-19 ನಂತಹ ಕಠಿಣ ಸಂದರ್ಭದಲ್ಲಿ ಕೆಪಿಎ ಕುಟುಂಬವು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿರುವುದು ಶ್ಲಾಘನೀಯ ಎಂದು ಬಣ್ಣಿಸಿದರಲ್ಲದೆ, ನಿಮ್ಮಿಂದ ಇನ್ನೂ ಹೆಚ್ಚಿನ ಸಮಾಜಸೇವೆಗಳು ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಎಲ್ಲ ಪೆÇ್ರಬೆಷನರಿಗಳನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಿಮ್ಮ ಕೈನಲ್ಲಿ ಅಧಿಕಾರವಿದೆ. ಕಾನೂನಿದೆ. ಅದನ್ನು ಬೇರೆಯವರಿಗೆ ನೀಡಲಾಗಿಲ್ಲ. ನಿಮ್ಮ ಜವಾಬ್ದಾರಿಯನ್ನು ಕಾನೂನಿನ ಚೌಕಟ್ಟಿನಲ್ಲಿ ಸಮರ್ಥವಾಗಿ ನಿರ್ವಹಿಸಿ, ನಿರೀಕ್ಷಿತ ಜವಾಬ್ದಾರಿ ಮತ್ತು ಸಹಾನುಭೂತಿಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿ,ನಿಮ್ಮನ್ನು ದೇವರು ಸಂತೋಷದಿಂದ ಮತ್ತು ತೃಪ್ತಿಯಿಂದ ಇಡಲಿ ಎಂದು ಶುಭ ಹಾರೈಸಿದರು.
ಅಶೋಕ ಸಿ.ಎಂ ಪೆÇ್ರ.ಪಿಎಸ್ ಐ(ಸಿವಿಲ್) ಅತ್ಯುತ್ತಮ ರೈಫಲ್ ಫೈರಿಂಗ್ ಕಪ್, ದೇವೇಂದ್ರ ಯೆಲ್ಲಪ್ಪ ಮಾನಿನಂಡಿ ಪೆÇ್ರ.ಪಿಎಸ್ ಐ(ಸಿವಿಲ್) ಅತ್ಯುತ್ತಮ ಒಳಾಂಗಣ ಪೆÇ್ರಬೆಷನರ್ ಕಪ್, ಚೈತ್ರಾ ಎಸ್ ಪೆÇ್ರ.ಪಿಎಸ್ ಐ(ಸಿವಿಲ್) ಅತ್ಯುತ್ತಮ ಮಹಿಳಾ ಹೊರಾಂಗಣ, ರಮೇಶ್ ವಿ ಪೆÇ್ರ.ಪಿಎಸ್ ಐ(ಕೆಎಸ್ ಐಎಸ್ ಎಫ್) ಸಮಗ್ರ ಅತ್ಯುತ್ತಮ ಕೆಎಸ್ ಐಎಸ್ ಎಪ್ ಪೆÇ್ರಬೆಷನರ್, ಉಮಾದೇವಿ ಸಿ ಪೆÇ್ರ ಪಿಎಸ್ ಐ(ಸಿವಿಲ್) ಅತ್ಯುತ್ತಮ ಮಹಿಳಾ ಪೆÇ್ರಬೆಷನರ್ ಕಪ್, ಗೃಹಸಚಿವರ ಟ್ರೋಫಿ ಹಾಗೂ 10ಸಾವಿರ ನಗದು ಬಹುಮಾನ, ಚಿಂತನ ಕೆ.ಆರ್ ಪೆÇ್ರ.ಪಿಎಸ್ ಐ (ಸಿವಿಲ್) ಅತ್ಯುತ್ತಮ ರಿವಾಲ್ವರ್ ಫೈರಿಂಗ್ ಕಪ್, ಚಿಂತನ ಕೆ.ಆರ್. ಪೆÇ್ರ.ಪಿಎಸ್ ಐ(ಸಿವಿಲ್) ಅತ್ಯುತ್ತಮ ಹೊರಾಂಗಣ ಕಪ್, ಚಿಂತನ ಕೆ.ಆರ್ ಪೆÇ್ರ.ಪಿಎಸ್ ಐ (ಸಿವಿಲ್) ಡೈರೆಕ್ಟರ್ ಎಸ್ಸೆಸ್ ಮೆಂಟ್ ಕಪ್, ಚಿಂತನ್ ಕೆ.ಆರ್ ಪೆÇ್ರ.ಪಿಎಸ್ ಐ(ಸಿವಿಲ್) ಸಮಗ್ರ ಅತ್ಯುತ್ತಮ ಪೆÇ್ರಬೆಷನರ್ ಕಪ್, ಮುಖ್ಯಮಂತ್ರಿಗಳ ಟ್ರೋಫಿ, 10ಸಾವಿರ ನಗದು ಬಹುಮಾನವನ್ನು ಪಡೆದಿದ್ದಾರೆ.
ಈ ಸಂದರ್ಭ ಕೆಪಿಎ ನಿರ್ದೇಶಕರಾದ ವಿಪುಲ್ ಕುಮಾರ್, ಉಪನಿರ್ದೇಶಕರಾದ ಸುಮನ್ ಡಿ.ಪನ್ನೇಕರ್, ಸಹಾಯಕ ನಿರ್ದೇಶಕರುಗಳಾದ ಗಜೇಂದ್ರ ಪ್ರಸಾದ್, ಸಿ.ಗೋಪಾಲ್, ಕೆ.ಎಸ್.ಸುಂದರ್ ರಾಜ್, ಮೋಹನ್ ಜಿ.ಎನ್. ಟಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.