ಪೊಲೀಸ್ ಪೇದೆಗಳಿಗೆ ವಿಶೇಷ ಪ್ಯಾಕೆಜ್ ನೀಡಲು ಜೆಡಿಎಸ್ ಆಗ್ರಹ

ರಾಯಚೂರು, ಜೂ.೭-ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ
ಗೃಹ ಸಚಿವರಿಗೆ ಮನವಿ ಸಲ್ಲಿಸಿದರು.
ಕೊರೊನಾ ವಾರಿಯರ್ಸ್ ಆಗಿ ಕಳೆದ ಎರಡು ವರ್ಷಗಳಿಂದ ಹಗಲಿರುಳು ಕೆಲಸ ಮಾಡುತ್ತಿರುವ ಪೊಲೀಸ್ ಪೇದೆಗು ಪ್ರಾಣದ ಹಂಗು ತೊರೆದು ತಮ್ಮಕುಟುಂಬವನ್ನು ಬದಿಗಿಟ್ಟು ಕೆಲಸ ಮಾಡುತ್ತಿದ್ದಾರೆ.
ಕೋವಿಡ್ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆ ಯರಿಗೆ ತಲಾ ೩,೦೦೦ ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ ೨ ಸಾವಿರ ಪರಿಹಾರ ಪ್ಯಾಕೆಜ್ ನೀಡಿದ್ದು ಪೊಲೀಸ್ ಪೇದೆಗಳಿಗೂ೧೦ ಸಾವಿರ ಕೋಟಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿ ಸಂಕಷ್ಟದ ಸಮಯದಲ್ಲಿ ಕೈ ಹಿಡಿಯಬೇಕು ತಕ್ಷಣವೇ ಪ್ಯಾಕೇಜ್ ಘೋಷಣೆ ಮಾಡಲು ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಎನ್.ಶಿವಶಂಕರ ವಕೀಲ,ಪ್ರದಾನ ಕಾರ್ಯದರ್ಶಿ ರಾಮಕೃಷ್ಣ,ಸೇರಿದಂತೆ ಇತರರು ಇದ್ದರು.