ಪೊಲೀಸ್ ಪಥಸಂಚಲನ


ಲಕ್ಷ್ಮೇಶ್ವರ,ಮೇ.2:ಪಟ್ಟಣದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಲ್ಲಿ ಆತ್ಮಸ್ಥೈರ್ಯ ನಿರ್ಭೀತ ಮತ್ತು ಮುಕ್ತ ಮತದಾನ ಮಾಡಲು ಧೈರ್ಯ ತುಂಬಲು ಪೆÇಲೀಸರ ಪಥಸಂಚಲನ ಜರುಗಿತು.
ಹಳೆ ಪೆÇಲೀಸ್ ಠಾಣೆಯಿಂದ ಆರಂಭವಾದ ಪಥಸಂಚಲನವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾಯಿತು.
ಪಥ ಸಂಚಲನದಲ್ಲಿ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಎಸ್ ಬಿ ಸಂಕದ ಡಿ ಎಸ್ ಪಿ ಇನಾಮ್ದಾರ್ ಆರ್‍ಪಿಐ ಶಂಕರಗೌಡ ಚೌಗುಲೆ ಸಿಪಿಐ ನಾಗರಾಜ್ ಮಾಡಳ್ಳಿ ಪಿಎಸ್‍ಐ ಈರಣ್ಣ ರಿತ್ತಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮಹೇಶ್ ಹಡಪದ ತಾಲೂಕ ಪಂಚಾಯಿತ ಕಾರ್ಯನಿರ್ವಾಹಕ ಅಧಿಕಾರಿ ಧರ್ಮರ ಕೃಷ್ಣಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.