ಪೊಲೀಸ್ ನೇಮಕಾತಿ ವಯೋಮಿತಿಯಲ್ಲಿ ಎರಡು ವರ್ಷಗಳ ಹೆಚ್ಚಳ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.04: ಕರ್ನಾಟಕರಾಜ್ಯ ಸರ್ಕಾರವು ಪೊಲೀಸ್ ಪೇದೆ ನೇಮಕಾತಿಯಲ್ಲಿನಗರಿಷ್ಠ ವಯೋಮಿತಿಯನ್ನುಎರಡು ವರ್ಷಗಳಿಗೆ ಹೆಚ್ಚಳ ಮಾಡಿರುವುದನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಆರ್ಗನೈಜೇಷನ್ ಕರ್ನಾಟಕ ರಾಜ್ಯ ಸಮಿತಿಯು  ಸ್ವಾಗತಿಸುತ್ತದೆ.
ಕೋವಿಡ್-19 ರಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ನೇಮಕಾತಿಗಳು ಆಗಿಲ್ಲದ ಪ್ರಯುಕ್ತ, ಈ ಬಾರಿ ನಡೆಯುತ್ತಿರುವ ಪೊಲೀಸ್ ಪೇದೆ ನೇಮಕಾತಿಗೆ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಬೇಕೆಂದು ನಮ್ಮ ಸಂಘಟನೆಯ ನೇತೃತ್ವದಲ್ಲಿ ಹಲವಾರು ಜಿಲ್ಲೆಗಳಲ್ಲಿ ಮತ್ತುರಾಜ್ಯ ಮಟ್ಟದಲ್ಲಿ ಪೊಲೀಸ್ ಪೇದೆ ಹುದ್ದೆ ಆಕಾಂಕ್ಷಿಗಳು ಹಾಗೂ ನಿರುದ್ಯೋಗಿಯುವಜನರು ಹೋರಾಟ ನಡೆಸಿದ್ದರು.
ನಿರುದ್ಯೋಗಿಯುವಜನರ ಹೋರಾಟವನ್ನು ಪರಿಗಣಿಸಿ ರಾಜ್ಯ ಸರ್ಕಾರವು ಪೊಲೀಸ್‍ಪೇದೆ ಹುದ್ದೆ ನೇಮಖಾತಿಯಲ್ಲಿನ ವಯೋಮಿತಿಯನ್ನು ಹೆಚ್ಚಳ ಮಾಡಿರುವ ನಿರ್ಧಾರವು ಸೂಕ್ತವಾಗಿದೆ ಮತ್ತು ನ್ಯಾಯೋಚಿತವಾಗಿದೆ.ಈ ಸಂದರ್ಭದಲ್ಲಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತಾ, ಹೋರಾಟದ ಮೂಲಕ ತಮ್ಮ ನ್ಯಾಯೋಚಿತ ಬೇಡಿಕೆಯನ್ನು ಗಳಿಸಿಕೊಂಡ ಪೊಲೀಸ್ ಪೇದೆ ಹುದ್ದೆಆಕಾಂಕ್ಷಿಯುವಜನರನ್ನು ನಮ್ಮಎಐಡಿವೈಓಕರ್ನಾಟಕರಾಜ್ಯ ಸಮಿತಿ ವತಿಯಿಂದಅಭಿನಂದಿಸುತ್ತೇವೆ.
ಸತತವಾದ ಸಂಘಟಿತ ಹೋರಾಟಕ್ಕೆಯಶಸ್ಸು ಶತಃಸಿದ್ಧ ಎಂಬುದು ಈ ಬೆಳವಣಿಗೆಯಿಂದ ಮತ್ತೊಮ್ಮೆ ಸಾಬೀತಾಗಿದೆ.ರಾಜ್ಯದಯುವಜನತೆ ಈ ಹೋರಾಟದಿಂದ ಸ್ಫೂರ್ತಿಗೊಂಡು ನಿರುದ್ಯೋಗವೂ ಸೇರಿದಂತೆ ತಮ್ಮೆಲ್ಲಾ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕೆಂದು ನಾವು ಯುವಜನರಲ್ಲಿ ಮನವಿ ಮಾಡುತ್ತೇವೆಎಂದು ಎ.ಐಡಿ.ವೈ.ಓ ಕರ್ನಾಟಕರಾಜ್ಯ ಸಮಿತಿಯುಕರೆ ನೀಡಿದೆ ಎಂದು ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.