ಪೊಲೀಸ್ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಆನೇಕಲ್. ನ. ೬- ಸರ್ಜಾಪುರ ಪೋಲಿಸ್ ಇನ್ಸ್ ಪೆಕ್ಟರ್ ದೌರ್ಜನ್ಯವನ್ನು ವಿರೋಧಿಸಿ ಮತ್ತು ಸುಮಾರು ೧೮ ಜನ ದಲಿತ ಮುಖಂಡರ ಮೇಲೆ ಸರ್ಜಾಪುರ ಪೋಲಿಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆ ಹಾಕಿರುವುದನ್ನು ಖಂಡಿಸಿ ಆನೇಕಲ್ ತಾಲ್ಲೂಕಿನ ಹೆಗ್ಗೋಂಡನಹಳ್ಳಿ ಗ್ರಾಮದಿಂದ ಸರ್ಜಾಪುರ ಪೋಲಿಸ್ ಠಾಣೆವರೆಗೆ ಕರ್ನಾಟಕ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.


ಹೆಗ್ಗೋಂಡನಹಳ್ಳಿ ಗ್ರಾಮದಿಂದ ಸರ್ಜಾಪುರ ಪೋಲಿಸ್ ಠಾಣೆವರೆಗೆ ಹೋರಾಟಗಾರರು ೭ ಕಿಲೋಮೀಟರ್ ಪಾದಯಾತ್ರೆ ನಡೆಸಿ ಪೋಲಿಸ್ ವಿರುದ್ದ ದಿಕ್ಕಾರಗಳನ್ನು ಕೂಗಿದ ದೃಶ್ಯಗಳು ಕಂಡು ಬಂತು. ಸರ್ಜಾಪುರದ ಡಾ|| ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆ ಸಭೆಗೆ ಚಾಲನೆ ನೀಡಲಾಯಿತು.
ಇನ್ನು ಈ ವೇಳೆ ಹೋರಾಟಗಾರ ಬಿ.ಗೋಪಾಲ್‌ರವರು ಮಾತನಾಡಿ ಒಂದು ತಿಂಗಳ ಒಳಗಾಗಿ ಸಜಾ ಪುರ ಪೋಲಿಸ್ ಇನ್ಸ್ ಪೆಕ್ಟರ್ ಮಂಜು ರವರನ್ನು ಸೇವೆಯಿಂದ ಅಮಾನತು ಗೊಳಿಸಬೇಕು ಎಂದು ಒತ್ತಾಯಿಸಿದರು. ಅಡಿಶಿನಲ್ ಎಸ್ಪಿ ಪುರಷೋತ್ತಮ್ ಮತ್ತು ತಹಶೀಲ್ದಾರ್ ಶಿವಪ್ಪ ಲಮಾಣಿ ರವರು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ಕಾರರ ಮನವಿ ಸ್ವೀಕರಿಸಿ ಕೂಡಲೇ ಸಮಸ್ಯೆ ಬಗಹರಿಸುತ್ತೇನೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹೋರಾಟಗಾರರ ಮಾವಳ್ಳಿ ಶಂಕರ್, ಜೈಬೀಮ್ ಸ್ವಾಮೀಜಿಗಳು. ಕೆ.ಸಿ.ರಾಮಚಂದ್ರ, ಆನೇಕಲ್ ಕೃಷ್ಣಪ್ಪ, ಹೆಣ್ಣೂರು ಶ್ರೀನಿವಾಸ್, ಮುನಿವೆಂಕಟಪ್ಪ, , ಆರ್.ಎಂ.ಎನ್,ರಮೇಶ್, ಡಾ|| ಚಿನ್ನಪ್ಪ ಚಿಕ್ಕಹಾಗಡೆ, ಚಿಕ್ಕನಾಗಮಂಗಲ ಗುರು, ಹುಸ್ಕೂರು ಮದ್ದೂರಪ್ಪ, ಎಂ.ಸಿ.ಹಳ್ಳಿ ವೇಣು. ರಾವಣ, ನಾಗರಾಜ್ ಮೌರ್ಯ, ನೆರಿಗಾ ರಮೇಶ್,ಆನಂದ್ ಚಕ್ರವರ್ತಿ, ವೆಂಕಟೇಶ್, ಹೆಬ್ಬಾಳ ವೆಂಕಟೇಶ್, ಶ್ರೀರಾಮುಲು, ಚಲವಾದಿ ನಾಗರಾಜ್, ರೇವತಿರಾಜ್, ಕ್ರಾಂತಿ ಮುನಿರಾಜು, ಎ.ಗೋಪಾಲ್. ಚೇತನ್, ಗೂಳಿಮಂಗಲ ನಾಗಪ್ಪ. ಮುನಿವೀರಪ್ಪ. ಬೆಟ್ಟದಾಸನಪುರ ಸುಂದರೇಶ್, ಕೃಷ್ಣಮೂರ್ತಿ ಬೆಟ್ಟಿಕರ್ತಿ, ಗೊವಿಂದರಾಜ್, ಸಂದೇಶ್, ಸಿದ್ದರಾಜು, ಮುನಿಯಪ್ಪ,ಚಿನ್ನಪ್ಪ ಮತ್ತು ಸಾವಿರಾರು ಸಂಖ್ಯೆಯಲ್ಲಿ ಬೀಮಬಂದುಗಳು ಭಾಗವಹಿಸಿದ್ದರು.