ಪೊಲೀಸ್ ಠಾಣೆ ಕಟ್ಟಡಗಳ ನಿರ್ಮಾಣಕ್ಕೆ 8.54 ಕೋಟಿ ರೂ. ಮಂಜೂರು

ಬಳ್ಳಾರಿ ಜೂ 05 : ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ. ಜಿಲ್ಲೆಯ ನಾಲ್ಕು ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಮತ್ತು 17 ಪೊಲೀಸ್ ಕಾಲನಿಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ಹಣ ಮಂಜೂರು ಮಾಡಿದೆ.
ಹಂಪಿ ಪ್ರವಾಸಿ ಪೊಲೀಸ್ ಠಾಣೆಗೆ150 ಲಕ್ಷ ರೂ, ಹರಪನಹಳ್ಳಿ ಪೊಲೀಸ್ ಠಾಣೆಗೆ 2.80 ಕೋಟಿ ರೂ, ಸಿರುಗುಪ್ಪ ಪೊಲೀಸ್ ಠಾಣೆಗೆ 280 ಲಕ್ಷ ರೂ ಹಾಗೂ ಮರಿಯಮ್ಮನಹಳ್ಳಿ ಠಾಣೆಗೆ 144.35 ಲಕ್ಷ ರೂಗಳನ್ನು ನಿಗಮದಿಂದ ಮಂಜೂರು ಮಾಡಲಾಗಿದೆ.
ಇನ್ನು ಬಳ್ಳಾರಿಯ ಗಾಂಧಿನಗರ ಪೊಲೀಸ್ ಕಾಲೋನ, ಕೌಲ್ ಬಜಾರ್‌, ಬ್ರೂಸ್‌ಪೇಟೆ ಪೊಲೀಸ್ ಕಾಲನಿ, ಹೊಸಪೇಟೆ
ಪಟ್ಟಣ ಪೊಲೀಸ್ ಕಾಲೋನಿ, ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದ ಪೊಲೀಸ್ ಕಾಲೋನಿ, ಕಂಪ್ಲಿ, ಕಮಲಾಪುರ, ಸಂಡೂರು, ಹೆಚ್ ಬಿ, ಹಳ್ಳಿ, ತಂಬ್ರಹಳ್ಳಿ, ಕೊಡ್ಲಿಗಿ, ಗುಡೇಕೋಟೆ, ಗಾದಿಗನೂರು, ಕೊಟ್ಟೂರು, ಹಡಗಲಿ, ಹಿರೇಹಡಗಲಿ ಹಾಗೂ ಇಟಗಿ ಪೊಲೀಸ್ ಕಾಲೋನಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲು 177.52 ಲಕ್ಷ ರೂ ಮಂಜೂರು ಮಾಡಲಾಗಿದೆ.