ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ. ಜೂ.22: ನಗರದ ನೂತನ ಪೋಲಿಸ್ ಠಾಣೆಯ ಸಭಾಂಗಣದಲ್ಲಿ ಬಳ್ಳಾರಿ ಜಿಲ್ಲಾ ಪೋಲಿಸ್ ವತಿಯಿಂದ ಬಕ್ರೀದ್ ಹಬ್ಬದ ಶಾಂತಿ ಸಭೆಯನ್ನು ನಡೆಸಲಾಯಿತು.
 ಬಕ್ರೀದ್ ಹಬ್ಬದ ವಿಶೇಷತೆಯ ಬಗ್ಗೆ ಮುಸ್ಲಿಂ ಮುಖಂಡರು ಹೇಳಿದರು.
 ಜೂ.29ರಂದು ನಡೆಯುವ ಬಕ್ರೀದ್ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು. ತ್ಯಾಗ ಬಲಿದಾನದ ಸಂಕೇತವೇ ಈ ಬಕ್ರೀದ್ ಹಬ್ಬವಾಗಿದೆ ಅದ್ದರಿಂದ ಸರ್ಕಾರದ ಆದೇಶವನ್ನು ಮುಸ್ಲಿಂ ಸಮುದಾಯದ ಎಲ್ಲರೂ ಅನುಸರಿಸಬೆಕೇಂದು  ಡಿ.ವೈ.ಎಸ್.ಪಿ ವೆಂಕಟೇಶ ತಿಳಿಸಿದರು.
 ಪ್ರ್ರೊ. ಡಿ.ವೈ.ಎಸ್.ಪಿ  ಉಮಾರಾಣಿ, ನಗರದ ಸಿ.ಪಿ.ಐ ಯಶವಂತ ಬಿಸ್ನಳ್ಳಿ ಮತ್ತು  ಪಿ.ಎಸ್.ಐ ಗಳಾದ ತೆಕ್ಕಲಕೋಟೆ ಪೋಲಿಸ್ ಠಾಣೆಯ ಅರುಣ್ ಕುಮಾರ್ ರಾಥೋಡ್,  ಸಿರಿಗೇರಿ ಠಾಣೆಯ ಭರತ್ ಹಾಗೂ ತಾಲ್ಲೂಕಿನ ಮುಸ್ಲಿಂ ಸಮುದಾಯದ ಮುಖಂಡರು ಇದ್ದರು.