ಪೊಲೀಸ್ ಠಾಣೆಗೆ ಹಾಜರಾದ ಹಂಸಲೇಖ

ಬೆಂಗಳೂರು,ನ.೨೫-ನಾದಬ್ರಹ್ಮ ಹಂಸಲೇಖ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾದಾಗ ಠಾಣೆಯ ಮುಂಭಾಗ ಪರ-ವಿರೋಧಿಗಳ ಹೈಡ್ರಾಮ ನಡೆಯಿತು.
ಹಂಸಲೇಖ ಪರ ಹಾಗೂ ವಿರೋಧದ ಗುಂಪುಗಳು ಬಸವನಗುಡಿ ಪೊಲೀಸ್ ಠಾಣೆಯ ಮುಂಭಾಗ ಸೇರಿ ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗ ತೊಡಗಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.
ಠಾಣೆಯ ಮುಂಭಾಗ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
ಈ ನಡುವೆ ನಟ ಚೇತನ್ ಹಂಸಲೇಖ ಅವರೊಂದಿಗೆ ತಾವೂ ಆಗಮಿಸುವುದಾಗಿ. ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಇದು ವಾಕ್? ಸ್ವತಂತ್ರ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ಪರವಾದ ಹೋರಾಟವಾಗಿದ್ದು, ಸಂವಿಧಾನದ ವಿರೋಧಿಗಳು ಮತ್ತು ಬ್ರಾಹ್ಮಣ ಶಕ್ತಿಗಳು ಇವರನ್ನು ಅಪರಾಧೀಕರಿಸುತ್ತಿದ್ದಾರೆ. ನಿಮ್ಮನ್ನೆಲ್ಲಾ ಅಲ್ಲೇ ಭೇಟಿ ಆಗುತ್ತೇನೆ’ ಚೇತನ್ ಎಂದು ತಿಳಿಸಿದ್ದಾರೆ. ಇದೀಗ ಭಜರಂಗದಳ ಚೇತನ್ ಆಗಮಿಸುವ ಕುರಿತಂತೆ ಪ್ರತಿಕ್ರಿಯಿಸಿದ್ದು, ವಿರೋಧ ವ್ಯಕ್ತಪಡಿಸಿದೆ. ಚೇತನ್ ಬಂದರೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ ಎಂದು ಭಜರಂಗದಳದ ಕಾರ್ಯಕರ್ತರು ಬಸವನಗುಡಿ ಠಾಣೆ ಬಳಿ ಜಮಾಯಿಸಿದ್ದಾರೆ.
ಭಜರಂಗದಳ ಮುಖಂಡ ತೇಜಸ್ ಚೇತನ್ ಆಗಮನದ ಕುರಿತು ಮಾತನಾಡಿ, “ಸಂಗೀತ ನಿರ್ದೇಶಕ ಹಂಸಲೇಖ ಕ್ಷಮೆ ಕೇಳಿದರೆ ಸಾಕಾಗುವುದಿಲ್ಲ ಬೇಷರತ್?? ಕ್ಷಮೆಯಾಚಿಸಬೇಕು. ಈ ವಿಚಾರದಲ್ಲಿ ನಟ ಚೇತನ್ ಮಧ್ಯಪ್ರವೇಶ ಅಗತ್ಯವಿಲ್ಲ” ಎಂದಿದ್ದಾರೆ.
ಚೇತನ್ ನಡೆಯನ್ನು ಟೀಕಿಸಿರುವ ತೇಜಸ್, “ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಅವರು ಈ ದೇಶದ ನಾಗರಿಕನೇ ಅಲ್ಲ. ಚೇತನ್‌ರನ್ನು ಠಾಣೆಯೊಳಗೆ ಬಿಟ್ಟುಕೊಳ್ಳಲೇಬಾರದು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.