ಪೊಲೀಸ್ ಠಾಣೆಗೆ ಬ್ಯಾರಿಕೇಡ್ ಕೊಡುಗೆ


ಸಂಜೆವಾಣಿ ವಾರ್ತೆ
ಕಂಪ್ಲಿ, ಜು.30: ರಸ್ತೆ ಸಂಚಾರ  ನಿಯಮ ಪಾಲನೆ ಸಂದಭ೯ದಲ್ಲಿ ಅನುಕೂಲವಾಗಲೆಂದ ಕಂಪ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದವರು ಇಲ್ಲಿನ ಪೊಲೀಸ್ ಠಾಣೆ ಗೆ 10 ಬ್ಯಾರಿಕೇಡ್ ಗಳನ್ನು ಕೊಡುಗೆಯಾಗಿ ನೀಡಿದರು. 
ಅಕ್ಕಿ ಗಿರಣಿ ಮಾಲೀಕರ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷ  ಕೆ.ಎಂ.ಹೇಮಯ್ಯಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಬ್ಯಾರಿಕೇಡ್ ಕೊಡುಗೆ ನೀಡಿದರೆ ಅನುಕೂಲ ವಾಗಲಿದೆಯೆಂದು ಪ್ರಸ್ತಾವನೆ ಸಲ್ಲಿಸಿದ್ದರಿಂದ ಇಲಾಖೆ ಗೆ ಅನುಕೂಲವಾಗಲೆಂದು ಅಕ್ಕಿ ಗಿರಣಿ ಮಾಲೀಕರ ಸಂಘದ ವತಿಯಿಂದ 10 ಬ್ಯಾರಿಕೇಡ್ ಗಳನ್ನು ಕೊಡುಗೆಯಾಗಿ ನೀಡಿದ್ದೇವೆ  ಎಂದು ತಿಳಿಸಿದರು.
ಸಿ.ಪಿ.ಐ ಸುರೇಶ್ ಎಚ್. ತಳವಾರ್ 10 ಬ್ಯಾರಿಕೇಡ್ ಗಳನ್ನು ಪೊಲೀಸ್ ಇಲಾಖೆಗೆ ಕೊಡುಗೆಯಾಗಿ ಪಡೆದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಡಿ.ವಿ.ಸುಬ್ಬಾರಾವು, ಜಿ. ಪಿ. ಶ್ರೀ ನಿವಾಸ್, ಕಟ್ಟೆ ಸುನಿಲ್, ಬಿ. ರವೀಂದ್ರ ನಾಥ, ತಿಪ್ಪೇಸ್ವಾಮಿ, ತುಳಸಿ ರಾಮ್ ಉಬಾಳೆ, ಕೆ. ವೀರಾಂಜನೇಯಲು, ಪೊಲೀಸ್ ಸಿಬ್ಬಂದಿ ಜಿ. ಮಂಜುನಾಥ ಇದ್ದರು.