ಪೊಲೀಸ್ ಠಾಣೆಗೆ ಆಕ್ಸಿಜನ್ ಕಾನ್ಸಂಟ್ರೇಟರ್ ದೇಣಿಗೆ

ಸಿರುಗುಪ್ಪ ಜೂ 01 : ನಗರದ ವಿಷ್ಣು ವಿಲಾಸ ಸೌಹಾರ್ಧ ಪತ್ತಿನ ಸಹಕಾರಿ ನಿಯಮಿತ ವತಿಯಿಂದ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಪೊಲೀಸ್ ಠಾಣೆಗೆ ಆಕ್ಸಿಜನ್ ಕಾನ್ಸಂಟ್ರೇಟರ್‍ನ್ನು ಅಧ್ಯಕ್ಷ ಹೆಚ್.ಜೆ. ಹನುಮಂತಯ್ಯ ಅವರು ಠಾಣೆಯ ವಲಯ ವೃತ್ತ ನಿರೀಕ್ಷಕ ಕಾಳಿಕೃಷ್ಣ ಅವರಿಗೆ ಹಸ್ತಾಂತರಿಸಿದರು.
ಇದೆ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚ ತಾಲೂಕು ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ನಿದೇರ್ಶಕರಾದ ನಾಗರಾಜ, ಶ್ರೀರಾಮ, ವಿಶ್ವನಾಥ, ಸುರೇಶ, ಪ್ರಕಾಶ ಇದ್ದರು.