ಪೊಲೀಸ್ ಚೌಕಿಗೆ ಆಗ್ರಹ

ಹುಬ್ಬಳ್ಳಿ,ಡಿ23: ಇತ್ತಿಚಿಗೆ ನಗರದ ದೇಶಪಾಂಡೆನಗರದಲ್ಲಿ ಹಲವು ತಿಂಗಳ ಹಿಂದೆ ಯುವಕರ ತಂಡವೊಂದು ಯುವಕನನ್ನು ಬರ್ಭರವಾಗಿ ಕೊಚಿ ಕೊಲೆ ಮಾಡಿದ್ದ ಘಟನೆಯಿಂದ ಇಲ್ಲಿನ ನಾಗರಿಕರು ಭಯಗೊಂಡಿದ್ದರು, ಇದಿಗ ಮತ್ತೆ ಇಂತಹದೊಂದು ಘಟನೆ ನಡೆದಿದ್ದು, ಯುವಕನೊಬ್ಬ ಯುವತಿಯನ್ನು ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಯುವತಿ ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಯೊಂದರಲ್ಲಿ ಚಿಕಿತ್ಸ ಪಡೆಯುತ್ತಿದ್ದಾಳೆ. ಇಂತಹ ಕೃತ್ಯಗಳು ಮೇಲಿಂದ ಮೇಲೆ ಈ ಬಡಾವಣೆಯಲ್ಲಿ ನಡೆಯುತ್ತಿರುವುದರಿಂದ ಇಲ್ಲಿನ ಪ್ರಜ್ಞಾವಂತ ನಾಗರಿಕರು ಆತಂಕಕ್ಕೆ ಈಡಾಗಿದ್ದಾರೆ. ನಗರದ ಪ್ರತಿಷ್ಠಿತ ಬಡಾವಣೆಯಾದ ದೇಶಪಾಂಡೆನಗರ ಇಂತಹ ಕೃತ್ಯಗಳ ನಡೆಯುವದರಿಂದ ಇಲ್ಲಿನ ಜನರಿಗೆ ಅಭದ್ರತೆ ಕಾಡುತ್ತಿದೆ ಎಂದು ಹೇಳಿರುವ ಬಿಜೆಪಿ ವಕ್ತಾರ ದೇಶಪಾಂಡೆನಗರದ ಮುಖಂಡರಾದ ರವಿ ನಾಯಕ ಪೋಲಿಸ್ ಚೌಕಿ ನಿರ್ಮಿಸಲು ಪೋಲಿಸ್ ಆಯುಕ್ತರಿಗೆ ಆಗ್ರಹಿಸಿದ್ದಾರೆ.