ಪೊಲೀಸ್ ಕ್ಯಾಂಟೀನ್‌ಗೆ ಆಹಾರ ಸಾಮಗ್ರಿ ಹಸ್ತಾಂತರ

ಮಂಗಳೂರು, ಮೇ ೨೦- ಉರ್ವಾಸ್ಟೋರ್‌ನಲ್ಲಿರುವ ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದಲ್ಲಿ ಶ್ರೀ ಬಸವೇಶ್ವರ ಜಯಂತಿಯ ಆಚರಣೆಯ ಅಂಗವಾಗಿ ಡಾ. ಎಸ್.ಪಿ ಕಲಬುರ್ಗಿಯವರ ಸ್ಮರಣಾರ್ಥ ಮಂಗಳೂರು ಪೋಲಿಸ್ ಕಮೀಷನರ್‌ರವರು ನಡೆಸುತ್ತಿರುವ ಪೊಲೀಸ್ ಕ್ಯಾಂಟೀನ್ ಗೆ ೨೫,೦೦೦ ರೂಗಳ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭ ಸಂಘದ ಪ್ರದಾನ ಕಾರ್ಯದರ್ಶಿ ಎಚ್,ಎಸ್ ಗುರುಮೂರ್ತಿ ಹಾಗೂ ನಿರ್ದೇಶಕರುಗಳಾದ ಚನ್ನೇಶ್, ಕರಿಬಸಪ್ಪ, ಮಲ್ಲಿಕಯ್ಯ, ವಿವೇಕ್ ಶೆಟ್ಟರ್, ನಿರ್ಮಲ, ಜ್ಯೋತಿ ಕಲಬುರ್ಗಿ, ಪ್ರವೀಣ್. ಎಸ್.ಡಿ, ಪಾಟೀಲ್. ಲೋಹಿತ್ ವೈ ಉಪಸ್ಥಿತರಿದ್ದರು.