ಪೊಲೀಸ್ ಕಾರ್ಯಚರಣೆ ೧೫ ಬೈಕ್ ವಶ

ದೇವದುರ್ಗ,ಮೇ.೦೮- ತಾಲೂಕು ಸೇರಿ ವಿವಿಧೆಡೆ ಬೈಕ್ ಕಳ್ಳತನ ಮಾಡಿ ಅಕ್ರಮ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿ ೧೫ವಿವಿಧ ಕಂಪನಿಯ ದ್ವೀಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಪಲಕನಮರಡಿ ಗ್ರಾಮದ ಶಿವರಾಜ ಹೊನ್ನಪ್ಪ ಬಂಧಿತ ಆರೋಪಿ.
ಆರೋಪಿ ದೇವದುರ್ಗ, ಜಾಲಹಳ್ಳಿ, ಲಿಂಗಸುಗೂರು, ರಾಯಚೂರು, ಸಿಂಧನೂರು, ಸುರಪುರ, ಕಕ್ಕೆರಾ, ಗಬ್ಬೂರು ಸೇರಿ ವಿವಿಧೆಡೆ ಕಳ್ಳತನ ಮಾಡಿದ್ದ ಸುಮಾರು ೭.೮೫ಲಕ್ಷ ರೂ. ಮೌಲ್ಯದ ೧೫ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ವಾಹನ ತಪಾಸಣೆ ವೇಳೆ ಪ್ರಕರಣ ಬೆಳಕಿಗೆ ಬಂಧಿದೆ.
ಕಾರ್ಯಾಚರಣೆಯಲ್ಲಿ ಪಿಎಸ್‌ಐ ಉಮೇರಾ ಭಾನು, ಸಿಬ್ಬಂದಿ ನಾಗರಾಜ, ಶಿವಣ್ಣ, ಮರಸಣ್ಣ, ರಿಯಾಜ್, ಚಿದಾನಂದ, ಶಿವಪ್ಪ, ಬಸವರಾಜ, ಪ್ರಕಾಶ, ಸಂಗಪ್ಪ ಇದ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪಿಐ ಕೆ.ಹೊಸಕೇರಪ್ಪ ತಿಳಿಸಿದ್ದಾರೆ.