ಪೊಲೀಸ್ ಇಲಾಖೆಯಲ್ಲಿ ಹೆಸರು ಮಾಡಲು ಸಾಧ್ಯ

ಗದಗಏ3 :ಖಾಕಿ ಧರಿಸುವ ಅವಕಾಶ ಪ್ರತಿಯೊಬ್ಬರಿಗೂ ದೊರೆಯುವುದಿಲ್ಲ ಸಿಕ್ಕ ಅವಕಾಶವನ್ನು ಪ್ರಾಮಾಣಿಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಿವೃತ್ತ ಪೆÇಲೀಸ್ ಇನ್ಸಪೆಕ್ಟರ ನಾಗರಾಜ ಎಚ್.ಮೈಲಾರ ಹೇಳಿದರು.
ಗದಗ ಜಿಲ್ಲಾ ಪೆÇಲೀಸ್ ಇಲಾಖೆಯಿಂದ ಗದಗ-ಬೆಟಗೇರಿಯ ಹಳೇ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕವಾಯತ್ ಮೈದಾನದಲ್ಲಿ ಜರುಗಿದ ಪೆÇಲೀಸ್ ಧ್ವಜ ದಿನಾಚರಣೆಯ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಬೇರೆ ಇಲಾಖೆಗಳಿಗಿಂತ ಪೆÇಲೀಸ್ ಇಲಾಖೆಯಲ್ಲಿ ಹೆಸರು ಮಾಡಲು ಸಾಕಷ್ಟು ಅವಕಾಶಗಳಿದ್ದು, ಇಂತಹ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮಾಹಿತಿ ಸಂವಹನಕ್ಕಾಗಿ ಪೆÇಲೀಸ್ ಇಲಾಖೆ ಇಂದು ಅನೇಕ ಆಧುನಿಕ ಉಪಕರಣಗಳೊಂದಿಗೆ ಅಭಿವೃದ್ಧಿಗೊಂಡಿದೆ. ಇಲಾಖೆ ವತಿಯಿಂದ ಜರುಗುವ ತರಬೇತಿಗಳನ್ನು ಪಡೆಯುವ ಮನೋಭಾವವನ್ನು ಎಲ್ಲ ಸಿಬ್ಬಂದಿಗಳು ಹೊಂದಬೇಕು. ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಅಧಿಕಾರಿ ಸಿಬ್ಬಂದಿ ತಮ್ಮ ಕೆಲಸಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ತಮ್ಮ ಕುಟುಂಬ ಸದಸ್ಯರಿಗೂ ನೀಡಿ ಅವರೊಂದಿಗೂ ಹೆಚ್ಚಿನ ಸಮಯ ಕಳೆಯಲು ಮುಂದಾಗಬೇಕೆಂದು ಎಂದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಮಾತನಾಡಿ, ಸಮಾಜದ ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲು-ರಾತ್ರಿ ಎನ್ನದೇ ತಮ್ಮ ಕುಟುಂಬವನ್ನು ಬದಿಗೊತ್ತಿ ಕಷ್ಟಕರ ಪರಿಸ್ಥಿತಿಯಲ್ಲಿಯೂ ಜನರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಪೆÇಲೀಸ್ ಇಲಾಖೆಯಿಂದ ಆಗುತ್ತಿದೆ. ದೇಶದ ರಕ್ಷಣೆಗಾಗಿ ಗಡಿ ಕಾಯುವ ಸೈನಿಕರಂತೆ ಸಮಾಜದಲ್ಲಿ ನಡೆಯುವ ಅನೈತಿಕ ಚಟುವಟಿಕೆಗಳನ್ನು ತಡೆಯುವಂತಹ ಮಹತ್ವದ ಕಾರ್ಯವನ್ನು ಇಲಾಖೆ ನಿರ್ವಹಿಸುತ್ತಿದೆ. ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಈ ಸಮಯದಲ್ಲಿ ಸ್ಮರಿಸಿಕೊಳ್ಳುವ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ವರ್ಷ ಧ್ವಜ ದಿನಾಚರಣೆ ಸಂದರ್ಭದಲ್ಲಿ ಪೆÇಲೀಸ್ ಧ್ವಜ ಮಾರಾಟ ಮಾಡಿ ಬಂದಂತಹ ಹಣದಲ್ಲಿ ಶೇ.50 ರಷ್ಟು ಹಣವನ್ನು ನಿವೃತ್ತ ಪೆÇಲೀಸ್ ಅಧಿಕಾರಿಗಳ ಕಲ್ಯಾಣ ನಿಧಿಗೆ ಶೇ.25ರಷ್ಟು ಘಟಕದ ಪೆÇಲೀಸ್ ಕಲ್ಯಾಣ ನಿಧಿಗೆ ಹಾಗೂ ಶೇ.25ರಷ್ಟು ಹಣವನ್ನು ಕೇಂದ್ರ ಕಲ್ಯಾಣ ನಿಧಿಗೆ ಜಮೆ ಮಾಡಲಾಗುತ್ತದೆ. ಜಮೆಯಾದ ಈ ನಿಧಿಯಿಂದ ಸೇವೆಯಲ್ಲಿರುವ ಹಾಗೂ ನಿವೃತ್ತ ಪೆÇಲೀಸ್ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯ ಮತ್ತು ಮಕ್ಕಳ ವಿದ್ಯಾಭ್ಯಾಸ ಹಾಗೂ ಪೆÇಲೀಸ್ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಲಾಗುತ್ತದೆ ಎಂದರು.
ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲೆಯ ನಿವೃತ್ತ ಪೆÇಲೀಸ್ ಅಧಿಕಾರಿಗಳ ಕ್ಷೇಮನಿಧಿ ಸಮಿತಿ ಸಭೆ ಜರುಗಿಸಿ, ನಿವೃತ್ತ ಪೆÇಲೀಸ್ ಅಧಿಕಾರಿಗಳ ಕುಂದುಕೊರತೆಗಳನ್ನು ಆಲಿಸಿ ಅವುಗಳನ್ನು ನಿವಾರಿಸಲು ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಪ್ರಸಕ್ತ ವರ್ಷ ಏಪ್ರಿಲ್ 2020 ರಿಂದ ಇಲ್ಲಿಯವರೆಗೆ 31 ಜನ ಪೆÇಲೀಸ್ ಅಧಿಕಾರಿ, ಸಿಬ್ಬಂದಿಯವರಿಗೆ ನಿವೃತ್ತ ಪೆÇಲೀಸ್ ಅಧಿಕಾರಿಗಳ ಕ್ಷೇಮ ನಿಧಿಯಿಂದ ಒಂದು ಲಕ್ಷ ಇಪ್ಪತ್ತೇಳು ಸಾವಿರ ರೂ.ಗಳ ವೈದ್ಯಕೀಯ ಧನ ಸಹಾಯ, ಹಾಗೂ ಮರಣ ಹೊಂದಿದ 9 ಜನ ನಿವೃತ್ತ ಪೆÇಲೀಸ್ ಅಧಿಕಾರಿಗಳ ಅಂತ್ಯ ಸಂಸ್ಕಾರಕ್ಕೆ ಎಂಭತ್ತೈದು ಸಾವಿರ ರೂ.ಗಳನ್ನು ಪಾವತಿಸಲಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಡಿ.ಸಿ.ಆರ್.ಬಿ. ಡಿ.ಎಸ್.ಪಿ ವಿದ್ಯಾನಂದ ನಾಯಕ ಅವರ ಮಾರ್ಗದರ್ಶನದಲ್ಲಿ ಪಥ ಸಂಚಲನ ಜರುಗಿತು. ನಂತರ ಪೆÇಲೀಸ್ ಧ್ವಜ ವಿತರಿಸಲಾಯಿತು.
ಜಿಲ್ಲೆಯ ಹಿರಿಯ ಪೆÇಲೀಸ್ ಅಧಿಕಾರಿ ಸಿಬ್ಬಂದಿಗಳು, ನಿವೃತ್ತ ಪೆÇಲೀಸ್ ಅಧಿಕಾರಿ ಸಿಬ್ಬಂದಿಗಳು, ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನರಗುಂದ ಡಿ.ಎಸ್.ಪಿ ಶಂಕರ ರಾಗಿ ವಂದಿಸಿದರು.