ಪೊಲೀಸ್ ಅಧಿಕಾರಿ-ಸಿಬ್ಬಂದಿಗಳ ಮೇಲೆ ಕ್ರಮಕೈಗೊಳ್ಳುವಂತೆ ಕಂದಾಯ ಇಲಾಖೆ ಮನವಿ

ಕಲಬುರಗಿ:ಮೇ.29: ಕಂದಾಯ ಇಲಾಖಾ ನೌಕರರಿಗೆ ಪೊಲೀಸ್ ಇಲಾಖಾ ಅಧಿಕಾರಿಗಳು- ಸಿಬ್ಬಂದಿಗಳು ಅಡೆ ತಡೆ ಮಾಡುತ್ತಿದ್ದಾರೆಂದು ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘ ಕಲಬುರಗಿ ಜಿಲ್ಲಾ ಘಟಕವು ಆರೋಪಿಸಿ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು ಎಂದು ಸಂಘದ ಅಧ್ಯಕ್ಷ ಶರಣಬಸವ ಆರ್.ಹೊಸಮನಿ ಅವರು ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಕಂದಾಯ ಇಲಾಖೆಯ ಎಲ್ಲಾ ವರ್ಗದ ನೌಕರರಿಗೆ ಹಾಜರಾಗುವಂತೆ ಆದೇಶಿಸಲಾಗಿದ್ದು, ಆದರಂತೆ ಎಲ್ಲರೂ ವಹಿಸಲಾದ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಕಂದಾಯ ಇಲಾಖಾ ನೌಕರಿಗೆ ತಾಲೂಕ ಮಟ್ಟದಲ್ಲಿ ವಾಸಿಸಲು ಸೂಕ್ತ ಸೌಲಭ್ಯವಿಲ್ಲದಿರುವುದರಿಂದ ಬಹುತೇಕ ನೌಕರರು ಕಲಬುರಗಿ ನಗರದಲ್ಲಿ ವಾಸಿಸುತ್ತಿದ್ದು ಪ್ರತಿ ದಿನ ತಮ್ಮ ತಮ್ಮ ತಾಲೂಕುಗಳಿಗೆ ಬಸ್ಸು ಮತ್ತು ರೈಲುಗಳ ಮುಖಾಂತರ ಪ್ರವಾಸ ಮಾಡುತ್ತಿದ್ದರು. ಪ್ರಸ್ತುತವಗಿ ಬಸ್ಸುಗಳು ಮತ್ತು ರೈಲುಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುತ್ತಿರುವ ಪ್ರಯುಕ್ತ ಎಲ್ಲವು ಸ್ಥಗಿತಗೊಳಿಸಿರುವುದಿಂದ ನಗರದಲ್ಲಿ ವಾಸಿಸುತ್ತಿರುವ ನೌಕರರು ತಮ್ಮ ತಮ್ಮ ವೈಯಕ್ತಿಕ ವಾಹನಗಳಿಂದ ಪ್ರವಾಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಇಲಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ನಮ್ಮ ನೌಕರರಿಗೆ ತಡೆದು ವಿಚಾರಿಸಿದಾಗ ನಮ್ಮ ನೌಕರರು ನಾವು ಕಂದಾಯ ಇಲಾಖಾ ನೌಕರರೆಂದು ಹೇಳಿ ನಮ್ಮಗೆ ನೀಡಿದ ಗುರುತಿನ ಚೀಟಿಯನ್ನು ತೋರಿಸಿದರು ಸಹ ಅದಕ್ಕೆ ಯಾವುದೇ ಮಾನ್ಯತೆ ನೀಡದೆ ವಾಹನಗಳನ್ನು ಜಪ್ತಿ ಮಾಡಿ ಅವರಿಗೆ ದಂಡವನ್ನು ವಿಧಿಸಿರುತ್ತಾರೆಂದು ಮನವಿ ಪತ್ರದಲ್ಲಿ ನಮೋದಿಸಿದ್ದಾರೆ.
ಇಂತಹ ಹಲವಾರು ಪ್ರಕರಣಗಳು ಸಂಘದ ಗಮನಕ್ಕೆ ಬಂದರು ನಾವು ಇಲ್ಲಿಯ ವರೆಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವುದಿಲ್ಲಾ ಇದಕ್ಕೆ ಕಾರಣ ಜಿಲ್ಲಾಧಿಕಾರಿಗಳು ಕೂಡ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಕೆಲಸದಲ್ಲಿ ನಿರಂತರವಾಗಿ ತೋಡಗಿವುದುರಿಂದ ಡಿಸಿ ಅವರಿಗೆ ನಾವು ಸಣ್ಣ ಪುಟ್ಟ ತೊಂದರೆಗಳನ್ನು ಅನುಭವಿಸುತ್ತಿರುದನ್ನು ಗಮನಕ್ಕೆ ತಂದು ವಿನಾಕಾರಣ ತೊಂದರೆ ನೀಡಬಾರದೆಂಬ ಉದ್ದೇಶವಾಗಿತ್ತು. ಆದರೆ ಪ್ರತಿ ದಿನ ಪೊಲೀಸ್ ಇಲಖೆ ಅಧಿಕಾರಿಗಳು ಸಿಬ್ಬಂದಿಗಳು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ತೊಂದರೆ ನೀಡುತ್ತಿರುವುದರಿಂದ ಇವಾಗ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲೇಬೇಕಾಯಿತು ಎಂದು ತಿಳಿಸಿದರು.
ಈ ಹಿಂದೆಯು ಸಹ ಕಲಬುರಗಿ ತಾಲೂಕಿನ ಗ್ರಾಮಲೆಕ್ಕಿಗ ಕೆಂಚಪಪ್ ಅವರಿಗೂ ಸಹ ವಿನಾಕಾರಣ ಅವರನ್ನು ತಡೆದು ತೊಂದರೆ ಉಂಟು ಮಾಡಿರುತ್ತಾರೆ. ಆವಾಗ ಸದರಿ ವಿಷಯನ್ನು ಕಲಬುರಗಿ ತಹಸೀಲ್ದಾರರಿಗೆ ಹಾಗೂ ಸಹಾಯಕ ಆಯುಕ್ತರಿಗೆ ಗಮನಕ್ಕೆ ತರಲಾಗಿತ್ತು. ನಗರದ ಪೋಲಿಸ್ ಆಯುಕ್ತರಿಗೆ ಖುದ್ದಾಗಿ ಭೇಟಿ ಮಾಡಿ ಕಂದಾಯ ಇಲಾಖಾ ನೌಕರಿಗೆ ವಿನಾಕಾರಣ ತಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಬಾರದೆಂದು ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿತ್ತು. ಅದರಂತೆ ಪೋಲಿಸ್ ಆಯುಕ್ತರು ಕಲಬುರಗಿ ಪೊಲೀಸ್ ಅಧಿಕಾರಿಗಳಿಗೆ ಹಗೂ ಸಿಬ್ಬಂದಿಗಯವರಿಗೆ ಕಂದಾಯ ಇಲಾಖಾ ನೌಕರರಿಗೆ ತೊಂದರೆ ನೀಡಬಾರದೆಂದು ಸೂಚಿಸಿರುತ್ತಾರೆ. ಆದರೂ ಸಹ ಪೊಲೀಸ್ ಇಲಾಖಾ ಅಧಿಕಾರಿಗಳು- ಸಿಬ್ಬಂದಿಗಳು ಕಂದಾಯ ಇಲಾಖಾ ನೌಕರರಿಗೆ ವಿನಾಕಾರಣ ತಡೆದು ತೊಂದರೆ ಉಂಟು ಮಾಡುವುದನ್ನು ಹಾಗೂ ನಿಂಧಿಸುವುದು ಮುಂದುವರೆಸಿಕೊಂಡು ಬುರುತ್ತಿರುವುದನ್ನು ಸಂಘವು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಕಂದಾಯ ಇಲಾಖಾ ನೌಕರರು ಅನುಭವಿಸುತ್ತಿರುವ ತೊಂದರೆಯಿಂದ ಮುಕ್ತಗೊಳಿಸಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡುತ್ತೇವೆ. ಹಾಗೂ ಸರ್ಕಾರದ ಆದೇಶಕ್ಕೆ ಮಾನ್ಯತೆ ನೀಡದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಸಂಘವು ಒತ್ತಾಯಿಸುತ್ತಿದೆ. ಒಂದು ವೇಳೆ ಯಾವುದೇ ಕ್ರಮ ಜರುಗಿಸದಿದ್ದಲ್ಲಿ ಎಲ್ಲಾ ಕಂದಾಯ ಇಲಾಖಾ ನೌಕರರು ಸಾಮೂಹಿಕವಾಗಿ ಕೆಲಸ ಕಾರ್ಯಗಳು ಸ್ಥಗಿತಗೊಳಿಸಲಾವುದೇಂದು ತಿಳಿಸಿದ್ದರು.